ಮೊಳಕಾಲ್ಮೂರು ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿದ ಶ್ರೀರಾಮುಲು
ಚಿತ್ರದುರ್ಗ ಜೂನ್.12: ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ .ಶ್ರೀರಾಮುಲು ಮಂಗಳವಾರ ಇಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿದರು.
ಚಿತ್ರನಾಯಕನಹಳ್ಳಿ, ಯಾದಳಗಟ್ಟೆ, ಖ್ಯಾತಗೊಂಡನಹಳ್ಳಿ, ಕಾಲುವೆಹಳ್ಳಿ, ಗೌಡರಹಟ್ಟಿ, ಗೌಡರಕಪ್ಲೆ, ದೊಣೆಹಳ್ಳಿ, ತಿಪ್ಪಾರೆಡ್ಡಿಹಳ್ಳಿಗೆ ಭೇಟಿ ನೀಡಿದ ಅವರು ಜನರ ಕುಂದು ಕೊರತೆಗಳನ್ನು ಆಲಿಸಿ ಮನವಿಗೆ ಸ್ಪಂದಿಸಿದರು.

ಅಷ್ಟೇ ಅಲ್ಲ, ತಿಪ್ಪಾರೆಡ್ಡಿಹಳ್ಳಿಯಲ್ಲಿ ರೈತರ ಕಷ್ಟಗಳನ್ನು ಆಲಿಸಿ ಅವರ ಹೊಲದಲ್ಲಿ ಮಡಿಕೆ ಹೊಡೆದರು. ತದ ನಂತರ ದೊಡ್ಡಉಳ್ಳಾರ್ತಿ, ಸಣ್ಣ ಉಳ್ಳಾರ್ತಿ ಪಂಚಾಯಿತಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.

ಶ್ರೀರಾಮುಲು ಅವರು ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜನ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
ಮೇ 12 ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀರಾಮುಲು ಜಯಗಳಿಸಿದ್ದರು.












Click it and Unblock the Notifications