ಚಿತ್ರದುರ್ಗ: ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ...
ಚಿತ್ರದುರ್ಗ, ಆಗಸ್ಟ್ 19: ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
Recommended Video
Vedkrishi-ರೈತರಿಗೆ ಉಪಯೋಗವಾಗುತ್ತೆ ಈ ಅಪ್ಲಿಕೇಶನ್ | Oneindia Kannada
ಚಿತ್ರದುರ್ಗ ತಾಲೂಕಿನ ಅಡವಿ ಗೊಲ್ಲರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೇರೊಂದು ಪ್ರಕರಣಕ್ಕೆ ತಳುಕು ಹಾಕಿ ದಲಿತ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಹಲ್ಲೆಗೊಳಗಾದವರ ವಿರುದ್ಧವೇ ಹಲ್ಲೆಕೋರರು ದೂರು ದಾಖಲಿಸಿದ್ದಾರೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಸುಪಾರಿ ಹಂತಕರೆಂದು ದೂರು ನೀಡಿದ್ದಾರೆ.

ರಾತ್ರಿ ವೇಳೆ ಅಮಾಯಕ ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಥಳಿಸಿರುವ ವಿಡಿಯೋ ಲಭ್ಯವಾಗಿದೆ. ಈ ಮೂವರು ಯುವಕರು ಗಾರೆ ಕೆಲಸ ಮಾಡಿಕೊಂಡಿದ್ದರು.

ಚಿತ್ರದುರ್ಗದ ಚೋಳಗುಡ್ಡ ನಿವಾಸಿ ಜಯಸೂರ್ಯ, ಹೊಳಲ್ಕೆರೆ ತಾಲ್ಲೂಕಿನ ಎಚ್.ಡಿ ಪುರ ನಿವಾಸಿ ಮಾರುತಿ, ಶರತ್ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ. ಈ ಸಂಬಂಧ ಪೂರ್ವಪರ ವಿಚಾರಿಸದೆ ಅಮಾಯಕರ ವಿರುದ್ಧ ಭರಮಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications