Breaking: ಚಳ್ಳಕೆರೆಯಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರ ಆತ್ಮಹತ್ಯೆ
ಚಿತ್ರದುರ್ಗ, ನವೆಂಬರ್ 3: ನೀರಿನಲ್ಲಿ ವಿಷ ಬೆರೆಸಿಕೊಂಡು ಕುಡಿದು ಮೂವರು ಮಹಿಳೆಯರು ಸಾವನ್ನಪ್ಪಿದ ದಾರುಣ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ತಡರಾತ್ರಿ ನಡೆದಿದೆ.
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಒಂದೇ ಕುಟುಂಬದ ಮೂರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ದಲಿತ ಕಾಲೋನಿಯ ಮಂಗೇರ ತಿಪ್ಪಮ್ಮ(7೦).ಮಾರಕ್ಕ (45).ದ್ಯಾಮಕ್ಕ(43) ಆತ್ಮಹತ್ಯೆಗೆ ಶರಾಣಾಗಿದ್ದಾರೆ. ಇವರೆಲ್ಲರೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ..
ಮೂರು ಜನರು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಶಾಲು ಹೊದ್ದುಕೊಂಡು ಹೊರಗೆ ಹೋಗಿ ಬಂದು ಮನೆಯೊಳಗೆ ಹೋದವರು ಬೆಳಗಾದರೂ ಬಾಗಿಲು ತೆಗೆಯದೆ. ಹೊರಗೂ ಬಾರದೆ ಇರುವುದರಿಂದ ಅನುಮಾನಗೊಂಡ ಅಕ್ಕ ಪಕ್ಕದವರು ಕದ ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕಿಟಕಿಯಿಂದ ನೀರು ಎರಚಿದರೂ ಎಚ್ಚರವಾಗದ ಕಾರಣ ಚಳ್ಳಕೆರೆ ಪೋಲಿಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ದಾವಿಸಿದ ಚಳ್ಳಕೆರೆ ಪೋಲಿಸರು ಬಾಗಿಲು ಹೊಡೆದು ಒಳ ಪ್ರವೇಶ ಮಾಡಿದಾಗ ಮೂವರು ಸಾವನ್ನಪ್ಪಿರುವುದು ತಿಳಿದುಬಂದಿದೆ. ನೀರಿನಲ್ಲಿ ವಿಷಬೆರೆಸಿ ಕುಡಿದಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ಅಕ್ಟೋಬರ್ 6 ರಂದು ತಿಪ್ಪಮ್ಮ ಪತಿ ವರ್ಷದ ಹಿಂದೆ ಹಾಗೂ ಮಗ ದ್ಯಾಮಣ್ಣ(46) ಅನಾರೋಗ್ಯದಿಂದ ಮೃತಪಟ್ಟಿದ್ದನು. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಇದರ ಜೊತೆಗೆ ಇಬ್ಬರು ಹೆಣ್ಣು ಮಕ್ಕಳು ಕೌಟುಂಬಿಕ ಕಲಹದಿಂದ ತವರು ಸೇರಿಕೊಂಡಿದ್ದರು. ಗಂಡು ದಿಕ್ಕಿಲ್ಲದ ಮನೆಯಲ್ಲಿ ಕೌಟುಂಬಿಕ ಜೀವನ ನಿರ್ವಹಣೆ ಕಷ್ಟವಾಗಿತ್ತು. ಇದರಿಂದ ಮೂವರು ಮಹಿಳೆಯರು ಮಾನಸಿಕವಾಗಿ ಕುಗ್ಗಿದ್ದರು ಎಂದು ತಿಳಿದುಬಂದಿದೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications