ಮೊಳಕಾಲ್ಮೂರಿನಲ್ಲಿ ನಕಲಿ ವೈದ್ಯನ ಮನೆ ಮೇಲೆ ತಹಶೀಲ್ದಾರ್ ದಾಳಿ
ಚಿತ್ರದುರ್ಗ, ಅಕ್ಟೋಬರ್ 15: ವೈದ್ಯ ಎಂದು ಸುಳ್ಳು ಹೇಳಿಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದ ವ್ಯಕ್ತಿಯ ಮನೆಯ ಮೇಲೆ ತಹಶೀಲ್ದಾರ್ ದಾಳಿ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ನಡೆದಿದೆ.
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೊನಸಾಗರ ಗ್ರಾಮದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ್ ನಕಲಿ ವೈದ್ಯನ ಮನೆಯ ಮೇಲೆ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.
ಆಂಧ್ರ ಮೂಲದ ಸುರೇಶ್ ಎಂಬಾತ ಹಲವು ದಿನಗಳಿಂದ ಗ್ರಾಮದಲ್ಲಿ ತಾನು ಡಾಕ್ಟರ್ ಎಂದು ಜನರಿಗೆ ಸುಳ್ಳು ಹೇಳಿಕೊಂಡು ಚಿಕಿತ್ಸೆ ನೀಡುತ್ತಿದ್ದನು. ಇದಲ್ಲದೆ ಆಂಧ್ರ ಪ್ರದೇಶಕ್ಕೂ ಆಗಾಗ್ಗೆ ಹೋಗಿ ಬರುತ್ತಿದ್ದನು ಎಂದು ತಿಳಿದುಬಂದಿದೆ. ಈ ವೈದ್ಯನ ಕೆಲವರಲ್ಲಿ ಅನುಮಾನವೂ ಮೂಡಿತ್ತು. ಖಚಿತ ಮಾಹಿತಿ ಪಡೆದುಕೊಂಡ ತಹಶೀಲ್ದಾರ್ ನಕಲಿ ವೈದ್ಯನ ಮೇಲೆ ದಾಳಿ ನಡೆಸಿ ಆತನಿಂದ ವಿವಿಧ ಮಾತ್ರೆಗಳು, ಇಂಜೆಕ್ಷನ್, ಸಿರೆಂಜ್ ಔಷಧಿಗಳನ್ನು ಜಪ್ತಿ ಮಾಡಿದ್ದಾರೆ.

ದಾಳಿ ವೇಳೆ ತಾಲೂಕು ವೈದ್ಯಾಧಿಕಾರಿ ಸುಧಾಮಣಿ ಮತ್ತು ಪೊಲೀಸರು ಇದ್ದರು. ನಕಲಿ ವೈದ್ಯ ಸುರೇಶ್ ವಿರುದ್ಧ ಮೊಳಕಾಲ್ಮೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications