ಸಂಗೀತ ಕಾರ್ಯಕ್ರಮದಲ್ಲಿ ಹಿರಿಯೂರಿನ 70 ವರ್ಷದ ಗೋವರ್ಧನ್...

ಚಿತ್ರದುರ್ಗ, ಫೆಬ್ರವರಿ 03: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆ.ಸಿ.ರೊಪ್ಪ ಗ್ರಾಮದ ಗ್ರಾಮೀಣ ಪ್ರತಿಭೆ, 70 ವರ್ಷದ ಗೋವರ್ಧನ್ ಅವರು ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮಕ್ಕೆ ಆಯ್ಕೆ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.

ಚಿತ್ರದುರ್ಗದಲ್ಲಿ ನಡೆದ ಆಡಿಷನ್ ನಲ್ಲಿ ಗೋವರ್ಧನ್ ನವರು ಪಾಲ್ಗೊಂಡಿದ್ದರು. ಅದರಲ್ಲಿ ಆಯ್ಕೆಯಾಗಿ ಇದೀಗ ಸಂಗೀತ ಸ್ಪರ್ಧೆಗೆ ಅಡಿಯಿಟ್ಟಿದ್ದಾರೆ. 1970 ರಿಂದ ರಂಗಭೂಮಿ ಕಲಾವಿದನಾಗಿರುವ ಇವರಿಗೆ ಇಬ್ಬರು ಮಕ್ಕಳು. ತುಂಡು ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದಾರೆ. ಅಪಘಾತವಾದ ಕಾರಣ ಕಿವಿ ಸ್ವಲ್ಪ ಕೇಳುವುದಿಲ್ಲ. ಒಂದು ಕಣ್ಣು ಸಹ ಕಾಣುವುದಿಲ್ಲ.

ಗೋವರ್ಧನ್ ಅವರು ಅಪ್ಪಟ ಹಳ್ಳಿ ಪ್ರತಿಭೆ. ಪೌರಾಣಿಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೆಲವು ನಾಟಕಗಳಿಗೆ ನಿರ್ದೇಶನವನ್ನೂ ಮಾಡಿದ್ದಾರೆ. "ಈ ಸಂಗೀತ ಕಾರ್ಯಕ್ರಮವನ್ನು ನೋಡಿದ್ದೆ. ಎಲ್ಲರೂ ಹಾಡುತ್ತಾರೆ, ನಾನೇಕೆ ಯಾಕೆ ಆಡಬಾರದು ಎನಿಸಿತು. ಅದೇ ಹುಮ್ಮಸ್ಸಿನಲ್ಲಿ ಆಡಿಷನ್ ಗೆ ಹೋದೆ. ನಾನು ಆಯ್ಕೆಯಾದೆ. ತುಂಬಾ ಖುಷಿಯಾಗಿದೆ" ಎಂದು ಹೇಳಿಕೊಳ್ಳುತ್ತಾರೆ ಅವರು.

70 Year Old Govardhan Selected From Hiriyur To Singing Programme

"ವಯಸ್ಸಾಗಿದೆ, ಇದೆಲ್ಲ ಈತನಿಗೆ ಈಗ್ಯಾಕೆ, ಎಂಥೆಂಥವರು ಬರುತ್ತಾರೆ, ನೀನೆಲ್ಲಿ ಆಯ್ಕೆ ಆಗ್ತಿಯಾ ಎಂದು ಕೆಲವರು ಹೀಯಾಳಿಸಿದ್ದರು. ಆದರೆ ನಾನು ಈ ಕಾರ್ಯಕ್ರಮಕ್ಕೆ ಆಯ್ಕೆ ಆದೆ" ಎಂದು ಸಂತಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+