ಜಮೀರ್ ಮೊದಲು ವಾಚ್‌ಮನ್‌ ಕೆಲಸ ಮಾಡಲಿ; ಸಿ. ಟಿ‌. ರವಿ ವ್ಯಂಗ್ಯ

ಚಿಕ್ಕಮಗಳೂರು, ಜುಲೈ 26 : "ನಾನು ಕುಮಾರಣ್ಣ, ದೇವೇಗೌಡರು, ಸಿದ್ದರಾಮಯ್ಯನವರಿಗೆ ಬಕೆಟ್ ಹಿಡಿದಿಲ್ಲ. ನಾನು ಬಕೆಟ್ ಹಿಡಿದು ರಾಜಕಾರಣ ಮಾಡಿದವನಲ್ಲ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಜಮೀರ್ ಅಹ್ಮದ್ ಖಾನ್ ವಿರುದ್ಧ ವ್ಯಂಗ್ಯವಾಡಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಸಿ. ಟಿ. ರವಿಗೆ ಮುಸ್ಲಿಂ-ಹಿಂದೂಗಳ ಮೇಲೆ ಪ್ರೀತಿ ಇಲ್ಲ. ಪ್ರೀತಿ ಅಧಿಕಾರದ ಮೇಲಷ್ಟೆ" ಎಂದಿದ್ದ ಜಮೀರ್‌ಗೆ ತಿರುಗೇಟು ನೀಡಿದರು. "ಬಿಜೆಪಿ ಅಧಿಕಾರಕ್ಕೆ ಬಂದರೆ ವಾಚ್‍ಮೆನ್ ಆಗುತ್ತೀನಿ ಎಂದು ಹೇಳಿದ್ರಲ್ಲಾ ಜಮೀರ್, ಮೊದಲು ಆ ಮಾತು ಉಳಿಸಿಕೊಳ್ಳಿ. ಯಡಿಯೂರಪ್ಪನವರ ಮನೆಯಲ್ಲಿ ವಾಚ್‍ಮೆನ್ ಆಗುತ್ತೇನೆ ಎಂದು ಹೇಳಿದ್ರಲ್ಲ. ಆ ಮಾತು ಉಳಿಸಿಕೊಂಡು ಜನರಿಗೆ ಮುಖ ತೋರಿಸಿ" ಎಂದು ಟಾಂಗ್ ಕೊಟ್ಟರು.

"ಮಂತ್ರಿ ಆಗಿದ್ದ ನಾನು ಪಕ್ಷದ ಕೆಲಸಕ್ಕಾಗಿ ರಾಜೀನಾಮೆ ನೀಡಿ ಹೋಗಿದ್ದೇನೆ. ನನ್ನ ನಿಯತ್ತನ್ನು ನೋಡಿ ನನ್ನ ಕ್ಷೇತ್ರದ ಜನ 4 ಬಾರಿ ಗೆಲ್ಲಿಸಿದ್ದಾರೆ. ನನ್ನ ನಿಯತ್ತು, ಅಧಿಕಾರ ಏನೆಂದು ನನ್ನ ಜನರಿಗೆ ಗೊತ್ತಿದೆ. ಅದಕ್ಕಾಗಿ ನನ್ನನ್ನು ಜನ ಗೆಲ್ಲಿಸಿದ್ದಾರೆ ಸುಮ್ಮನೆ ಗೆಲ್ಲಿಸಿಲ್ಲ, ನನ್ನ ಮೇಲೆ ವಿಶ್ವಾಸ ಇದ್ದಿದ್ದಕ್ಕೆ ಗೆಲ್ಲಿಸುತ್ತಿದ್ದಾರೆ" ಎಂದು ಜಮೀರ್‌ಗೆ ತಿರುಗೇಟು ಕೊಟ್ಟರು.

Zameer Ahmed should do the watchman job In Front of BS Yediyurappa House says CT Ravi

"ಸಿಎಂ ಎಂದು ಬೋರ್ಡ್, ಫ್ಲೆಕ್ಸ್ ಹಾಕಿಸಿಕೊಂಡ ತಕ್ಷಣ ಸಿಎಂ ಆಗ್ತೀರಾ, ಸೋಶಿಯಲ್ ಮೀಡಿಯಾದಲ್ಲಿ, ಜನರ ಕೈನಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಕೂಗಿಸಿಕೊಂಡರೆ ಸಿಎಂ ಆಗ್ತೀರಾ. ಜನರು ಆ ಪಕ್ಷಕ್ಕೆ ಮತ ಹಾಕಬೇಕು. ಪಕ್ಷ ಯಾರನ್ನು ಮುಖ್ಯಮಂತ್ರಿ ಎನ್ನುವುದನ್ನು ನಿರ್ಧರಿಸಬೇಕು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಕ್ಕಿಂತ ಕಳೆದು ಕೊಂಡಿದ್ದೆ ಹೆಚ್ಚು, ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಂಡಿಲ್ಲ, ಮಹಾರಾಷ್ಟ್ರದಲ್ಲಿ ಕಳೆದುಕೊಂದಿದ್ದಾರೆ, ಇನ್ನೂ ರಾಜಸ್ಥಾನದಲ್ಲಿದೆ, ಅಲ್ಲೂ ಖಂಡಿತ ಕಳೆದುಕೊಳ್ಳಲಿದೆ" ಎಂದು ಸಿ. ಟಿ. ರವಿ ಭವಿಷ್ಯ ನುಡಿದರು.

"ಇನ್ನೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ಹಗಲುಗನಸು ಕಾಣುತ್ತಿದೆ. ಸಿದ್ದರಾಮಯ್ಯನ ಸ್ಟೈಲಲ್ಲೇ ಹೇಳುವುದಾದರೆ ಅವರಪ್ಪನ ಆಣೆ ಸಿಎಂ ಆಗಲ್ಲ ಎಂದು ಹೇಳಬಹುದು" ಎಂದು ಸಿ. ಟಿ. ರವಿ ವ್ಯಂಗ್ಯವಾಡಿದ್ದಾರೆ.

Zameer Ahmed should do the watchman job In Front of BS Yediyurappa House says CT Ravi

ಈಶ್ವರಪ್ಪ ಮತ್ತೆ ಮಂತ್ರಿಯಾಗುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿ, "ತಮ್ಮ ಮೇಲೆ ಆಪಾದನೆ ಬಂದಾಗ ಈಶ್ವರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಈಗ ಆರೋಪ ಮುಕ್ತರಾಗಿದ್ದಾರೆ, ಮುಖ್ಯಮಂತ್ರಿ ಪರಿಶೀಲನೆ ಮಾಡಬೇಕು. ಪಕ್ಷ ಕಟ್ಟಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಕೂಡ ಒಬ್ಬರು. ಇಂದು ಪಕ್ಷವನ್ನ ಈ ಹಂತಕ್ಕೆ ಬೆಳೆಸಿದ ಹಲವು ಪ್ರಮುಖರಲ್ಲಿ ಈಶ್ವರಪ್ಪನವರೂ ಒಬ್ಬರು" ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+