ಚಿಕ್ಕಮಗಳೂರು; ಯುವತಿಯನ್ನು ಹೊಳೆಗೆ ತಳ್ಳಿ, ಮತ್ತೆ ಚಾಕುವಿನಿಂದ ಇರಿದ ಯುವಕ
ಚಿಕ್ಕಮಗಳೂರು, ಸೆಪ್ಟೆಂಬರ್ 18: ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕನೊಬ್ಬ ಯುವತಿಗೆ ಮನಬಂದಂತೆ ಚಾಕುವಿನಿಂದ ಇರಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಸಮೀಪದ ಮಹಲ್ ಗೋಡು ಬಳಿ ಘಟನೆ ನಡೆದಿದ್ದು, ಮಿಥುನ್ ಎಂಬಾತ ಯುವತಿಯ ತಲೆ, ಕತ್ತು, ಬೆನ್ನಿನ ಭಾಗ ಸೇರಿದಂತೆ ಹತ್ತಾರು ಕಡೆ ಚಾಕುವಿನಿಂದ ಇರಿದಿದ್ದಾನೆ.
ಇಲ್ಲಿಗೆ ಬರುವ ಮುನ್ನ ಇವರಿಬ್ಬರೂ ಕಳಸ, ಹೊರನಾಡು ಕ್ಯಾತನಮಕ್ಕಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಇಲ್ಲಿಗೆ ಬಂದು ಗಂಟೆಗೂ ಹೆಚ್ಚು ಕಾಲ ಭದ್ರಾ ನದಿ ತಟದಲ್ಲಿ ಮಾತನಾಡುತ್ತಿದ್ದರು. ಆದರೆ ಯುವತಿಯ ಹಳೆ ಪ್ರೇಮಿಯ ವಿಷಯ ಬರುತ್ತಿದ್ದಂತೆ ಆಕ್ರೋಶಗೊಂಡ ಯುವಕ ಯುವತಿಯನ್ನು ಭದ್ರಾ ಹೊಳೆಗೆ ತಳ್ಳಿದ್ದಾನೆ.

ಹೇಗೋ ಕಷ್ಟಪಟ್ಟು ಹೊಳೆಯಿಂದ ಎದ್ದು ಬಂದ ಯುವತಿಗೆ ಮತ್ತೆ ಚಾಕುವಿನಿಂದ ಮನ ಬಂದಂತೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಯುವಕ ನಾಪತ್ತೆಯಾಗಿದ್ದಾನೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಿಥುನ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.












Click it and Unblock the Notifications