ಚಿತ್ರದುರ್ಗ: ಹಾವು ಕಡಿದು ಒಂದೇ ಕುಟುಂಬದ ಮೂವರು ಸಾವು
ಚಿತ್ರದುರ್ಗ, ಜುಲೈ 11: ಹಾವು ಕಡಿದು ಒಂದೇ ಕುಟುಂಬದ ಮೂವರು ಮೃತರಾದ ಘಟನೆ ಚಿತ್ರದುರ್ಗದ ಹಿರಿಯೂರಿನ ಕಂಡೇನಹಳ್ಳಿ ಎಂಬಲ್ಲಿ ನಡೆದಿದೆ.
ನಿನ್ನೆ (ಜುಲೈ 10) ರಂಜಿತಾ (23) ಮತ್ತು ಅವರ ಮಗಳು ಕೀರ್ತನಾ(3) ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದರು. ಸಾವಿಗೆ ಕಾರಣವೇನು ಎಂಬುದು ತಿಳಿದಿರಲಿಲ್ಲ. ನಂತರ ರಂಜಿತಾ ಅವರ ಮಾವ ಮಡ್ನಪ್ಪ(65) ಅವರೂ ತೀರಿಕೊಂಡಿದ್ದು, ಇದೇ ಸಂದರ್ಭದಲ್ಲಿ ಮನೆಯಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಹಾವು ಕಡಿದೇ ಮೂವರೂ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications