ಚಿತ್ರದುರ್ಗ: ಶೋಷಿತರ ಸಮುದಾಯ ಸಮಾವೇಶದಲ್ಲಿ ಕ್ವಿಂಟಾಲ್‌ಗಟ್ಟಲೆ ಚಿಕನ್ ಬಿರಿಯಾನಿ ಮಣ್ಣು ಪಾಲು, ವಿಡಿಯೋ ವೈರಲ್
ಚಿತ್ರದುರ್ಗ, ಜನವರಿ, 29: ಒಂದೊತ್ತಿನ ಅನ್ನಕ್ಕೂ ಪರದಾಡುವವರನ್ನು ನಾವು ಕಂಡಿರುತ್ತೇವೆ. ಅದರಲ್ಲೂ ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿ ಎಷ್ಟೋ ಮಂದಿ ಎರಡು ಹೊತ್ತು ಊಟ ಮಾಡಿದ ಇನ್ನೊಂದೊತ್ತು ಉಪವಾಸ ಇರುವವರನ್ನು ನಾವು ನೋಡಿದ್ದೇವೆ. ಇಂತಹ ಸಮಯದಲ್ಲಿ ಕ್ವಿಂಟಾಲ್‌ಗಟ್ಟಲೇ ಚಿಕ್ಕನ್ ಬಿರಿಯಾನಿ ಮಣ್ಣುಪಾಲು ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಶೋಷಿತರ ಸಮಾವೇಶದಲ್ಲಿ ಕಾರ್ಯಕ್ರಮಕ್ಕೆ ನೆರೆದಿದ್ದ ಜನರಿಗೆ ತಯಾರಿಸಿದ ಕ್ವಿಂಟಲ್‌ಗಟ್ಟಲೆ ಚಿಕನ್ ಬಿರಿಯಾನಿ ಮಣ್ಣು ಪಾಲಾಗಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಚಿತ್ರದುರ್ಗ ನಗರದ ವರವಲಯದಲ್ಲಿರುವ ಮಾದರ ಚೆನ್ನಯ್ಯ ಗುರು ಪೀಠದ ಹಿಂಭಾಗದಲ್ಲಿ 150 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಶೋಷಿತ ಸಮುದಾಯಗಳ ಬೃಹತ್ ಸಮಾವೇಶ ಭಾನುವಾರ ನಡೆದಿತ್ತು. ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸಿದ್ದರು. ಸಮಾವೇಶಕ್ಕೆ ಬಂದಿರುವ ಜನರಿಗೆ ಚಿಕನ್ ಬಿರಿಯಾನಿ ಹಾಗೂ ಮೊಸರನ್ನ, ಪಲಾವ್ ವ್ಯವಸ್ಥೆ ಮಾಡಲಾಗಿತ್ತು. ನಿರೀಕ್ಷೆಗೆ ತಕ್ಕಂತೆ ಸಮಾವೇಶಕ್ಕೆ ಜನರು ಬಾರದ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ್ದ ಚಿಕನ್ ಬಿರಿಯಾನಿ, ಪಲಾವ್ ಮಣ್ಣು ಪಾಲಾಗಿದೆ.
ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ 10,000ಕ್ಕೂ ವಾಹನಗಳಲ್ಲಿ ಸುಮಾರು 5 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ಮೂರು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದರು. ಆದರೆ ನಿರೀಕ್ಷಿಸಿದಷ್ಟು ಜನರು ಬಾರದ ಹಿನ್ನೆಲೆಯಲ್ಲಿ ಉಳಿದ ಚಿಕನ್ ಬಿರಿಯಾನಿ ಮತ್ತು ಪಲಾವ್ ಅನ್ನು ಬಿಸಾಡಲಾಗಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.












Click it and Unblock the Notifications