Get Updates
Get notified of breaking news, exclusive insights, and must-see stories!

ಚಿತ್ರದುರ್ಗ: "96 ವಯಸ್ಸಿನ ನಾನೇ ಕೊರೊನಾ ವೈರಸ್ ಗೆದ್ದು ಬಂದಿದ್ದೇನೆ, ಇನ್ನು...''

ಚಿತ್ರದುರ್ಗ, ಜುಲೈ 9: ಕೊರೊನಾ ವೈರಸ್ ಹೆಸರು ಹೇಳಿದ್ರೆ ಸಾಕು ಇಡೀ ಪ್ರಪಂಚವೇ ಬೆಚ್ಚಿ ಬೀಳುತ್ತೆ, ಆದರೆ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಡಿ, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿರುವ ಕೋಟೆ ನಾಡು ಚಿತ್ರದುರ್ಗದ 96 ವರ್ಷದ ಅಜ್ಜಿ ಮಾತ್ರ ಕೊರೊನಾ ವೈರಸ್ ಗೆ ಡೋಂಟ್ ಕೇರ್ ಎನ್ನುತ್ತಿದ್ದಾರೆ.

Recommended Video

      Rohit Sharma ಟಿ20ಗೆ ನಾಯಕನಾಗಲಿ | T20 Captain? | Oneindia Kannada

      ಕೊರೊನಾ ವೈರಸ್ ನಿಂದ ಗುಣಮುಖರಾಗಿ ಬಂದಿರುವ ಚಿತ್ರದುರ್ಗದ ಗೋವಿಂದಮ್ಮ ಮಾತನಾಡಿ, ""ಕೊರೊನಾ ವೈರಸ್ ಗೆ ಯಾರೂ ಹೆದರಬೇಡಿ ಅದು ಏನೂ ಮಾಡಲ್ಲ. 96 ರ ಇಳಿವಯಸ್ಸಿನ ನಾನೇ ಅದನ್ನು ಎದುರಿಸಿ ಗುಣಮುಖಳಾಗಿದ್ದೇನೆ, ಇನ್ನು ನಿಮ್ಮಂತ ಯುವಕ ಯುವತಿಯರು ಹಾಗು ಮಧ್ಯ ವಯಸ್ಕರು ಅದನ್ನು ಸುಲಭವಾಗಿ ಎದುರಿಸಬಹುದು'' ಎಂದು ಧೈರ್ಯ ತುಂಬಿದ್ದಾಳೆ.

      ""ಮನೆಯಲ್ಲಿ ಉತ್ತಮ ಆಹಾರ ಹಾಗು ಶುಚಿತ್ವ ಕಾಪಾಡಿಕೊಳ್ಳಿ, ಮಾನಸಿಕವಾಗಿ ಗಟ್ಟಿಯಾಗಿ ಇದ್ದರೆ ಸಾಕು ಕೊರೊನಾ ವೈರಸ್ ಏನೂ ಮಾಡಲು ಸಾಧ್ಯವಿಲ್ಲ'' ಎಂದು‌ ಸಲಹೆ ನೀಡುವ ಮೂಲಕ‌ ಕೊರೊನಾ ಸೋಂಕಿತರಿಗೆ ಹಿರಿಯೂರಿನ ವೇದಾವತಿ ನಗರದ 96 ವಯಸ್ಸಿನ ಗೊವಿಂದಮ್ಮ ಆತ್ಮಸ್ಥೈರ್ಯ ತುಂಬಿದ್ದಾರೆ.

      96-Year-Old Woman Recovers From Coronavirus In Chitradurga, Shares Her Experience

      ಚಿತ್ರದುರ್ಗ ಜಿಲ್ಲೆಯಲ್ಲಿ ಗುರುವಾರ ಮತ್ತೆ 3 ಕೊರೊನಾ ಕೇಸ್ ಪತ್ತೆ

      ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚಿಕ್ಕತೇಕಲವಟ್ಟಿ ಗ್ರಾಮಕ್ಕೆ ಕೊರೊನಾ ವೈರಸ್ ಕಾಲಿಟ್ಟಿದೆ. ಬೆಂಗಳೂರಿಗೆ ಹೋಗಿ ಬಂದಿದ್ದ 29 ವರ್ಷದ ಮಹಿಳೆಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.

      ಅದೇ ರೀತಿ ಎನ್.ಜಿ ಹಳ್ಳಿ ಗೊಲ್ಲರಹಟ್ಟಿಯ 17 ವರ್ಷದ ಬಾಲಕನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಬಾಲಕ ಬೆಂಗಳೂರು ಟ್ರಾವೆಲ್ ಹಿಸ್ಟರಿ ಹೊಂದಿದ್ದಾನೆ.

      96-Year-Old Woman Recovers From Coronavirus In Chitradurga, Shares Her Experience

      ಬಸವೇಶ್ವರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗೆ ಕೊರೊನಾ ವೈರಸ್ ಸೋಂಕು ದೃಢವಾಗಿದೆ. ಎಂ.ಬಿ.ಬಿ.ಎಸ್ ಪಿಜಿ ವಿದ್ಯಾರ್ಥಿ ಹೈದರಾಬಾದ್ ಟ್ರಾವೆಲ್ ಹಿಸ್ಟರಿ ಹೊಂದಿದ್ದಾನೆ.

      ಇದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 95 ಕ್ಕೆ ಏರಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾಗಿರುವವರ ಸಂಖ್ಯೆ 66, ಸಕ್ರೀಯ ಪ್ರಕರಣಗಳ ಸಂಖ್ಯೆ 29 ಆಗಿವೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+