ಮ.ಪ್ರ ದಲ್ಲಿ ಲಾಕ್ ಆಗಿದ್ದ ಚಿತ್ರದುರ್ಗ ವಿದ್ಯಾರ್ಥಿಗಳು ವಾಪಾಸ್
ಚಿತ್ರದುರ್ಗ, ಮೇ 3: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಪರಿಣಾಮ ಮಧ್ಯಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಚಿತ್ರದುರ್ಗದ 21 ವಿದ್ಯಾರ್ಥಿಗಳು ಕೊನೆಗೂ ತವರಿಗೆ ಮರಳಿದ್ದಾರೆ. ಮಕ್ಕಳು ಸಿಲುಕಿರುವ ವಿಷಯ ತಿಳಿದ ಪೋಷಕರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.
21 ವಿದ್ಯಾರ್ಥಿಗಳು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ಗ್ರಾಮದ ನವೋದಯ ಶಾಲೆಯಲ್ಲಿ ಓದುತ್ತಿದ್ದ, 9 ನೇ ತರಗತಿಯ 11 ವಿದ್ಯಾರ್ಥಿನಿಯರು ಮತ್ತು 12 ವಿದ್ಯಾರ್ಥಿಗಳು ಸೇರಿ ಒಟ್ಟು 23 ವಿದ್ಯಾರ್ಥಿಗಳು ಹಿರಿಯೂರು ನವೋದಯ ಶಾಲೆಯಿಂದ 1 ವರ್ಷದ ಮೈಗ್ರೇಶನ್ ಕೋರ್ಸ್ ಗಾಗಿ ಮಧ್ಯಪ್ರದೇಶದ ಇಂದೋರ್ ಸಮೀಪದ ದೇವಾಸ್ ನಗರದಲ್ಲಿರುವ ನವೋದಯ ವಿದ್ಯಾಲಯಕ್ಕೆ ವರ್ಗಾವಣೆ ಆಗಿದ್ದರು.

ದೇವಾಸ್ ಸುತ್ತಮುತ್ತ ಕೊರೊನಾ ವೈರಸ್ ಹೆಚ್ಚಾಗಿದ್ದರಿಂದ ವಿಡಿಯೋ ಮೂಲಕ ವಿದ್ಯಾರ್ಥಿಗಳು, ಪೋಷಕರಿಗಾಗಿ ಕಣ್ಣೀರು ಇಟ್ಟಿದ್ದರು. ಮೇ 1 ರಂದು ಮಧ್ಯಪ್ರದೇಶ ಬಿಟ್ಟ ವಿದ್ಯಾರ್ಥಿಗಳು ಮೇ ೨ ರ ಸಂಜೆ ಹಿರಿಯೂರಿನ ನವೋದಯ ಶಾಲೆಗೆ ಮರಳಿ ಬಂದಿದ್ದಾರೆ.

21 ದಿನಗಳ ಕಾಲ ವಿದ್ಯಾರ್ಥಿಗಳನ್ನು ಹೋಮ್ ಕ್ವಾರಂಟೈನ್ ಇರಿಸಲಾಗಿದ್ದು, ಈ ವಿಷಯ ತಿಳಿದ ಪೋಷಕರು, ಮಕ್ಕಳನ್ನು ಭೇಟಿ ಮಾಡಿ ಮರಳಿ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications