ದಲಿತರಿಗೆ ಹಿಂದೂಗಳಲ್ಲ ಎನ್ನುವ ಮನಸ್ಥಿತಿ ತುಂಬಲಾಗುತ್ತಿದೆ: ಭಗವತ್
ಚಿತ್ರದುರ್ಗ, ಜುಲೈ 12: "ರಾಷ್ಟ್ರದಲ್ಲಿ ಮತಾಂತರ ಮಾಡುವ ಕಾರ್ಯ ನಡೆಯುತ್ತಿದೆ ಅದನ್ನು ತಡೆಗಟ್ಟುವ ಕೆಲಸ ಮಾಡಬೇಕಾಗಿದೆ" ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
"ಮಾದಾರ ಚನ್ನಯ್ಯ ಸ್ವಾಮೀಜಿಗಳು ನನಗೆ ಹಲವು ಆಹ್ವಾನ ನೀಡಿದ್ದರು. ಬಂದಿರಲಿಲ್ಲ ಇದೀಗ ಯೋಗ ಈಗ ಕೂಡಿ ಬಂದಿದೆ. ಹಿಂದುಳಿದ, ದಲಿತ ಎಂಬ ಪಿಡುಗುಗಳು ಹುಟ್ಟಬೇಕು ಎಂಬುದು ಇರಲಿಲ್ಲ ಇವರೆಡರಲ್ಲಿ ಸಂಪರ್ಕ ತಪ್ಪಿ ಹೋದ ಪರಿಣಾಮ ದಲಿತ ಹಿಂದುಳಿದ ವರ್ಗಗಳು ಬದಲಾಗಿವೆ" ಎಂದರು.

"ರಾಷ್ಟ್ರದಲ್ಲಿ ಈಡೀ ಸಮಾಜ ಒಂದಾಗಿ ಹೋಗಬೇಕು. ಅದು ಏನಾದರೂ ತಪ್ಪು ದಾರಿಯಲ್ಲಿ ಹೋದರೆ ಅದನ್ನು ತಿದ್ದುವ ಕೆಲಸವನ್ನು ನಾವು ಮಾಡಬೇಕು. ಪರಸ್ಪರ ಪ್ರೀತಿಯಿಂದ ಬಾಳುವುದರ ಮೂಲಕ ನಮ್ಮಲ್ಲಿನ ಅಂತರ ಹೋಗಲಾಡಿಸಬೇಕು. ಸಮಾಜವನ್ನು, ರಾಷ್ಟ್ರವನ್ನು ಕಟ್ಟುವ ಕೆಲಸವನ್ನು ನಾವು ಮಾಡಬೇಕಿದೆ" ಎಂದು ಹೇಳಿದರು.
"ರಾಷ್ಟ್ರ ಕಟ್ಟುವ ದೃಷ್ಟಿಯಿಂದ ಚಿಂತನೆ ನಡೆಸಲು ನಾವು ಇಲ್ಲಿ ಸೇರಿದ್ದೇವೆ. ನಮ್ಮ ನೀತಿ ಎಲ್ಲರಿಗೂ ಅನುಕೂಲವಾಗುವಂತಹ ದೃಷ್ಟಿಯಿಂದ ಕೆಲಸ ಮಾಡಬೇಕು ಬದಲಾಗಿ ನಮಗೆ ಲಾಭದ ಲೆಕ್ಕಾಚಾರವಿಲ್ಲ. ಸಂಘ ಪ್ರಾರಂಭವಾದ ಮೊದಲ ದಿನಗಳಲ್ಲಿ ಪರಿಸ್ಥಿತಿ ಸರಿಯಿರಲಿಲ್ಲ, ಆದರೆ ಈಗ ಕಾಲ ಬದಲಾಗಿದೆ. ಎಲ್ಲಾ ಕಡೆ ಹೋಗಲು ಅನುಮತಿ ಇದೆ. ನಮ್ಮ ಆಚಾರ ವಿಚಾರ ಪೂಜಾ ವಿಧಾನ ಬೇರೆ-ಬೇರೆ ಇರಬಹುದು. ಆದರೆ ನಾವೆಲ್ಲ ಒಂದೇ, ನಾವೆಲ್ಲ ಸೇರಿ ಬಲಿಷ್ಠ ರಾಷ್ಟ್ರವನ್ನು ಕಟ್ಟಬೇಕಾಗಿದೆ. ನಮ್ಮ ರಾಷ್ಟ್ರ ವಿವಿಧತೆಯಿಂದ ಕೂಡಿದ ರಾಷ್ಟ್ರ ಆದರೆ ನಮ್ಮಲ್ಲಿರುವ ಆತ್ಮ ಒಂದೇ ಒಂದೇ ಧರ್ಮ" ಎಂದು ತಿಳಿಸಿದರು.
"ಮತಾಂತರದಿಂದ ಕೇವಲ ಪೂಜಾ ಕಾರ್ಯಕ್ರಮದಿಂದ ದೂರವಾಗಲ್ಲ, ನಮ್ಮಿಂದಲೇ ದೂರವಾಗುತ್ತಾರೆ. ನಮ್ಮ ಜನರಿಗೆ ಉತ್ತಮ ಸಂಸ್ಕಾರ ಬರಬೇಕಾಗಿದೆ. ಆಧುನಿಕ ಶಿಕ್ಷಣ ವ್ಯವಸ್ಥೆ ಶಿಕ್ಷಣ ನೀಡುತ್ತಿದೆ. ಆದರೆ ಸಂಸ್ಕಾರವನ್ನು, ಜೀವನ ಮೌಲ್ಯವನ್ನು ಕಲಿಸಲ್ಲ. ಕೆಲವರು ದಲಿತರಲ್ಲಿ ನಾವು ಹಿಂದುಗಳಲ್ಲ ಎಂದು ಹೇಳುವ ಮನಸ್ಥಿತಿಯನ್ನು ತುಂಬುತ್ತಿದ್ದಾರೆ ಇದನ್ನು ಹೋಗಲಾಡಿಸಬೇಕಾಗಿದೆ" ಎಂದು ಕರೆ ನೀಡಿದರು.
"ಸಾಧನೆ ತಪಸ್ಸಿನಿಂದ ಸಮಾಜವನ್ನು ಕಟ್ಟುವ ಕೆಲಸವನ್ನು ನಾವು ಪಡೆದಿದ್ದೇವೆ. ನಾವೆಲ್ಲ ಒಂದಾಗಿ ಕೆಲಸ ಮಾಡಿದರೆ, ಭಾರತಕ್ಕೆ ಉತ್ತಮ ಭವಿಷ್ಯವಿದೆ. ಆಗಾಗಿ ಸಮಾಜದಲ್ಲಿ ಭಕ್ತಿಭಾವ ಬರಬೇಕು. ಅದು ಬಂದರೆ ಸುಳ್ಳು ಸಮಾಜ ಹೋಗುತ್ತದೆ . ನಾವು ಪರಮಾರ್ಥವನ್ನು ಹೇಳಲು ಬಂದಿಲ್ಲ, ನಿಮ್ಮೊಂದಿಗೆ ಕೆಲಸ ಮಾಡಲು ಬಂದಿದ್ದೇನೆ. ಸಂಘ ಹಾಗೂ ಸಮಾಜದಲ್ಲಿನ ಸಮಸ್ಯೆಗಳನ್ನು ಚರ್ಚಿಸಲು ಇಲ್ಲಿಗೆ ಬಂದಿದ್ದೇನೆ" ಎಂದು ಭಾಗವತ್ ತಿಳಿಸಿದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications