Chitradurga news: ಕವಾಡಿಗರಹಟ್ಟಿ ಪ್ರಕರಣ ತುಂಬಾ ನಿಗೂಢವಾಗಿದೆ ಎಂದ ನಟ ಚೇತನ್

ಚಿತ್ರದುರ್ಗ, ಆಗಸ್ಟ್‌, 06: ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಮಹಿಳೆಗೆ ಗರ್ಭಪಾತವಾಗಿದ್ದು, ಒಟ್ಟು 6 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್‌ ಪ್ರತಿಕ್ರಿಯಿಸಿ, ಈ ಪ್ರಕರಣ ತುಂಬಾ ನಿಗೂಢವಾಗಿದೆ ಎಂದಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಲುಷಿತ ನೀರಿಂದ ಸಾವು ಆಗಿದೆ ಎನ್ನುತ್ತಾರೆ. ಮತ್ತೊಂದು ಕಡೆ ದಲಿತರನ್ನು ಗುರಿಯಾಗಿಸಿ ಈ ರೀತಿ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಸತ್ಯ ಏನೆಂಬುದು ಗೊತ್ತಾಗಬೇಕು, ಪಾರದರ್ಶಕ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಪರಿಹಾರ ನೀಡಿದ ಮಾತ್ರಕ್ಕೆ ಕುಟುಂಬಕ್ಕೆ ನ್ಯಾಯ ಸಿಗುವುದಿಲ್ಲ, ಹಾಗೂ ಎಲ್ಲವೂ ಸರಿ ಹೋಗುವುದಿಲ್ಲ. ಇತ್ತ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳಿದರು.

ಕುಡಿಯುವ ನೀರು ಆರ್ಟಿಕಲ್ 21ರ ಪ್ರಕಾರ ಮಾನವ ಹಕ್ಕಾಗಿದೆ. ಕುಡಿಯುವ ನೀರಿಗೆ ಬಾಬ ಸಾಹೇಬ್ ಅಂಬೇಡ್ಕರ್ ಹೋರಾಟ ಮಾಡಿದ್ದಾರೆ. ಇಲ್ಲಿನ ಜಿಲ್ಲಾಡಳಿತ ದಲಿತರನ್ನು ಕಾಪಾಡುವಲ್ಲಿ ವೈಫಲ್ಯ ಮಾಡಿದೆ. ಅಲ್ಲದೆ ರಾಜ್ಯ ಸರ್ಕಾರ SCP-TSP ಹಣವನ್ನು ದುರ್ಬಳಕೆ ಮಾಡುತ್ತಿದೆ. ಇದೊಂದು ದಲಿತ ವಿರೋಧ ಸರ್ಕಾರ ಎಂದರು.

Kavadigarhatti contaminated water consumption case is mysterious: Chetan Kumar

ಚಿತ್ರದುರ್ಗದಲ್ಲಿ ನೂರಾರು ಜನ ಶೋಷಿತರು ಮಾತ್ರ ಬಲಿಯಾಗುತ್ತಿದ್ದಾರೆ. ದಲಿತರು ಮತ, ಪ್ರಚಾರಕ್ಕೆ ಬೇಕು. ಆದರೆ ಇಲ್ಲಿ ಸಾಯುವವರು ದಲಿತರೇ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಈ ಘಟನೆ ಸದಾಶಿವನಗರ, ಡಾಲರ್ಸ್ ಕಾಲೋನಿಯಲ್ಲಿ ಆಗಿದ್ದಿದ್ದರೆ ಅಂತಾರಾಷ್ಟ್ರೀಯ ಸುದ್ದಿಯಾಗಿರುತ್ತಿತ್ತು. ಸರ್ಕಾರ ಇದನ್ನು ಪಾರದರ್ಶಕ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ನಾವು ಕೂಡ ಜನರಲ್ಲಿ ನೀರಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಮರು ತನಿಖೆ ಆಗುವುದು ತಪ್ಪಲ್ಲ, ಮರು ತನಿಖೆ ಆಗಬೇಕು. ಈ ಕೇರಿಯಲ್ಲಿ ಮಾತ್ರ ಘಟನೆ ಸಂಬವಿಸಿದೆ, ತನಿಖೆ ಬೇಗ ನಡೆಸಬೇಕು. ಈ ಕೇಸ್ ತುಂಬಾ ನಿಗೂಢವಾಗಿದ್ದು, ಇಷ್ಟು ಮಂದಿ ಸತ್ತಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+