ವಿಧಾನಸೌಧವನ್ನು ವ್ಯಾಪಾರ ಸೌಧವನ್ನಾಗಿ ಮಾಡಿದ್ದು ಕಾಂಗ್ರೆಸ್- ಸಚಿವ ಬಿ.ಸಿ ಪಾಟೀಲ್
ವಿರುಪಾಕ್ಷಪ್ಪ ಪುತ್ರ ಭ್ರಷ್ಟಾಚಾರ ವೈಯಕ್ತಿಕವಾಗಿ ಇರಬಹುದು ಎಂದರು. ಆದರೆ ಈ ಪ್ರಕರಣವನ್ನು ಬಿಜೆಪಿ ಮತ್ತು ಮುಖ್ಯಮಂತ್ರಿ ಜೊತೆ ಜೋಡಿಸುವುದು ಸರಿಯಲ್ಲ, ಯಾರಿಗೂ ಹಣ ಕೊಡಬೇಕೆಂದು ಸಿಎಂ ಬೊಮ್ಮಾಯಿ ಹೇಳಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಚಿತ್ರದುರ್ಗ, ಮಾರ್ಚ್4 : ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರೂ ಹರಿಶ್ಚಂದ್ರರು ಎಂದು ಹೇಳಲಾಗದು, ವಿಧಾನಸೌಧ ಹಾಗೂ ವಿಕಾಸ ಸೌಧವನ್ನು ವ್ಯಾಪಾರ ಸೌಧವನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷದವರು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಭ್ರಷ್ಟಾಚಾರ ವಿಚಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮಗಂತೂ ಯಾವುದೇ ಟಾರ್ಗೆಟ್ ನೀಡಿಲ್ಲ ಎಂದು ಹೇಳಿದರು.

ವಿರುಪಾಕ್ಷಪ್ಪ ಪುತ್ರ ಭ್ರಷ್ಟಾಚಾರ ವೈಯಕ್ತಿಕವಾಗಿ ಇರಬಹುದು ಎಂದರು. ಆದರೆ ಈ ಪ್ರಕರಣವನ್ನು ಬಿಜೆಪಿ ಮತ್ತು ಮುಖ್ಯಮಂತ್ರಿ ಜೊತೆ ಜೋಡಿಸುವುದು ಸರಿಯಲ್ಲ, ಯಾರಿಗೂ ಹಣ ಕೊಡಬೇಕೆಂದು ಸಿಎಂ ಬೊಮ್ಮಾಯಿ ಹೇಳಿಲ್ಲ ಎಂದು ತಿಳಿಸಿದರು.
ಇನ್ನು ಶಾಸಕರು ಹಾಗೂ ಮಂತ್ರಿಗಳಿಗೆ ಸಿಎಂ ಟಾರ್ಗೆಟ್ ಕೊಟ್ಟಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ನೀಡಿದ ಸಚಿವರು ಯಾರು ತಪ್ಪು ಮಾಡಿರುತ್ತಾರೆ, ಅವರು ಶಿಕ್ಷೆ ಅನುಭವಿಸುತ್ತಾರೆ. ಎಲ್ಲಾ ಕಡೆಯೂ ಸ್ವಚ್ಛ ಭಾರತವಿದೆ. ಎಲ್ಲರೂ ಹರಿಶ್ಚಂದ್ರರು ಎಂದು ಹೇಳಲಾಗದು, ವಿಧಾನಸೌಧ, ವಿಕಾಸಸೌಧವನ್ನು ವ್ಯಾಪಾರ ಸೌಧ ಮಾಡಿದ್ದು ಕಾಂಗ್ರೆಸ್‌ನವರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಇಂತಹ ಭ್ರಷ್ಟಾಚಾರಕ್ಕೆ ಕಾಂಗ್ರೆಸ್‌ನವರೇ ಮೂಲ ಕರ್ತೃಗಳು, ಹೀಗಾಗಿ ನಮ್ಮ ಮೇಲೆ ದೂಷಿಸುವುದು ಸರಿಯಲ್ಲ. ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ಮಾಡುವ ಪ್ರಶ್ನೆ ಏನಿದೆ. ಐದು ಬೆರಳುಗಳು ಒಂದೇ ಸಮ ಇರುವುದಿಲ್ಲ, ವ್ಯತ್ಯಾಸ ಇರುತ್ತವೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ತಮ್ಮ ಪಕ್ಷವನ್ನು ಸಚಿವ ಬಿ.ಸಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications