ಮೂರು ತಿಂಗಳ ಕಂದಮ್ಮನನ್ನು ನಾಲೆಗೆ ಬಿಸಾಡಿದ ಹೆತ್ತವ್ವ
ತರೀಕೆರೆ, ನವೆಂಬರ್ 6: ಹೆತ್ತ ತಾಯಿಯೇ ಮೂರು ತಿಂಗಳ ಕಂದಮ್ಮನನ್ನು ನಾಲೆಗೆ ಬಿಸಾಡಿರುವ ಮನಕಲಕುವ ಘಟನೆ ತರೀಕೆರೆಯಲ್ಲಿ ನಡೆದಿದೆ.
ಕೌಂಟುಬಿಕ ಕಲಹದಿಂದ ಬೇಸತ್ತ ತಾಯಿ ಮಗುವನ್ನು ನಾಲೆಗೆ ಬಿಸಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಮೂರು ತಿಂಗಳ ಮಗುವನ್ನು ತಾಯಿಯೇ ನಾಲೆಗೆ ಎಸೆದು ಕೊಲೆ ಮಾಡಿದ್ದಾಳೆ.
ಹಳಿಯೂರು ಬಳಿ ಇರುವ ಭದ್ರಾ ನಾಲೆ ಹತ್ತಿರಕ್ಕೆ ಬುಧವಾರ ನಸುಕಿನಲ್ಲಿ ತೆರಳಿದ ತಾಯಿ, ತೇಜಸ್ ಎಂಬ ಮಗುವನ್ನು ಆ ನಾಲೆಗೆ ಎಸೆದಿದ್ದಾರೆ ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮಗುವಿನ ಶವ ಶೋಧನೆ ಆರಂಭಿಸಿದರು. ಮಗುವಿನ ಶವ ಬೆಟ್ಟ ತಾವರೆಕೆರೆ ಬಳಿಯ ನಾಲೆಯಲ್ಲಿ ಪತ್ತೆಯಾಯಿತು. ತರೀಕೆರೆ ಪೊಲೀಸರು ಕೇಸು ದಾಖಲಿಸಿದ್ದಾರೆ.












Click it and Unblock the Notifications