Mysuru-Chitradurga Railway Line: ಮೈಸೂರು-ಚಿತ್ರದುರ್ಗ ರೈಲು ಮಾರ್ಗದ ಚಾಲನೆ ಬಗ್ಗೆ ಮಹತ್ವದ ಅಪ್ಡೇಟ್
Mysuru-Chitradurga Railway Line: ರಾಜ್ಯದಲ್ಲಿ ರಲ್ವೇ ಮಾರ್ಗ ವಿಸ್ತರಣೆ ಆಗುತ್ತಲಿದೆ. ಈಗಾಗಲೇ ಬಹುನಿರೀಕ್ಷಿತ ದಾವಣಗೆರೆ-ಚಿತ್ರದುರ್ಗ-ಬೆಂಗಳೂರು ನೇರ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಇದು ಯಾವಾಗ ಲೋಕಾರ್ಪಣೆ ಆಗಲಿದೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ. ಈ ನಡುವೆ ಇದೀಗ ಮೈಸೂರು-ಚಿತ್ರದುರ್ಗ ರೈಲ್ವೆ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್‌ವೊಂದನ್ನು ನೀಡಲಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ವಿ.ಸೋಮಣ್ಣ ಅವರು ರಾಜ್ಯ ರೈಲ್ವೆ ಖಾತೆ ಸಚಿವರಾದಾಗಿನಿಂದಲೂ ರಾಜ್ಯದಲ್ಲಿ ರೈಲ್ವೆ ವಿಭಾಗದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕ್ರಾಂತಿ ಆಗುತ್ತಲಿದೆ. ಈಗಾಗಲೇ ಅವರು ಬಹುನಿರೀಕ್ಷಿತ ದಾವಣಗೆರೆ - ಚಿತ್ರದುರ್ಗ - ತುಮಕೂರು ನೇರ ರೈಲು ಮಾರ್ಗ ಕಾಮಗಾರಿ ಮುಕ್ತಾಯದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮೈಸೂರು-ಚಿತ್ರದುರ್ಗ ರೈಲ್ವೆ ಮಾರ್ಗ ಚಾಲನೆಗೆ ಬೇಡಿಕೆ ಇಡಲಾಗಿದೆ.

ಹೌದು.. ಮೈಸೂರು-ಚಿತ್ರದುರ್ಗ ರೈಲ್ವೆ ಮಾರ್ಗಕ್ಕೆ ಚಾಲನೆ ನೀಡಲು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ನೈರುತ್ಯ ರೈಲ್ವೇ ಹುಬ್ಬಳ್ಳಿ ವಿಭಾಗದ ಬಳಕೆದಾರರ ಸಲಹೆ ಸಮಿತಿ ಸದಸ್ಯ ಕೊಂಡಜ್ಜಿ ವಿಶ್ವನಾಥ್ ಭರವಸೆ ನೀಡಿದರು. ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಕೊಂಡಜ್ಜಿ ವಿಶ್ವನಾಥ್ ಈ ಬಗ್ಗೆ ಅವರು ಮಾತನಾಡಿದರು.
ಮೈಸೂರು-ಚಿತ್ರದುರ್ಗ ರೈಲು ಮಾರ್ಗಕ್ಕೆ ಬೇಡಿಕೆ: ತುರುವೇಕೆರೆ ತಾಲ್ಲೂಕಿನ ತಾಲ್ಲೂಕಿನ ಸಂಪಿಗೆ, ಅಮ್ಮಸಂದ್ರ ಮತ್ತು ಬಾಣಸಂದ್ರದ ಮೂಲಕ ಹಲವಾರು ರೈಲುಗಳು ಸಂಚಾರ ಮಾಡುತ್ತಿವೆ. ರೈಲ್ವೆ ಪ್ರಯಾಣಿಕರು ಈ ಭಾಗದಲ್ಲಿ ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ಆಗಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ, ಮೈಸೂರು-ಚಿತ್ರದುರ್ಗ ರೈಲ್ವೆ ಮಾರ್ಗವನ್ನು ಸಿದ್ಧಪಡಿಸಬೇಕು ಅಂತಲೂ ಆಗ್ರಹಿಸಿದ್ದಾರೆ ಎಂದು ಹೇಳಿದರು.
