ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಕೊಲೆಯಾಗಿದ್ದ ರೇಣುಕಾಸ್ವಾಮಿ ಪತ್ನಿಗೆ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ
ಚಿತ್ರದುರ್ಗ, ಅಕ್ಟೋಬರ್, 16: ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಕೊಲೆಯಾಗಿರುವ ಮೃತ ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯ ಕೀರ್ತಿ ಆಸ್ಪತ್ರೆಯಲ್ಲಿ ಇಂದು (ಅಕ್ಟೋಬರ್ 16) ಬೆಳಗ್ಗೆ 6:55ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ಮಲ್ಲಿಕಾರ್ಜುನ್ ಅವರು, ಸಹನಾ ನಮ್ಮ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುತ್ತಿದ್ದರು. ಆದ್ದರಿಂದ ಅವರಿಗೆ ಯಾವುದೇ ಶುಲ್ಕ ಇಲ್ಲದೇ ಉಚಿತವಾಗಿ ಹೆರಿಗೆ ಮಾಡಲಾಗಿದೆ ಎಂದು ತಿಳಿಸಿದರು.

ನಿನ್ನೆ (ಅಕ್ಟೋಬರ್ 15) ರಾತ್ರಿ ಸಹನಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಇಂದು (ಅಕ್ಟೋಬರ್ 16) ಮುಂಜಾನೆ 6:55ಕ್ಕೆ ಸಹಜ ಹೆರಿಗೆ ಆಗಿದೆ. ಇದೀಗ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ. 36 ವಾರಗಳಿಗೆ ಪ್ರೀ ಮೆಚ್ಯುವರ್ ಹೆರಿಗೆ ಆಗಿದೆ. ಸದ್ಯ ತಾಯಿ ಹಾಗೂ ಮಗು ಚೆನ್ನಾಗಿದ್ದು, ಮಗುವಿನ ತೂಕ ಕಡಿಮೆ ಇದೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ ಪತಿಯನ್ನು ಕಳೆದುಕೊಂಡಿರುವ ಸಹನಾ ಮಾನಸಿಕವಾಗಿ ನೊಂದಿದ್ದರು. ಆದ್ದರಿಂದ ಮಗುವಿನ ತೂಕ ಕೂಡ ಕಡಿಮೆ ಇತ್ತು. ಮೆಡಿಕಲ್ ಆಗಿ ಏನೇನು ಮಾಡಬೇಕೋ ಅದೆಲ್ಲಾ ಮಾಡಾಗಿದೆ. ಆದ್ದರಿಂದ ಸಹಜವಾಗಿ ಹೆರಿಗೆ ಆಗಿದೆ. ಮೂರ್ನಾಲ್ಕು ದಿನ ಮಗುವಿನ ಆರೋಗ್ಯ ನಿಗಾ ಇರಿಸಿ, ನಂತರ ಡಿಸ್ಚಾರ್ಜ್ ಮಾಡುತ್ತೇವೆ. ಸಹನಾ ಮೊದಲಿನಿಂದ ನಮ್ಮ ಆಸ್ಪತ್ರೆಯಲ್ಲೇ ತೋರಿಸುತ್ತಿದ್ದರು. ಅವರಿಗೆ ಯಾವುದೇ ಚಾರ್ಜ ಇಲ್ಲದೇ ಉಚಿತವಾಗಿ ಹೆರಿಗೆ ಮಾಡಿಸಿದ್ದೇವೆ ಎಂದು ಕೀರ್ತಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ಮಲ್ಲಿಕಾರ್ಜುನ್ ತಿಳಿಸಿದರು.
ರೇಣುಕಾಸ್ವಾಮಿ ತಂದೆ ಹೇಳಿದ್ದೇನು?: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ಕೋರ್ಟ್ ವಜಾಗೊಳಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೃತ ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಅಕ್ಟೋಬರ್ 14ರಂದು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಕೊಲೆ ಆರೋಪಿಗಾಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇನ್ನು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಮತ್ತೆ ಬಳ್ಳಾರಿ ಜೈಲೇ ಗತಿಯಾಗಿದ್ದು, ಮತ್ತೊಂದೆಡೆ ಪವಿತ್ರಾ ಗೌಡ ಈ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ನಿಂದ ಈ ತೀರ್ಪು ಹೊರ ಬರುತ್ತಿದ್ದಂತೆಯೇ ಮೃತನ ತಂದೆ ಕಾಶಿನಾಥ್ ಭಾವುಕರಾಗಿದ್ದಾರೆ. "ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ. ಪೊಲೀಸರು ಪ್ರಕರಣದಲ್ಲಿ ತುಂಬಾ ಚನ್ನಾಗಿ ಕೆಲಸ ಮಾಡಿದ್ದಾರೆ. ನ್ಯಾಯಾಂಗದ ತೀರ್ಪನ್ನು ಸ್ವಾಗತಿಸುತ್ತೇನೆ," ಎಂದು ಹೇಳುತ್ತಲೇ ಕಣ್ಣೀರಿಟ್ಟರು.
"ಅಲ್ಲದೆ, ಕೋರ್ಟ್‌ನಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ಕೂಡ ತಮ್ಮ ಪರವಾಗಿ ಉತ್ತಮವಾಗಿ ವಾದ ಮಂಡನೆ ಮಾಡುತ್ತಿದ್ದಾರೆ," ಎಂದು ಚಿತ್ರದುರ್ಗದ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ರೇಣುಕಾಸ್ವಾಮಿ ತಂದೆ ಹೇಳಿದರು.












Click it and Unblock the Notifications