ಹಿರಿಯೂರಿನಲ್ಲಿ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಬರ್ಬರ ಕೊಲೆ
ಹಿರಿಯೂರು, ಜುಲೈ 25: ಕಲ್ಲಿನಿಂದ ಜಜ್ಜಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊರವಲಯದಲ್ಲಿ ನಡೆದಿದೆ.
ಹೊರವಲಯದಲ್ಲಿನ 70 ಕಣಿವೆ ಸೇತುವೆ ಬಳಿ ಇರುವ ತೋಟವೊಂದರಲ್ಲಿ ಕೊಲೆ ನಡೆದಿದ್ದು, ಕೊಲೆಯಾದವರನ್ನು ಲಕ್ಷ್ಮಮ್ಮ ಬಡಾವಣೆಯ ನಿವಾಸಿ ಸರವಣ (45) ಎಂದು ಗುರುತಿಸಲಾಗಿದೆ.

ತಡರಾತ್ರಿ ಈ ಘಟನೆ ನಡೆದಿದ್ದು, ಸರವಣ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಹಿರಿಯೂರು ನಗರ ಪೋಲಿಸರು ಭೇಟಿ ನೀಡಿ ಪರೀಶಿಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications