ಬರಗಾಲ, ದರ ಏರಿಕೆ: ಚಿತ್ರದುರ್ಗದ ಮಾರುಕಟ್ಟೆಯಲ್ಲಿ ಹೇಗಿದೆ ದಸರಾ ಹಬ್ಬದ ವ್ಯಾಪಾರ..?
ಚಿತ್ರದುರ್ಗ, ಅಕ್ಟೋಬರ್ 23: ಪ್ರಸಕ್ತ ಸಾಲಿನಲ್ಲಿ ಮಳೆ ಕಡಿಮೆಯಾಗಿ ಬರಗಾಲ ಆವರಿಸಿದರೆ ಮತ್ತೊಂದು ಕಡೆ ನಾಡಿನಾದ್ಯಂತ ಸಡಗರ ಸಂಭ್ರಮಾಚರಣೆಯ ಆಯುಧ ಪೂಜೆ, ವಿಜಯದಶಮಿ ಸಂಭ್ರಮ ನಾಡಿನೆಲ್ಲೆಡೆ ಕಳೆಗಟ್ಟಿದೆ. ಪೂಜಾ ಸಾಮಗ್ರಿಗಳ ಖರೀದಿ ಬಲು ಜೋರಾಗಿಯೇ ಇದೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಇಂದು ಸೋಮವಾರ ಆಯುಧ ಪೂಜೆ ಆಚರಿಸಲಾಗುತ್ತಿದೆ. ಭಾನುವಾರದಿಂದಲೇ ಹಲವೆಡೆ ಪೂಜೆ ಕಾರ್ಯಗಳು ನಡೆಯುತ್ತಿವೆ. ಜಿಲ್ಲೆಯ ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆ ಸೇರಿದಂತೆ ಮೊಳಕಾಲ್ಮೂರು ಭಾಗದಲ್ಲಿ ಖರೀದಿ ಜೋರಾಗಿದೆ.

ಇಂದು ಆಯುಧ ಪೂಜೆ, ಮಂಗಳವಾರ ವಿಜಯದಶಮಿ ಹಿನ್ನೆಲೆ ಹೂ, ಹಣ್ಣು, ಕುಂಬಳಕಾಯಿ, ಬಾಳೆಕಂದು ಬೆಲೆಗಳು ಗಗನಕ್ಕೆ ತಲುಪಿವೆ. ಆದರೂ ಗ್ರಾಹಕರು ಮಾತ್ರ ಖರೀದಿಯಲ್ಲಿ ತೊಡಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ವಸ್ತುಗಳ ದರ ಹೆಚ್ಚಳವಾಗಿದೆ.
ತೆಂಗಿನ ಕಾಯಿ 20 ರಿಂದ 25/30 ರೂಪಾಯಿ ಆಗಿದೆ. ಪುಟ್ ಬಾಳೆ ಕೆಜಿಗೆ 80 ರಿಂದ 120 ರೂಪಾಯಿ, ಸೇವಂತಿ ಹೂ ಒಂದು ಮಾರಿಗೆ 80 ರಿಂದ 120 ರೂಪಾಯಿ, ಕನಕಾಂಬರ ಹೂವು 100 ರಿಂದ 120/130 ರೂಪಾಯಿ, ಗುಲಾಬಿ ಒಂದಕ್ಕೆ 20 -30 ರೂಪಾಯಿ, ಚೆಂಡು ಹೂವು 50 ರಿಂದ 80 ರೂಪಾಯಿ, ಸೇಬು ಕೆಜಿಗೆ 150 ರಿಂದ 200 ರೂಪಾಯಿ, ಕಿತ್ತಳೆ ಕೆಜಿಗೆ 50 ರಿಂದ 80 ರೂಪಾಯಿ , ಬಾಳೆ ಕಂದು ಜೋಡಿ 20 ರಿಂದ 50 ರೂಪಾಯಿ ಈಗೆ ವಿವಿಧ ದರಗಳು ಗಗನಕ್ಕೇರುತ್ತಿವೆ. ಇದಲ್ಲದೆ ತರಕಾರಿ ಬೆಳೆಗಳು ಸಹ ಏರಿಕೆಯಾಗಿವೆ.

ಬೆಂಗಳೂರಿನಲ್ಲಿ ಹೂ-ಹಣ್ಣುಗಳ ದರಗಳ ವಿವರ
ಗಗನಕ್ಕೇರಿದ ಹೂಗಳ ದರ(ಕೆಜಿಗೆ)
ಮಲ್ಲಿಗೆ- 1000 ರಿಂದ 1200 ರೂ.
ಸೇವಂತಿಗೆ- 300 ರಿಂದ 500 ರೂ.
ಗುಲಾಬಿ-200 ರಿಂದ 309 ರೂ.
ಕನಕಾಂಬರ-1100 ದಿಂದ 1300 ರೂ.
ಮಳ್ಳೆ ಹೂವು-800 ರಿಂದ 1000 ರೂ.
ಹಣ್ಣುಗಳ ದರವೂ ದುಬಾರಿ
ಏಲಕ್ಕಿ ಬಾಳೆ -120 ರಿಂದ 140 ರೂ.
ಅನಾನಸ್ -40 ರಿಂದ 70 ರೂ.
ದಾಳಿಂಬೆ - 100 ರಿಂದ 150 ರೂ.
ಸೇಬು -180 ರಿಂದ 350 ರೂ.
ಇನ್ನು ಬೂದುಕುಂಬಳಕಾಯಿ ಕೆಜಿಗೆ 20 ರಿಂದ 30 ರೂ ಇದ್ದು, ಬಾಳೆ ಕಂಬ ಜೋಡಿಗೆ 100 ರಿಂದ 150 ರೂ. ಇದೆ












Click it and Unblock the Notifications