ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮುರುಳೀಧರ ಆಯ್ಕೆ

ಚಿತ್ರದುರ್ಗ, ಜನವರಿ 12: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿಯಲ್ಲಿ ಹಿರಿಯೂರಿನ ಎ. ಮುರುಳಿಧರ ಅವರು ಚಿತ್ರದುರ್ಗದ ನೂತನ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ಜಿಲ್ಲಾ ಘಟಕದ ಆಯ್ಕೆಗೆ ಹೊಸದುರ್ಗದ ಲಿಂಗಮೂರ್ತಿ, ಬದ್ರಿನಾಥ್, ಮಲ್ಲಿಕಾರ್ಜುನ್ ಸಿದ್ದೇಶ್ ಯಾದವ್, ನರೇಂದ್ರನಾಥ್, ಸುರೇಶ್, ಜಯಪಾಲ್ ಹಾಗೂ ಮುರಳಿಧರ ಹೀಗೆ ಏಂಟು ಜನರ ಹೆಸರನ್ನು ಆಯ್ಕೆಗೆ ಪಟ್ಟಿಯಲ್ಲಿ ಅಂತಿಮಗೊಳಿಸಲಾಗಿತ್ತು. ತೀವ್ರ ಏಂಟು ಜನರ ಪೈಪೋಟಿಯಲ್ಲಿ ಮುರುಳೀಧರ ಅವರನ್ನು ಆಯ್ಕೆ ಮಾಡಿ ಪಕ್ಷ ಅಂತಿಮಗೊಳಿಸಲಾಗಿದೆ.

ಈ ಹಿಂದೆ ಜಿಲ್ಲಾ ಘಟಕದ ಹಾಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತಿದ್ದರು. ಮುರುಳೀಧರ ಅವರು ಮೂಲತಃ ಹಿಂದುಳಿದ ಬುಡಕಟ್ಟು ಕಾಡುಗೊಲ್ಲ ಸಮುದಾಯದಿಂದ ಬಂದಿರುವ ಹಿರಿಯೂರು ತಾಲೂಕಿನ ಆಲಮರದ ಹಟ್ಟಿ ಗ್ರಾಮದವರಾಗಿದ್ದಾರೆ. ಇವರು ವೈದ್ಯಕೀಯ ವೃತ್ತಿಯಲ್ಲಿ ಸೇವೆ ಮಾಡುವ ಮೂಲಕ ಸಾಮಾನ್ಯ ಕಾರ್ಯಕರ್ತನಂತೆ ಇದ್ದು ಹಿರಿಯೂರು ಕ್ಷೇತ್ರದ ಉಸ್ತುವಾರಿ ವಹಿಸಿದ್ದರು.

Murulidhar Elected As Chitradurga BJP District President

ಸಂಘ ಪರಿವಾರ ಮೂಲದಿಂದ ಬಂದು ಬಿಜೆಪಿ ಪಕ್ಷದಲ್ಲಿ ತೊಡಗಿಕೊಳ್ಳುವ ಮೂಲಕ ಇಂದು ಚಿತ್ರದುರ್ಗ ಜಿಲ್ಲೆಯ ನೂತನವಾಗಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ನೂತನ ಜಿಲ್ಲಾ ಘಟಕಕ್ಕೆ ಮುರುಳೀಧರ ಅವರು ಆಯ್ಕೆಯಾಗಿರುವುದು ಸಂತೋಷಕರವಾದ ವಿಚಾರ ಅವರಿಗೆ ಶುಭ ಹಾರೈಸುತ್ತೇನೆ ಎಂದು ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಗೊಲ್ಲ ಸಮುದಾಯ ಅತಿ ಹೆಚ್ಚು ಜನಸಂಖ್ಯೆಯಿದ್ದು, ಸಮುದಾಯಕ್ಕೆ ಸ್ಥಾನಮಾನವನ್ನು ಕೊಡಬೇಕಂತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಹಾಗೂ ಪಕ್ಷದ ಮುಖಂಡರಿಗೆ ಮನವಿ ಮಾಡಲಾಗಿತ್ತು ಎಂದು ಶಾಸಕಿ ಹೇಳಿದರು.

Murulidhar Elected As Chitradurga BJP District President

ಮುರುಳೀಧರ ಅವರು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡಿಕೊಂಡು ಎಲ್ಲ ಮುಖಂಡರನ್ನು ಮತ್ತು ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಲಿ, ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಅವರಿಗೆ ನಾನು ಸದಾ ಬೆಂಬಲವಾಗಿ ಇರುತ್ತೇನೆ ಎಂದು ಕೆ.ಪೂರ್ಣಿಮಾ ಶುಭ ಹಾರೈಸಿದ್ದಾರೆ.

ಇನ್ನು ಸುದ್ದಿಗಾರರ ಜೊತೆ ಮಾತನಾಡಿದ ನೂತನ ಜಿಲ್ಲಾಧ್ಯಕ್ಷ ಮುರುಳೀಧರ, ""ನಾನು ಬಡಕುಟುಂಬದಿಂದ ಬಂದ ವ್ಯಕ್ತಿ, ಎಬಿವಿಪಿ ಮೂಲಕ ಹಾಗೂ ಸಾಮಾನ್ಯ ಬಿಜೆಪಿ ಕಾರ್ಯಕರ್ತನಾಗಿದ್ದು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವ ಮೂಲಕ ಇಂದು ಚಿತ್ರದುರ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ನನ್ನ ಆಯ್ಕೆಮಾಡಿದ್ದಾರೆ'' ಎಂದರು.

ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಒಂದು ಜಿಲ್ಲೆಯ ಅಧ್ಯಕ್ಷ ಸ್ಥಾನವನ್ನಾಗಿ ಆಯ್ಕೆ ಮಾಡುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ, ದೇಶದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಎಂದರೆ ಅದು ಬಿಜೆಪಿ ಪಕ್ಷ, ನನ್ನ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಇಂದು ಜಿಲ್ಲಾ ಘಟಕದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರಿಗೆ, ಪಕ್ಷದ ವರಿಷ್ಟರಿಗೆ, ಪಕ್ಷದ ಮುಖಂಡರಿಗೆ, ಜಿಲ್ಲೆಯ ಶಾಸಕರುಗಳಿಗೆ, ಸಂಸದರ ಗಳಿಗೆ, ಕಾರ್ಯಕರ್ತರುಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+