Get Updates
Get notified of breaking news, exclusive insights, and must-see stories!

Shiva Rajkumar: ಕೋಟೆನಾಡಿಗೆ ಶಿವಣ್ಣ ಭೇಟಿ, ಅಭಿಮಾನಿಗಳಿಂದ ಭರ್ಜರಿ ಸ್ವಾಗತ

ಚಿತ್ರದುರ್ಗ, ಮಾರ್ಚ್ 11: ನಟ ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅಭಿನಯದ ಯೋಗರಾಜ ಭಟ್ ನಿರ್ದೇಶನದ 'ಕರಟಕ ದಮನಕ' (Karataka Dhamanaka) ಸಿನಿಮಾ ಯಶಸ್ವಿ ಪ್ರದರ್ಶನ ಪಡೆದು ಮುನ್ನುಗ್ಗುತ್ತಿದೆ. ಇದೀಗ ಈ ಚಿತ್ರತಂಡವು ಕೋಟೆನಾಡು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದು, ಶಿವಣ್ಣನಿಗೆ ಸಹಸ್ರಾರು ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ದಾರೆ.

ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾ ಪ್ರೇಕ್ಷಕ ಪ್ರಭುಗಳಿಂದ ವ್ಯಾಪಕ ಸ್ಪಂದನೆ ಪಡೆಯುತ್ತಿದೆ. ಕಳೆದ ಶುಕ್ರವಾರ ಮಾರ್ಚ್‌ 8ರಂದು ಸಿನಿಮಾ ತೆರೆ ಕಂಡಿತ್ತು. ಇದರ ಯಶಸ್ವಿ ಪ್ರದರ್ಶನ ಹಿನ್ನೆಲೆಯಲ್ಲಿ ಸೋಮವಾರ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ಸೆಂಚುರಿ ಸ್ವಾರ್ ಡಾ. ಶಿವರಾಜಕುಮಾರ್ ಹಾಗೂ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಅವರು ಭೇಟಿ ನೀಡಿದ್ದಾರೆ.

Karataka Damanaka Actor Shiva RajKumar Visit Chitradurga on Monday Share Film Succes with Fans

ಇಲ್ಲಿನ ಬಸವೇಶ್ವರ ಚಿತ್ರಮಂದಿರದಲ್ಲಿ ಮಾರ್ಚ್ 8ರಂದು 'ಕರಟಕ ದಮನಕ' ಚಿತ್ರ ತೆರೆಕಂಡಿದೆ. ನೆಚ್ಚಿನ ನಟ ಶಿವಣ್ಣ ಆಗಮಿಸುವ ಸುದ್ದಿ ಕೇಳಿ ಜಿಲ್ಲೆಯ ಜನರು, ಮೂಲೆ ಮೂಲೆಗಳಿಂದ ಅಭಿಮಾನಿಗಳು ಬೆಳಗ್ಗೆಯಿಂದಲೇ ಚಿತ್ರಮಂದಿರದತ್ತ ಆಗಮಿಸಿದ್ದರು. ಚಿತ್ರಮಂದಿರದ ಆವರಣದಲ್ಲಿ ಕಿಕ್ಕಿರಿದು ಜನರು ಸೇರಿದ್ದರು.

ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು

ನಟ ಶಿವರಾಜಕುಮಾರ್ ಅವರಿಗೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಸಿನಿಮಾ‌ ಮಂದಿರ ಮಾಲೀಕ ಮಧು, ನಾಯಕ ಸಮುದಾಯದ ಮುಖಂಡ ಡಿ.ಗೋಪಾಲಸ್ವಾಮಿ ಸೇರಿ ಅನೇಕರು ಸಾಥ್ ನೀಡಿದರು. ಅಭಿಮಾನಿಗಳು ನಟ ಶಿವರಾಜ ಕುಮಾರ್ ಗೆ ಡೊಳ್ಳು ವಾದ್ಯಗಳಿಂದ ಅದ್ಧೂರಿ ಸ್ವಾಗತ ಕೋರಿದರು. ನೆಚ್ಚಿನ ನಟ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಿನಿಮಾ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಈ ಸಂಬಂಧ ಚಿತ್ರಮಂದಿರದಲ್ಲಿ ಡಾ. ಶಿವರಾಜ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ತಮಗೂ ಕೊಟೆನಾಡಿಗೂ ಇರುವ ಸಂಬಂಧ ಇದೆ ಎಂದು ಅವರು ಸ್ಮರಿಸಿದರು. ಕರಟಕ ದಮನಕ ಚಿತ್ರದ ಮೇಕಿಂಗ್ ಬಗ್ಗೆ ಚರ್ಚೆ ನಡೆಸಿದರು. ಇನ್ನು ನಿರ್ದೇಶಕ ಯೋಗರಾಜ ಭಟ್ ಅವರು ಚಿತ್ರದುರ್ಗ ಕುರಿತು ಭಾಂದವ್ಯ ನೆನೆದರು. ಸಿನಿಮಾ ಕಥೆ, ಚಿತ್ರಕಥೆ, ನಿರ್ದೇಶನ ಕುರಿತು ಮಾಹಿತಿ ನೀಡಿದರು.

Karataka Damanaka Actor Shiva RajKumar Visit Chitradurga on Monday Share Film Succes with Fans

ವೀಕೆಂಡ್‌ನಲ್ಲಿ ಉತ್ತಮ ಪ್ರದರ್ಶನ

ಶಿವರಾತ್ರಿ ದಿನ ಶುಕ್ರವಾರ ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನ ಅಷ್ಟಾಗಿ ಜನರ ಚಿತ್ರಮಂದಿರದತ್ತ ಬಾರದಿದ್ದು, ನಂತರ ರಜಾದಿನವಾದ ಶನಿವಾರ ಮತ್ತು ಭಾನುವಾರ ಅಭಿಮಾನಿಗಳು ಚಿತ್ರ ನೋಡಿ ಹರಸಿದ್ದಾರೆ. ಎಲ್ಲೆಡೆ ಸಿನಿಮಾ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆ. ನಟ ಶಿವಣ್ಣ, ಪ್ರಭುದೇವ ಅವರು ಹಾಗೂ ನಿರ್ದೇಶಕ ಯೋಗರಾಜ ಭಟ್ ಅವರ ಜೋಡಿ ಕಮಾಲ್ ಮಾಡುತ್ತಿದೆ.

ಉತ್ತರ ಕರ್ನಾಟಕದಲ್ಲಿ ಶಿವಣ್ಣ ವಿಜಯಯಾತ್ರೆ

ಕರಟಕ ದಮನಕ ಸಿನಿಮಾಗಾಗಿ ಶಿವಣ್ಣ ಎರಡು ದಿನ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಚಿತ್ರದುರ್ಗ ಬಳಿಕ ಬೆಣ್ಣೆ ನಗರಿ ದಾವಣಗೆರೆಗೆ ಮಧ್ಯಾಹ್ನ ಭೇಟಿ ಅವರು ನೀಡಲಿದ್ದಾರೆ. ನಾಳೆ ಮಂಗಳವಾರ (ಮಾರ್ಚ್ 12) ಎರಡನೇ ದಿನ ಬೆಳಗ್ಗೆ ಬೆಳಗಾವಿ, ನಿಪ್ಪಾಣಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಆಗಮಿಸಲಿರುವ ಶಿವಣ್ಣ, ಸಂಜೆ ರಾಣಿಬೆನ್ನೂರಿಗೆ ಆಗಮಿಸಿ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+