ರಾಜ್ಯದ ಅಭಿವೃದ್ಧಿ ಹಾಳು ಮಾಡಿದ್ದು ಬಿಜೆಪಿ, ನಾವಲ್ಲ: ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ, ಅಕ್ಟೋಬರ್‌, 06: ರಾಜ್ಯದಲ್ಲಿ ಅಭಿವೃದ್ಧಿ ಹಾಳು ಮಾಡಿದ್ದು ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರದುರ್ಗದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ನಿನ್ನೆ ಬರ ಅಧ್ಯಯನ ತಂಡ ಭೇಟಿ ನೀಡಿದೆ. ಈಗಾಗಲೇ ರಾಜ್ಯದಲ್ಲಿ 195 ತಾಲೂಕು ಬರ ಅಂತ ಘೋಷಣೆ ಮಾಡಲಾಗಿದೆ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಮಳೆ ಇಲ್ಲದೆ 30 ಸಾವಿರ ಕೋಟಿ ಬೆಳೆಹಾನಿ ಆಗಿದೆ. 42 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ ಎಂದು ಮಾಹಿತಿ ನೀಡಿದರು.

bjp-has-not-developed-the-state

ಮಳೆ ಇಲ್ಲದೆ ರಾಜ್ಯದ ನಮ್ಮ ಜಲಾಶಯದಲ್ಲಿ ಸಹ ನೀರು ಇಲ್ಲ, ಅಪ್ಪರ್ ಕೃಷ್ಣ, ನಾರಾಯಣಪುರ ಡ್ಯಾಂ ಬಿಟ್ರೆ ಎಲ್ಲಾ ಡ್ಯಾಂಗಳಲ್ಲಿ ನೀರು ಕಡಿಮೆ ಆಗಿದೆ ಎಂದು ಹೇಳಿದರು. ಅಲ್ಲದೆ ನಾವು 4,860 ಕೋಟಿ ಪರಿಹಾರವನ್ನು ಕೇಂದ್ರಕ್ಕೆ ಕೇಳಿದ್ದೇವೆ. ಈ ಬಾರಿ ಒಂದು ರೀತಿ ಹಸಿರು ಬರ ಆಗಿದೆ. ಇದು ರಾಜ್ಯದಲ್ಲಿ ವಾಸ್ತವ ಪರಿಸ್ಥಿತಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಬರದ ಬಗ್ಗೆ ಕೇಂದ್ರಕ್ಕೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಅಧ್ಯಯನ ವರದಿ ಆಧಾರದ ಮೇಲೆ ಪರಿಹಾರ ಕೊಡುತ್ತಾರೆ. ವಾಸ್ತವವಾಗಿ 32 ಸಾವಿರ ಕೋಟಿ ನಷ್ಟ ಉಂಟಾಗಿದೆ. ಗೈಡ್ ಲೈನ್ಸ್ ಪ್ರಕಾರ 4,860 ಕೋಟಿ ಹಣ ಕೇಳಿದ್ದೇವೆ ಎಂದರು.

ಹಿಂದಿನ ಸರ್ಕಾರದವರು 5,300 ಕೋಟಿ ಕೊಡುತ್ತೇವೆ ಅಂತಾ ಹೇಳಿದ್ದರು. ಇದುವರೆಗೂ ಯಾವುದೇ ಹಣ ಕೊಟ್ಟಿಲ್ಲ. ಈ ಬಗ್ಗೆ ಕೇಂದ್ರಕ್ಕೆ ಪತ್ರ ಸಹ ಬರೆದಿದ್ದೇವೆ ಆದ್ರೂ ಹಣ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಾನು 8 ತಿಂಗಳಿಗೆ ಬಜೆಟ್ ಮಂಡಿಸಿದ್ದೇನೆ. ಹೆಚ್ಚು ನೀರಾವರಿಗೆ ಒತ್ತು ನೀಡುವ ಕೆಲಸ ಮಾಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ವಿಶೇಷ ಪ್ರತಿನ್ಯತೆ ಕೊಡುತ್ತೇವೆ ಎಂದು ತಿಳಿಸಿದರು.

ಕವಾಡಿಗರಹಟ್ಟಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಈ ವೇಳೆ ಮಾತನಾಡಿದ ಅವರು, ಕವಾಡಿಗರಹಟ್ಟಿಯಲ್ಲಿ ಆಗಸ್ಟ್‌ 1ರಂದು ಕಲುಷಿತ ನೀರು ಸೇವಿಸಿ 200ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದರು. ಇಲ್ಲಿ ಎಲ್ಲರೂ ಬಡತನದಲ್ಲಿ ಇದ್ದವರು. ಈ ವಿಷಯ ತಿಳಿದು ಎಲ್ಲರಿಗೂ ಫೋನ್ ಮಾಡಿದ್ದೆ ಎಂದರು.

