• search
 • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಕಾರಿ ಬಸ್‌ನಲ್ಲಿ ಚಿತ್ರದುರ್ಗ-ಜೋಗ ಪ್ರವಾಸ; ದರಪಟ್ಟಿ

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ, ಜುಲೈ 25; ಶರಾವತಿ ನದಿ ಪಾತ್ರದ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಜೋಗ ಜಲಪಾತದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸಿಗರು ಜೋಗದ ಸೌಂದರ್ಯ ಸವಿಯಲು ಆಗಮಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗದ ವತಿಯಿಂದ ಚಿತ್ರದುರ್ಗ-ಜೋಗ ವಿಶೇಷ ಪ್ರವಾಸಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಜನರ ಅನುಕೂಲಕ್ಕಾಗಿ ಪ್ರತಿ ಭಾನುವಾರ ಹಾಗೂ ರಜೆ ದಿನಗಳಲ್ಲಿ ಚಿತ್ರದುರ್ಗ ನಗರದಿಂದ ಜೋಗ ಜಲಪಾತಕ್ಕೆ ವೇಗದೂತ ಬಸ್ ಸಂಚಾರ ನಡೆಸಲಿದೆ.

ಚಿತ್ರದುರ್ಗ ವಿಶೇಷ; ಮರೆಯಾಗುತ್ತಿದೆ ಬಡವರ ಖರ್ಜೂರವಾದ ಈಚಲು ಮರಗಳು ಚಿತ್ರದುರ್ಗ ವಿಶೇಷ; ಮರೆಯಾಗುತ್ತಿದೆ ಬಡವರ ಖರ್ಜೂರವಾದ ಈಚಲು ಮರಗಳು

ಬಸ್ ಬೆಳಗ್ಗೆ ಚಿತ್ರದುರ್ಗ ನಗರದಿಂದ 6 ಗಂಟೆ ಹೊರಟು 11 ಗಂಟೆಗೆ ಜೋಗಕ್ಕೆ ತಲುಪುತ್ತದೆ. ನಂತರ ಜೋಗದಿಂದ ಸಂಜೆ 4 ಗಂಟೆಗೆ ಹೊರಟು ರಾತ್ರಿ 9 ಗಂಟೆಗೆ ಚಿತ್ರದುರ್ಗಕ್ಕೆ ವಾಪಸ್ ಆಗುತ್ತದೆ. ಚಿತ್ರದುರ್ಗ-ಜೋಗ ಪ್ರವಾಸಿ ಪ್ಯಾಕೇಜ್‌ಗೆ ಎರಡು ಕಡೆ ಸೇರಿ 450 ರೂ. ದರ ನಿಗದಿ ಮಾಡಲಾಗಿದೆ.

ಜೋಗ ವೀಕ್ಷಣೆಗೆ ಬಂದವರಿಗೆ ಇವತ್ತು ನಿರಾಸೆ, ರಾಜ, ರಾಣಿ, ರೋರರ್, ರಾಕೆಟ್ ನಾಪತ್ತೆ ಜೋಗ ವೀಕ್ಷಣೆಗೆ ಬಂದವರಿಗೆ ಇವತ್ತು ನಿರಾಸೆ, ರಾಜ, ರಾಣಿ, ರೋರರ್, ರಾಕೆಟ್ ನಾಪತ್ತೆ

ಒಂದು ಕಡೆಯ ಪ್ರಯಾಣಕ್ಕೆ 220 ರೂ. ದರವಿದೆ. ಇನ್ನು ಮಕ್ಕಳಿಗೆ ಎರಡು ಕಡೆ ಸೇರಿ 350 ರೂ. ಟಿಕೆಟ್ ಪಡೆಯಬೇಕು. ಒಂದು ಕಡೆಯ ಪ್ರಯಾಣಕ್ಕೆ 150 ರೂ. ದರವಿದೆ. ಹೆಚ್ಚಿನ ಮಾಹಿತಿಗಾಗಿ ವಿಭಾಗಿಯ ನಿಯಂತ್ರಣಾಧಿಕಾರಿಗಳು ಚಿತ್ರದುರ್ಗ ಇವರನ್ನು ಸಂಪರ್ಕಿಸಬಹುದಾಗಿದೆ.

 ಅಂತರ ರಾಷ್ಟ್ರೀಯ ಪ್ರವಾಸಿ ತಾಣವಾಗಿ ಜೋಗ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ ಅಂತರ ರಾಷ್ಟ್ರೀಯ ಪ್ರವಾಸಿ ತಾಣವಾಗಿ ಜೋಗ ಅಭಿವೃದ್ಧಿ: ಸಂಸದ ಬಿ.ವೈ.ರಾಘವೇಂದ್ರ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಂಗಡ ಬುಕ್ಕಿಂಗ್ ಕೌಂಟರ್‌ಗಳಲ್ಲಿ ಪ್ರವಾಸಿ ಪ್ಯಾಕೇಜ್ ಟಿಕೆಟ್ ಮುಂಗಡ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಪ್ರಯಾಣಿಕರು ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಸಹ ಬೇರೆ ಬೇರೆ ಪ್ರದೇಶಗಳಿಂದ ಜೋಗಕ್ಕೆ ಪ್ರವಾಸ ತೆರಳುವ ಜನರ ಅನುಕೂಲಕ್ಕಾಗಿ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿವೆ.

   ಖಚಡ ಮಂತ್ರಿಗಳಿಂದ ಯಡಿಯೂರಪ್ಪನಿಗೆ ಸಂಕಷ್ಟ | Oneindia Kannada
   English summary
   KSRTC Chitradurga division announced Chitradurga-Jog falls tour package. People can book ticket on KSRTC counter for the package.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X