ಚಿತ್ರದುರ್ಗ; ಆತಂಕ ಮೂಡಿಸಿದ ಮಂಗಗಳ ಸರಣಿ ಸಾವು

ಚಿತ್ರದುರ್ಗ, ಏಪ್ರಿಲ್ 20; ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್ ಭೀತಿಯ ನಡುವೆಯೇ ಮಂಗಗಳ ಸರಣಿ ಸಾವು ಆತಂಕವನ್ನು ಮೂಡಿಸಿದೆ. ಮಂಗಗಳ ನಿಗೂಢ ಸಾವಿಗೆ ಕಾರಣ ಪತ್ತೆ ಹಚ್ಚುವಂತೆ ಜನರು ಒತ್ತಾಯಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಮಂಗಗಳ ಸರಣಿ ಸಾವಿನ ಪ್ರಕರಣ ವರದಿಯಾಗಿದೆ. ಕೋತಿಗಳ ನಿಗೂಢ ಸಾವಿಗೆ ಕಾರಣ ತಿಳಿಯದೇ ಜನರು ಆತಂಕಗೊಂಡಿದ್ದಾರೆ.

ಮೊಳಕಾಲ್ಮುರು ತಾಲೂಕಿನ ‌ ರಾಂಪುರ ಗ್ರಾಮದಲ್ಲಿ ಇದುವರೆಗೂ ನಾಲ್ಕು ಕೋತಿಗಳು ಮೃತಪಟ್ಟಿವೆ. ನಿದ್ರಾವಸ್ಥೆಯಲ್ಲಿ ಕುಳಿತ ಮಂಗಗಳು ಏಕಾಏಕಿ ಮೃತಪಡುತ್ತಿವೆ. ವಿಷಾಹಾರ ಸೇವನೆ? ಇದಕ್ಕೆ ಕಾರಣವಿರಬಹುದೇ? ಎಂದು ಶಂಕಿಸಲಾಗಿದೆ.

4 Monkeys Found Dead In Molakalmuru

ಗ್ರಾಮದಲ್ಲಿ ಇದೂವರೆಗೂ ನಾಲ್ಕಕ್ಕೂ ಹೆಚ್ಚು ಕೋತಿಗಳು ಸಾವನ್ನಪ್ಪಿವೆ. ಮೃತಪಟ್ಟಿರುವ ಕೋತಿಗಳಿಗೆ ಗ್ರಾಮಸ್ಥರು ಹಾಗೂ ಪೋಲಿಸರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮೃತ ಪಟ್ಟ ಕೋತಿಗಳಿಗೆ ಗ್ರಾಮಸ್ಥರು ಪೂಜೆಯನ್ನು ಸಲ್ಲಿಸಿ, ಪ್ರತ್ಯೇಕವಾದ ಗುಂಡಿ ತೋಡಿ ಸುರಕ್ಷಿತವಾಗಿ ಅಂತ್ಯಸಂಸ್ಕಾರ ಮಾಡಿದ್ದಾರೆ.

ಒಂದೇ ಗ್ರಾಮದಲ್ಲಿ ಕೋತಿಗಳ ಸರಣಿ ಸಾವಿಗೆ ಕಾರಣ ಏನು? ಎಂಬುದು ಜನರ ಪ್ರಶ್ನೆಯಾಗಿದೆ. ಸರಣಿ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+