ಪೊಲೀಸ್ ಇಲಾಖೆಯಲ್ಲಿ 23 ಸಾವಿರ ಹುದ್ದೆಗಳು ಖಾಲಿ

ಚಿತ್ರದುರ್ಗ, ಜೂನ್ 21 : 'ಪೊಲೀಸ್ ಇಲಾಖೆಯಲ್ಲಿ 23,000 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಮಾತನಾಡಿದ ಸಚಿವರು, 'ಕಳೆದ ಐದು ವರ್ಷಗಳಲ್ಲಿ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದರು.

'ಪ್ರತಿವರ್ಷ 3 ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ನಿವೃತ್ತರಾಗುತ್ತಿದ್ದಾರೆ. ಪ್ರಸ್ತುತ 23 ಸಾವಿರ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ' ಎಂದು ಜಿ.ಪರಮೇಶ್ವರ ತಿಳಿಸಿದರು.

G. Parameshwara

'ಉತ್ತಮ ವಿದ್ಯಾರ್ಹತೆಯನ್ನು ಪಡೆದ ಹಲವು ಯುವಕರು ಇಂದು ಇಲಾಖೆ ಸೇರುತ್ತಿದ್ದಾರೆ. ಪೊಲೀಸರು ಒತ್ತಡದ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕು. ಹೊಸದಾಗಿ ಇಲಾಖೆಗೆ ಸೇರಿದವರು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು' ಎಂದು ಸಲಹೆ ನೀಡಿದರು.

'342 ಅಭ್ಯರ್ಥಿಗಳು ಬೆಂಗಳೂರು, ರಾಮನಗರ ಮತ್ತು ಧಾರವಾಡ ಕೇಂದ್ರದಲ್ಲಿ ತರಬೇತಿಯನ್ನು ಮುಗಿಸಿ ಇಲಾಖೆಗೆ ಸೇರಿದ್ದಾರೆ. ಇವರಲ್ಲಿ 251 ಅಭ್ಯರ್ಥಿಗಳು ಪದವೀಧರರಾಗಿದ್ದು, ಇವರಿಂದಾಗಿ ಇಲಾಖೆಯ ಸೇವೆ ಮತ್ತಷ್ಟು ಜನಸ್ನೇಹಿಯಾಗುವ ನಿರೀಕ್ಷೆ ಇದೆ' ಎಂದು ಆಶಯ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+