ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದ ಯುವಕರಿಗೆ ಅಜ್ಜಿ ಕೊಟ್ಟು ಉತ್ತರವೇನು?
ಚಿತ್ರದುರ್ಗ, ಜೂನ್ 8: ಯುವಕನೊಬ್ಬ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ವೃದ್ಧ ಮಹಿಳೆಗೆ ಹೇಳಿದಾಗ ಅದಕ್ಕೆ ಆಕೆ ಬೇವಿನ ಮರ ತೋರಿಸಿ ಉತ್ತರ ನೀಡಿದ್ದಾರೆ.
ಬೇವಿನ ಮರ ತೋರಿಸಿ, "ನಾನು ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ. ನಂದು ಇದೇ ಗುರುತು. ನಾನು ಇದನ್ನು ಕೆತ್ತಿ ಕುಡಿತಿನಿ, ಗುಂಡ್‌ಕಲ್ಲು ಇದ್ದಂಗೆ ಇದೀನಿ'' ಎಂದು ಅಜ್ಜಿ ಹೇಳಿದ್ದಾರೆ.
ಬೇವಿನ ಕಷಾಯ ಕುಡಿದರೆ ಯಾವ ರೋಗ ಬರುವುದಿಲ್ಲ ಜೊತೆಗೆ ಕೊರೊನಾ ಸೋಂಕು ತಗಲುವುದಿಲ್ಲ ಎನ್ನುವುದು ಅಜ್ಜಿಯ ಮಾತುಗಳು. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಕೆ.ಆರ್ ನರ್ಸರಿ ಫಾರೆಸ್ಟ್‌ನಲ್ಲಿ ಕೆಲಸ ನಿರ್ವಹಿಸುವ ಅಜ್ಜಿಯ ಹೆಸರು ಹನುಮಕ್ಕ ಎಂದು ತಿಳಿದು ಬಂದಿದೆ.

ಹಿರಿಯೂರು ನಗರದ ಪ್ರಭು ಯಾದವ್ ಎಂಬುವವರು ನರ್ಸರಿಗೆ ತೇಗ, ಶ್ರೀಗಂಧ ಗಿಡ ತರಲು ಹೋದಾಗ "ಅಜ್ಜಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಳ್ಳಲಿಲ್ಲ ಎಂದರೆ ಕೆಲಸದಿಂದ ತೆಗೆಯುತ್ತಾರೆ ಎಂದು ಯುವಕರು ಹೆದರಿಸಿದ್ದಾರೆ.
ವೃದ್ಧ ಮಹಿಳೆಯು ಯುವಕರಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ್ದು, "ನನಗೆ ಆಪರೇಷನ್ ಆಗಿದೆ. ನನಗೆ ವ್ಯಾಕ್ಸಿನ್ ಆಗಲ್ಲ, ನನ್ನನ್ನು ಕೆಲಸದಿಂದ ತೆಗೆದರೂ, ನಾನು ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ. ನನಗೆ ಕೊರೊನಾ ಬಂದರೆ ಬರಲಿ, ಬಿಟ್ರೆ ಬಿಡಲಿ ನಾನು ಹಾಕಿಸಿಕೊಳ್ಳಲ್ಲ. ನನ್ನದು ಇದೆ ಗುರುತು. ಬೇವಿನ ಮರದ ಕಷಾಯ ಕುಡಿತೀನಿ ನನಗೆ ಲಸಿಕೆ ಬೇಡ ಎಂದಿದ್ದಾರೆ.
Recommended Video
ಲಸಿಕೆ ಹಾಕಿಸಿಕೊಳ್ಳಿ ಅಜ್ಜಿ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂದರೂ, ಅಜ್ಜಿ ಯುವಕರ ಮಾತು ಕೇಳಲಿಲ್ಲ. ಕೆಲಸದಿಂದ ತೆಗೆದರೂ ನಾನು ಮನೆಯಲ್ಲಿದ್ದು ದುಡಿದು ತಿನ್ನುತ್ತೇನೆ ಎಂದು ಅಜ್ಜಿ ಯುವಕರಿಗೆ ಉತ್ತರ ಕೊಟ್ಟಿದ್ದು, ಯುವಕರು ಮತ್ತು ಅಜ್ಜಿಯ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications