• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿತ್ರದುರ್ಗದ ಆಡುಮಲ್ಲೇಶ್ವರ ಕಿರುಮೃಗಾಲಯದಲ್ಲಿದೆ ಉದ್ಯೋಗಾವಕಾಶ

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ಫೆಬ್ರವರಿ 21: ಚಿತ್ರದುರ್ಗದ ಆಡುಮಲ್ಲೇಶ್ವರ ಕಿರುಮೃಗಾಲಯದಲ್ಲಿ ಖಾಲಿ ಇರುವ ಬಯಾಲಜಿಸ್ಟ್ ವೆಟರ್ನರಿಯನ್, ಪಶುವೈದ್ಯ ಮತ್ತು ಸಿವಿಲ್ ಇಂಜಿನಿಯರ್ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬಯಾಲಜಿಸ್ಟ್ ಹುದ್ದೆಗೆ ಬಿಎಸ್ ‍ಸಿ ಪ್ರಾಣಿಶಾಸ್ತ್ರ ಅಥವಾ ಎಂಎಸ್ಸಿ ಪ್ರಾಣಿಶಾಸ್ತ್ರ ಪದವಿ ಪಡೆದಿರಬೇಕು. ವೇತನ ರೂ.10000/ ದಿಂದ 15000/ ಗಳ ವರೆಗೆ ನಿಗದಿಪಡಿಸಲಾಗಿದೆ. ವೆಟರ್ನರಿ ಅಸಿಸ್ಟೆಂಟ್ ಹುದ್ದೆಗೆ ಡಿಪ್ಲೊಮೋ ಇನ್ ವೆಟರ್ನರಿ ಪಡೆದಿರಬೇಕು. ಈ ಹುದ್ದೆಗೆ ವೇತನ ರೂ.10000/ ದಿಂದ 15000/ರೂ ನೀಡಲಾಗುವುದು.

ಕರ್ನಾಟಕ ಪೊಲೀಸ್ ನೇಮಕಾತಿ; 54 ಹುದ್ದೆಗಳಿಗೆ ಅರ್ಜಿ ಹಾಕಿ

ಸಿವಿಲ್ ಇಂಜಿನಿಯರ್ ಹುದ್ದೆಗೆ ಬಿಇ ಸಿವಿಲ್ ಇಂಜಿನಿಯರ್ ಪದವಿ ಪಡೆದಿರಬೇಕು. ಈ ಹುದ್ದೆಗೆ ವೇತನ ರೂ. 15000/ದಿಂದ 20000 ರೂಪಾಯಿಗಳವರೆಗೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಇದೇ ಫೆ.25ರಂದು ಬೆಳಿಗ್ಗೆ 11 ಗಂಟೆಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಚಿತ್ರದುರ್ಗ ವಿಭಾಗ, ವಿ.ಪಿ.ಬಡಾವಣೆ, ಚಿತ್ರದುರ್ಗ ಕಚೇರಿ ಸಭಾಂಗಣದಲ್ಲಿ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುವುದು ಎಂದು ಚಿತ್ರದುರ್ಗ ಆಡುಮಲ್ಲೇಶ್ವರ ಕಿರುಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

English summary
Applications are invited from interested candidates for recruitment of vacant Biologist Veterinarian, Veterinary doctor and Civil Engineer posts at Adumalleswara kiru mrugalaya in Chitradurga,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X