• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುಚ್ಚು ಮಾತಾಡಲ್ಲ; ನನ್ನನ್ನು ಕ್ಷಮಿಸಿ ಅಣ್ಣ ಎಂದು ಕೇಳಿಕೊಂಡ ಶ್ರೀರಾಮುಲು

By ಚಿತ್ರದುರ್ಗ ಪ್ರತಿನಿಧಿ
|
   ಡಿಕೆಶಿಗೆ ಕೈ ಮುಗಿದು ಸಾರಿ ಕೇಳಿದ ಶ್ರೀ ರಾಮುಲು..! | Sriramulu | Oneindia Kannada

   ಚಿತ್ರದುರ್ಗ, ಸೆಪ್ಟೆಂಬರ್ 3: ಇಡಿ ವಿಚಾರಣೆಯಿಂದಾಗಿ ತನ್ನ ತಂದೆಗೆ ಎಡೆ ಇಡಲಿಕ್ಕೂ ಆಗಲಿಲ್ಲ ಎಂದು ನಿನ್ನೆ ಡಿ.ಕೆ. ಶಿವಕುಮಾರ್ ಕಣ್ಣೀರಿಟ್ಟಿದ್ದರು. ಅದಕ್ಕೆ ಮರುಗಿರುವ ಆರೋಗ್ಯ ಮಂತ್ರಿ ಬಿ.ಶ್ರೀರಾಮುಲು, "ನನ್ನನ್ನು ಕ್ಷಮಿಸಿ ಡಿ.ಕೆ.ಶಿವಕುಮಾರ್ ಅಣ್ಣ" ಎಂದು ಕೇಳಿಕೊಂಡಿದ್ದಾರೆ.

   ಬಂಧನ ಭೀತಿಯಲ್ಲಿ ಡಿಕೆ ಶಿವಕುಮಾರ್: ಶ್ರೀರಾಮುಲು ಅಣ್ಣ ಉವಾಚ

   ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಹೊನ್ನೂರು ಗ್ರಾಮದಲ್ಲಿ ಮಾತನಾಡಿದ ಶ್ರೀರಾಮುಲು, "ರಾಜಕೀಯವಾಗಿ ಡಿ.ಕೆ ಶಿವಕುಮಾರ್​ ಅವರು ನನ್ನನ್ನು ಕೆಣಕುವಂತೆ ಮಾತನಾಡಿದ್ದರು. ನಾನೂ ಅವರನ್ನು ಕೆಣಕುವಂತೆ ಮಾತನಾಡುತ್ತಿದ್ದೆ. ಆದರೆ ನನ್ನ ಭಾಷೆ ರಾಜಕಾರಣಕ್ಕೆ ಸೀಮಿತವಾಗಿತ್ತು. ಅದರ ಹೊರತು ವೈಯಕ್ತಿಕವಾಗಿ ಡಿಕೆಶಿ ಅವರ ಬಗ್ಗೆ ನಾನು ಮಾತನಾಡಿಲ್ಲ" ಎಂದಿದ್ದಾರೆ ಶ್ರೀರಾಮುಲು.

   "ಡಿ.ಕೆ.ಶಿವಕುಮಾರ್ ಅವರು ಈಗ ಕಷ್ಟದಲ್ಲಿದ್ದಾರೆ, ಕಾನೂನು ಏನು ಮಾಡಬೇಕೋ ಅದನ್ನು ಮಾಡುತ್ತದೆ, ಇಂಥ ಸಮಯದಲ್ಲಿ ಅವರ ಬಗ್ಗೆ ಚುಚ್ಚು ಮಾತನಾಡಲು ನಾನು ಇಷ್ಟಪಡುವುದಿಲ್ಲ, ನನ್ನಿಂದ ನಿಮಗೆ ನೋವಾಗಿದ್ದರೆ, ಕೈಮುಗಿದು ಕೇಳಿಕೊಳ್ತೇನೆ. ನನ್ನನ್ನು ಕ್ಷಮಿಸಿಬಿಡಿ ಶಿವಕುಮಾರ್ ಅಣ್ಣ" ಎಂದು ಬಹಿರಂಗವಾಗಿ ಮಾಧ್ಯಮಗಳೆದುರು ಕೇಳಿಕೊಂಡಿದ್ದಾರೆ.

   ಡಿಸಿಎಂ ಹುದ್ದೆ ಬದಲಿಗೆ ರಾಮುಲು ಮುಂದಿಟ್ಟರು ಪ್ರಮುಖ ಬೇಡಿಕೆ

   ಇನ್ನು ಸಿದ್ದರಾಮಯ್ಯ ಅವರ ಮಧ್ಯಂತರ ಚುನಾವಣೆಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸು ಕಾಣ್ತಿದ್ದಾರೆ, ಅವರ ಕನಸು ನನಸಾಗುವುದಿಲ್ಲ, ಈಗಾಗಲೇ ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಿದೆ" ಎಂದು ವ್ಯಂಗ್ಯವಾಡಿದರು.

   English summary
   Health Minister B Sriramulu apolozise DK Shivakumar in chitradurga.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X