ವಿ.ಸೋಮಣ್ಣ ಹೇಳಿದ್ದೇನು?: ನಾನು ಸಚಿವನಾದ ನಂತರ ದಾವಣಗೆರೆ-ಚಿತ್ರದುರ್ಗ-ತುಮಕೂರು, ತುಮಕೂರು-ರಾಯದುರ್ಗ ರೈಲು ಮಾರ್ಗ ಕಾಮಗಾರಿಗೆ ಚಾಲನೆ ಕೊಟ್ಟಿದ್ದೆನೆ. 20ಕ್ಕೂ ಹೆಚ್ಚು ಮೇಲ್ಸೆತುವೆ ಮಾಡಿದ್ದೇನೆ ಎಂದು ಇತ್ತೀಚೆಗಷ್ಟೇ ಹೇಳಿದ್ದರು. ಇದೇ ವೇಳೆ ಬೆಂಗಳೂರು-ತುಮಕೂರು ಮೆಟ್ರೊ ಯೋಜನೆಗೆ ಕಾಂಗ್ರೆಸ್ ನಾಯಕರು ವಿರೋಧ ಮಾಡುತಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ ಮಾಡಿದ್ದರು.
ತುಮಕೂರಿನ ಪಂಡಿತನಹಳ್ಳಿಯಲ್ಲಿ ರೇಲ್ವೆ ಮೇಲ್ಸೆತುವೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, ನಿನ್ನೆ ಒಬ್ಬ ಕಾಂಗ್ರೆಸ್ ನಾಯಕರು ನನ್ನ ಬಳಿ ಬಂದು ತುಮಕೂರು ಮೆಟ್ರೋಗೆ ವಿರೋಧ ವ್ಯಕ್ತಪಡಿಸಿದರು. ಪರಮೇಶ್ವರ್ ಯಾಕೆ ತುಮಕೂರಿಗೆ ಮೆಟ್ರೋ ತೆಗೆದುಕೊಂಡು ಹೋಗುತ್ತಾರೆ ಎಂದು ಕೇಳಿದರು. ಅದಕ್ಕೆ ನಾನು ಜಿ.ಪರಮೇಶ್ವರ್ ಉತ್ತಮ ಕೆಲಸ ಮಾಡುತಿದ್ದಾರೆ. ನಾನು ಅದಕ್ಕೆ ಸಹಮಹತ ವ್ಯಕ್ತಪಡಿಸುತ್ತೇನೆ ಎಂದು ಹೇಳಿದೆ. ಆಗ ಕಾಂಗ್ರೆಸ್ ನಾಯಕರು ಸುಮ್ಮನೆ ಆದರು ಎಂದು ಹೇಳಿದರು.
ಇನ್ನೂ ರೈಲ್ವೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಿದ್ದೇನೆ. ರೈಲ್ವೆ ಗೇಟ್ ಸಮಸ್ಯೆಗೆ ಪರಿಹಾರ ನೀಡಿದ್ದೇನೆ. 13 ಆರ್‌ಒಬಿ (ROB), 12 ಆರ್‌ಯುಬಿ (RUB), 3 ಎಫ್‌ಒಬಿ (FOB) ಈ ಎಲ್ಲಾ ಯೋಜನೆಗಳು ಮುಂದಿನ ಪೀಳಿಗೆಗೆ ರೈಲ್ವೆ ಇಲಾಖೆಯ ದೊಡ್ಡ ಕೊಡುಗೆ ಎಂದು ಹೇಳಿದರು. ಈ ಯೋಜನೆಗಳಿಗೆ ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚ ಆಗಿದೆ. ಇದರಲ್ಲಿ ರಾಜ್ಯ ಸರ್ಕಾರ ಒಂದು ರೂಪಾಯಿ ನೀಡಿಲ್ಲ ಎಂದು ಹೇಳಿದರು. ಒಟ್ಟಿನಲ್ಲಿ ವಿ.ಸೋಮಣ್ಣ ಅವರು ರಾಜ್ಯ ರೈಲ್ವೆ ಖಾತೆ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ಅವರು ಮುಂದಿನ ದಿನಗಳಲ್ಲಿ ಚಿತ್ರದುರ್ಗ-ಮೈಸೂರು ರಲ್ವೆ ಮಾರ್ಗದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಎಂದು ಕಾದುನೋಡಬೇಕಿದೆ.












Click it and Unblock the Notifications