ಶುದ್ದ ಕುಡಿಯುವ ನೀರು ನೀಡುವುದು ಸರ್ಕಾರದ ಜವಬ್ದಾರಿ. ಕೂಡಲೇ ಡಿಸಿ ಶಾಸಕರು, ಸಚಿವರು ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದ್ದಾರೆ. 6 ಮಂದಿ ಕಲುಷಿತ ನೀರು ಕುಡಿದು ಮೃತಪಟ್ಟಿದ್ದಾರೆ. ಶುದ್ದ ನೀರು ನೀಡಲು ಆಗಿಲ್ಲ ಎಂಬುದು ಊಹಿಸಲು ಆಗಲ್ಲ. ಸರ್ಕಾರದಿಂದ ಪರಿಹಾರ ಘೋಷಣೆಗೆ ಸೂಚನೆ ನೀಡಿದ್ದೆ. ನಗರಸಭೆಯಿಂದ ಕೂಡಾ ಪರಿಹಾರ ನೀಡಿದ್ದೇವೆ. ಡಿಸಿ ಜೊತೆಗೆ ಸಭೆ ನಡೆಸಿ ಕೂಡಲೇ ಕುಡಿಯುವ ನೀರು ಸಮಸ್ಯೆ ಆಗದಂತೆ ಸೂಚನೆ ನೀಡಿದ್ದೇನೆ. ಇನ್ನುಮುಂದೆ ಕಲುಷಿತ ನೀರು ಕೊಟ್ಟರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಆಗುತ್ತದೆ ಎಂದರು.

ಕಲು‍‍ಷಿತ ನೀರು ಸೇವನೆ ಮಾಡಿ 6 ಜನ ಮೃತಪಟ್ಟಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಯಸುವೆ. ಅಲ್ಲದೆ ಮೃತರ 3 ಹೆಕ್ಟೇರ್‌ ಜಮೀನು ಹಾಗೂ ಅಭಿವೃದ್ಧಿಗಾಗಿ 4 ಕೋಟಿ ಹಣ ನೀಡಿದ್ದೇವೆ. ಉದ್ಯೋಗವನ್ನೂ ನೀಡುತ್ತೇವೆ. ಹಾಗೂ ಮನೆಯನ್ನೂ ಕೂಡ ನಾವೇ ಕಟ್ಟಿಸುತ್ತೇವೆ. ಒಟ್ಟಿನಲ್ಲಿ ಮೃತರ ಕುಟುಂಬದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳುತ್ತದೆ ಎಂದರು.

ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿದೆ. 122 ವರ್ಷಗಳ ಬಳಿಕ ಇಂತಹ ಬರಗಾಲ ಬಂದಿದೆ. 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದೇವೆ. ಇನ್ನೊಂದು ಸುತ್ತಿನ ಸಭೆಯನ್ನೂ ಕೂಡ ಮಾಡುತ್ತಿದ್ದೇವೆ. ರಾಜ್ಯದಲ್ಲಿ 30 ಕೋಟಿ ನಷ್ಟ ಆಗಿದೆ. ಎನ್‌ಡಿಆರ್‌ಎಫ್‌ ನಾರ್ಮ್ಸ್ ಪ್ರಕಾರ ಪರಿಹಾರಕ್ಕೆ ಕೇಂದ್ರಕ್ಕೆ ಪತ್ರ ಬರೆದಿದ್ದಿದ್ದು, ಕೇಂದ್ರದಿಂದ ರಾಜ್ಯಕ್ಕೆ ತಜ್ಞರ ತಂಡ ಆಗಮಿಸಿದೆ ಎಂದರು.

ಅನೇಕ ರಾಜ್ಯಗಳಲ್ಲಿ ಈ ಬಾರಿ ಮಳೆ ಕೈಕೊಟ್ಟಿದ್ದು, ದೇಶದಲ್ಲೇ ಬರಗಾಲ ಆವರಿಸಿದೆ. ಆದ್ದರಿಂದ ರಾಜ್ಯದಲ್ಲಿ ಜನ ಗುಳೆ ಹೋಗದಂತೆ ಸಭೆ ನಡೆಸಿ ಸೂಚನೆ ನೀಡಿದ್ದೇವೆ. ಅನ್ನ ಭಾಗ್ಯ ಅಕ್ಕಿ ನೀಡಿದ್ದೇವೆ, ಗೃಹ ಜ್ಯೋತಿ ನೀಡಿದ್ದೇವೆ. 1 ಕೋಟಿ 10 ಲಕ್ಷ ಜನರಿಗೆ 2 ಸಾವಿರ ಹಣ ಹಾಕಿದ್ದೇವೆ. ಇನ್ನೂ ಕೆಲವರಿಗೆ ಬ್ಯಾಂಕ್ ಸಮಸ್ಯೆಯಿಂದ ಹಣ ಬಂದಿಲ್ಲ. ಹಾಗೆಯೇ ಶಕ್ತಿ ಯೋಜನೆ ಮೂಲಕ ಬಸ್ ಪ್ರಯಾಣವನ್ನು ಉಚಿತವಾಗಿ ನೀಡಿದ್ದೇವೆ. ಈ ಯೋಜನೆಯಿಂದ ರಾಜ್ಯದಲ್ಲಿ 50-60 ಲಕ್ಷ ಮಹಿಳೆಯರು ಒಂದು ದಿನಕ್ಕೆ ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+