ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರದೇಶವಾರು ದಾಖಲಾದ ಮಳೆ ಪ್ರಮಾಣ, ಮಾಹಿತಿ ಇಲ್ಲಿದೆ ನೋಡಿ
ಚಿತ್ರದುರ್ಗ, ಸೆಪ್ಟೆಂಬರ್, 05: 89 ವರ್ಷಗಳ ಬಳಿಕ ಇದೆ ಮೊದಲ ಬಾರಿಗೆ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದಿದ್ದು, ವೇದಾವತಿ ನದಿ ಅರ್ಧದಷ್ಟು ಮೈದುಂಬಿ ಹರಿಯುತ್ತಿದೆ. ವೇದಾವತಿ ನದಿಯಲ್ಲಿರುವ ಶಿವನ ದೇವಾಲಯ ಜಲಾವೃತವಾಗಿದೆ.
ವಾಣಿ ವಿಲಾಸ ಜಲಾಶಯಕ್ಕೆ 4437 ಕ್ಯೂಸೆಕ್ ಒಳಹರಿವು ಇದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ 132.10 ಅಡಿ ನೀರು ಸಂಗ್ರಹವಾಗಿದೆ. ಇನ್ನು 4282 ಕ್ಯೂಸೆಕ್ ಹೊರಹರಿವು ನೀರನ್ನು ಕೋಡಿ ಮೂಲಕ ಹೊರಹೋಗುತ್ತಿದೆ. ವಾಣಿ ವಿಲಾಸ ಸಾಗರ ಜಲಾಶಯ ಕೋಡಿಯ ನೀರು ಹಿರಿಯೂರಿನ ವೇದಾವತಿ ನದಿ ಮೂಲಕ ಚಳ್ಳಕೆರೆ ತಲುಪಿ, ಅಲ್ಲಿಂದ ಮೊಳಕಾಲ್ಮೂರು ಮುಂದೆ ಟಿಬಿ ಡ್ಯಾಂ ಸೇರಲಿದೆ.
ಇನ್ನು ವಾಣಿ ವಿಲಾಸ ಜಲಾಶಯ 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ. ಕಳೆದ ಎರಡು ತಿಂಗಳಿನಿಂದ ಸುರಿದ ಮಳೆಗೆ ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಸುಮಾರು 12 ಅಡಿಗಳಷ್ಟು ನೀರು ಹರಿದು ಬಂದಿದೆ. 1933ರಲ್ಲಿ 135.25 ಅಡಿ ನೀರು ಸಂಗ್ರಹವಾಗಿದ್ದು, ಆಗ ಮೊದಲ ಬಾರಿಗೆ ಜಲಾಶಯದ ಕೋಡಿ ತುಂಬಿ ಹರಿದಿತ್ತು. ನಂತರ 1934ರಲ್ಲಿ 130.25 ಅಡಿ ನೀರು ಸಂಗ್ರಹವಾಗಿ ಇತಿಹಾಸ ಸೃಷ್ಟಿಸಿತ್ತು.
1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.25 ಅಡಿ ನೀರು ಸಂಗ್ರಹ ಆಗಿತ್ತು. ಬಳಿಕ 2000ನೇ ಇಸವಿಯಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿ ದಾಖಲೆ ಬರೆದಿತ್ತು. ಇದೀಗ 1934ರ ದಾಖಲೆಯನ್ನು ಸರಿಗಟ್ಟಿ 2022ರಲ್ಲಿ 132.10 ಅಡಿ ನೀರು ಸಂಗ್ರಹವಾಗಿದೆ.

ಜಿಲ್ಲೆಯಲ್ಲಿ ಒಟ್ಟು ದಾಖಲಾದ ಮಳೆ
ಜಿಲ್ಲೆಯಾದ್ಯಂತ ಸೆಪ್ಟಂಬರ್ 4ರಂದು ಮಳೆ ವಿವರವನ್ನು ನೋಡುವುದಾದದರೆ ಚಳ್ಳಕೆರೆ ನಗರದಲ್ಲಿ 51 ಮಿಲಿ ಮೀಟರ್ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆ ಆಗಿದೆ. ಉಳಿದಂತೆ ಚಳ್ಳಕೆರೆ ತಾಲೂಕಿನ ಪರಶುರಾಂಪುರ 26.4 ಮಿಲಿ ಮೀಟರ್, ನಾಯಕನಹಟ್ಟಿ 29.4 ಮಿಲಿ ಮೀಟರ್, ಡಿ.ಮರಿಕುಂಟೆ 41.2 ಮಿಲಿ ಮೀಟರ್, ತಳುಕು 44 ಮಿಲಿ ಮೀಟರ್ ಮಳೆ ಆಗಿದೆ.

ಹೊಳಲ್ಕೆರೆಯಲ್ಲಿ ದಾಖಲಾದ ಮಳೆ
ಹೊಳಲ್ಕೆರೆಯಲ್ಲಿ 17.2 ಮಿಲಿ ಮೀಟರ್, ರಾಮಗಿರಿ 4.4 ಮಿಲಿ ಮೀಟರ್, ಚಿಕ್ಕಜಾಜೂರು 22.5 ಮಿಲಿ ಮೀಟರ್, ಬಿ.ದುರ್ಗ 29.4 ಮಿಲಿ ಮೀಟರ್, ಎಚ್.ಡಿ.ಪುರ 11.2 ಮಿಲಿ ಮೀಟರ್, ತಾಳ್ಯದಲ್ಲಿ 14.4 ಮಿಲಿ ಮೀಟರ್ ಮಳೆ ಆಗಿದೆ. ಇನ್ನು ಹೊಸದುರ್ಗದಲ್ಲಿ 19.6 ಮಿಲಿ ಮೀಟರ್, ಬಾಗೂರು 5.3 ಮಿಲಿ ಮೀಟರ್, ಮತ್ತೋಡು 25.4 ಮಿಲಿ ಮೀಟರ್, ಮಾಡದಕೆರೆ 16 ಮಿಲಿ ಮೀಟರ್, ಶ್ರೀರಾಂಪುರದಲ್ಲಿ 32 ಮಿಲಿ ಮೀಟರ್ ಮಳೆ ಆಗಿದೆ. ಹಿರಿಯೂರಿನಲ್ಲಿ 43.6 ಮಿಲಿ ಮೀಟರ್, ಬಬ್ಬೂರಿನಲ್ಲಿ 42.2 ಮಿಲಿ ಮೀಟರ್, ಈಶ್ವರಗೆರೆ 36 ಮಿಲಿ ಮೀಟರ್, ಸೂಗೂರಿನಲ್ಲಿ 37.3 ಮಿಲಿ ಮೀಟರ್, ಇಕ್ಕನೂರಿನಲ್ಲಿ 42.6 ಮಿಲಿ ಮೀಟರ್ ಮಳೆ ಆಗಿದೆ.

ಎಲ್ಲೆಲ್ಲಿ ಎಷ್ಟು ಮಳೆ ಪ್ರಮಾಣ?
ಚಿತ್ರದುರ್ಗ -1ರಲ್ಲಿ 15.6 ಮಿಲಿ ಮೀಟರ್, ಚಿತ್ರದುರ್ಗ -2ರಲ್ಲಿ 27.6 ಮಿಲಿ ಮೀಟರ್, ಹಿರೇಗುಂಟನೂರು 5.2 ಮಿಲಿ ಮೀಟರ್, ಐನಳ್ಳಿ 22.6 ಮಿಲಿ ಮೀಟರ್, ಭರಮಸಾಗರ 17 ಮಿಲಿ ಮೀಟರ್, ಸಿರಿಗೆರೆ 6.2 ಮಿಲಿ ಮೀಟರ್, ತುರುವನೂರು 13.6 ಮಿಲಿ ಮೀಟರ್ ಮಳೆ ಆಗಿದೆ. ಮೊಳಕಾಲ್ಮೂರಿನಲ್ಲಿ 47.2 ಮಿಲಿ ಮೀಟರ್, ರಾಯಪುರ 31.1 ಮಿಲಿ ಮೀಟರ್, ಬಿ.ಜಿ.ಕೆರೆ 33.8 ಮಿಲಿ ಮೀಟರ್, ರಾಂಪುರ 15 ಮಿಲಿ ಮೀಟರ್, ದೇವಸಮುದ್ರ 14.2 ಮಿಲಿ ಮೀಟರ್ ಮಳೆ ಆಗಿದೆ.

ಕಾಳಜಿ ಕೇಂದ್ರ ಆರಂಭ
ಭಾನುವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಒಟ್ಟು 56 ಮನೆಗಳು ಭಾಗಶಃ ಹಾನಿ ಆಗಿವೆ. 2 ಮನೆಗಳು ತೀವ್ರ ಹಾನಿಗೆ ಒಳಗಾಗಿವೆ. ಚಿತ್ರದುರ್ಗದಲ್ಲಿ 12 ಮನೆಗಳು, ಹಿರಿಯೂರು 15, ಚಳ್ಳಕೆರೆ 15, ಹೊಸದುರ್ಗ 06, ಹೊಳಲ್ಕೆರೆ 07, ಮೊಳಕಾಲ್ಮೂರು 1 ಮನೆ ಭಾಗಶಃ ಹಾನಿಗೆ ಒಳಗಾಗಿವೆ. ಕೃಷಿ ಬೆಳೆಗೆ ಸಂಬಂಧಿಸಿದಂತೆ 50 ಹೆಕ್ಟೇರ್ ಪ್ರದೇಶ, ತೋಟಗಾರಿಕೆಗೆ ಸಂಬಂಧಿಸಿದಂತೆ 30 ಹೆಕ್ಟೇರ್ ಪ್ರದೇಶ ಹಾನಿಗೊಳಗಾಗಿದೆ. ಹೊಸದುರ್ಗ ತಾಲೂಕಿನ ಮಾಡದಕೆರೆ ಹೋಬಳಿಯ ಪೂಜಾರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದಿದ್ದು, ಒಟ್ಟು 38 ಜನರು ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಲಾಗಿದೆ












Click it and Unblock the Notifications