ಚಾಕುವಿನಿಂದ ಇರಿದು 25 ಲಕ್ಷ ದೋಚಿ ಪರಾರಿ
ಚಿತ್ರದುರ್ಗ, ಜೂನ್ 04: ಉದ್ಯಮಿಯೊಬ್ಬರಿಗೆ ಚಾಕು ಇರಿದು 25 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ತಡ ರಾತ್ರಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಸಂಜೀವಿನಿ ಆಸ್ಪತ್ರೆ ಬಳಿ ಇರುವ ಜಯನಗರದಲ್ಲಿ ನಡೆದಿದೆ.
ಹಿರಿಯೂರಿನ ಉದ್ಯಮಿ ವಲಿಸಾಬ್ ಎಂಬುವರು ಹೊಸದುರ್ಗಕ್ಕೆ ಗುಟ್ಕಾ ವ್ಯಾಪಾರದ ಬಾಕಿ ವಸೂಲಿಗಾಗಿ ತೆರಳಿದ್ದು, ಹಣ ಸಂಗ್ರಹದ ಬಳಿಕ ಖಾಸಗಿ ಬಸ್ ಮೂಲಕ ಹಿರಿಯೂರಿಗೆ ರಾತ್ರಿ ಸುಮಾರು 8 ಗಂಟೆಗೆ ವಾಪಾಸ್ ಆಗಿದ್ದರು. ಬಸ್ ನಿಲ್ದಾಣದಿಂದ ಮನೆಗೆ ಆಟೋದಲ್ಲಿ ತೆರಳುವಾಗ ಈ ಘಟನೆ ನಡೆದಿದೆ
ಮನೆ ಸಮೀಪಿಸುತ್ತಿರುವುದನ್ನ ಅರಿತು ಮೂರು ಜನ ಪಲ್ಸರ್ ಬೈಕ್ ನಲ್ಲಿ ಏಕಾಏಕಿ ಬಂದು ಚಾಕುವಿನಿಂದ ವಲಿಸಾಬ್ ಗೆ ಇರಿದು 25 ಲಕ್ಷ ಹಣವಿರುವ ಬ್ಯಾಗನ್ನು ಲಪಟಾಯಿಸಿಕೊಂಡು ಪಲ್ಸರ್ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ. ದರೋಡೆಕೋರರು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.

ಚಾಕು ಇರಿತಕ್ಕೊಳಗಾಗಿರುವ ಗಾಯಾಳು ವಲಿಸಾಬ್ ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯೂರು ನಗರದ ಸಾರ್ವಜನಿಕ ವಲಯದಲ್ಲಿ ಬೆಚ್ಚಿ ಬೀಳಿಸುವ ಘಟನೆಯಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications