ಚಿತ್ರದುರ್ಗದಲ್ಲಿ 'ಪಾನ್ ಮಸಾಲ'ಕ್ಕಾಗಿ ಲಾರಿ ಚಾಲಕನೇ ಕಿಡ್ನಾಪ್!

ಚಿತ್ರದುರ್ಗ, ಡಿಸೆಂಬರ್.01: ರಾಜ್ಯದಲ್ಲಿ ಮೊದಲೇ ವಿಧಾನಸಭಾ ಚುನಾವಣೆ ಕಾವು ಏರುತ್ತಿದೆ. ಎಲ್ಲಿ ಯಾವಾಗ ಎಷ್ಟು ಹಣವನ್ನು ಹೇಗೆ ಸಾಗಿಸುತ್ತಾರೆ ಅನ್ನೋದೇ ಗೊತ್ತಾಗುವುದಿಲ್ಲ. ಹೀಗಾಗಿಯೇ ಪೊಲೀಸರು ಫಲ್ ಅಲರ್ಟ್ ಆಗಿದ್ದಾರೆ.
ಸ್ಟ್ರಿಕ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಕೈಗೆ ಸರಿಯಾಗೇ ಲಾರಿಯೊಂದು ಸಿಕ್ಕಿಕೊಂಡಿತು. ಆದರೆ, ಆ ಲಾರಿಯಲ್ಲಿದ್ದ ವಸ್ತುಗಳನ್ನು ನೋಡಿದ ಪೊಲೀಸರೇ ಶಾಕ್ ಆಗಿ ಬಿಟ್ಟರು. ಏಕೆಂದರೆ ಅಲ್ಲಿ ಸಿಕ್ಕಿದ್ದು ಕೋಟಿ ಕೋಟಿ ಹಣವಂತೂ ಅಲ್ಲವೇ ಅಲ್ಲ. ಬದಲಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಪಾನ್ ಮಸಾಲ.

ಹೌದು, 30 ಲಕ್ಷ ರೂಪಾಯಿ ಮೌಲ್ಯದ ವಿಮಲ್ ಪಾನ್ ಮಸಾಲಾ ತುಂಬಿದ್ದ ಲಾರಿಗೆ ಅಡ್ಡ ಹಾಕಿದ್ದ ನಾಲ್ವರು ದರೋಡೆಕೋರರ ಗ್ಯಾಂಗ್ ಲಾರಿ ಚಾಲಕನನ್ನೇ ಕಿಡ್ನಾಪ್ ಮಾಡಿತ್ತು. ಅಲ್ಲಿಂದ ಮುಂದೆ ದರೋಡೆ ಗ್ಯಾಂಗ್ ನ ಇಬ್ಬರು ಪಾನ್ ಮಸಾಲಾ ತುಂಬಿದ ಲಾರಿಯನ್ನು ಚಾಲನೆ ಮಾಡಿಕೊಂಡು ಡಾಬಾ ಕಡೆಗೆ ಹೊರಟರು. ಲಾರಿಯಲ್ಲಿ ತುಂಬಿದ್ದ ಮಾಲನ್ನೆಲ್ಲ ಬೇರೊಂದು ಲಾರಿಗೆ ತುಂಬಿಸಲು ಗ್ಯಾಂಗ್ ಸ್ಕೆಚ್ ಹಾಕಿತ್ತು.

Robbers Attcaked On Lorry Driver And Kidnap Him For Pan Masala
ಆದರೆ, ಈ ಬಗ್ಗೆ ಸುಳಿವು ಸಿಗುತ್ತಿದ್ದಂತೆ ಪೊಲೀಸರು ದಾಳಿಗೆ ಮುಂದಾದರು. ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಪೊಲೀಸರು ದರೋಡೆಕೋರರ ಮೇಲೆ ದಾಳಿಗೆ ಮುಂದಾದರು. ಈ ವೇಳೆ ಎಚ್ಚೆತ್ತುಕೊಂಡ ನಾಲ್ವರು ದರೋಡೆಕೋರರ ಗ್ಯಾಂಗ್ ಲಾರಿಯನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದೆ.
ಇನ್ನು, ದರೋಡೆಕೋರರ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಇನ್ನೊಂದೆಡೆ ಲಾರಿಯಲ್ಲಿದ್ದ ಪಾನ್ ಮಸಾಲಾವನ್ನು ತುಮಕೂರಿನಿಂದ ಬಳ್ಳಾರಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+