ವಿಡಿಯೋ; ಜಾತ್ರೆಯಲ್ಲಿ ವೇಗವಾಗಿ ಬಂದು ಕಾರಿಗೆ ಗುದ್ದಿದ ಎತ್ತಿನ ಗಾಡಿ

ಚಿಕ್ಕಮಗಳೂರು, ಫೆಬ್ರವರಿ 12: ಜಾತ್ರೆಯಲ್ಲಿ ವೇಗವಾಡಿ ಓಡುತ್ತಿದ್ದ ಎತ್ತುಗಳು ಎತ್ತಿನ ಗಾಡಿಯ ಜೊತೆಗೇ ಏಕಾಏಕಿ ಕಾರಿಗೆ ಗುದ್ದಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಸಮೀಪದ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

ಕಳೆದ ಒಂದು ವಾರದಿಂದ ಅಜ್ಜಂಪುರ ತಾಲೂಕಿನ ಅಂತರಘಟ್ಟಮ್ಮ ಜಾತ್ರೆ ಅದ್ಧೂರಿಯಿಂದ ನಡೆಯುತ್ತಿದೆ. ಈ ಜಾತ್ರೆಗೆ ಸುತ್ತಮುತ್ತಲಿನ ಜನರು ಎತ್ತಿನಗಾಡಿಯಲ್ಲಿ ಬರುವುದು ವಿಶೇಷ. ಅದರಲ್ಲೂ ರೈತರು ಎತ್ತು, ಗಾಡಿಗಳನ್ನು ಶೃಂಗಾರ ಮಾಡಿಕೊಂಡು ಪೈಪೋಟಿಯಲ್ಲಿ ಬರುತ್ತಿರುತ್ತಾರೆ. ಹೀಗೆ ವೇಗವಾಗಿ ಬರುವ ವೇಳೆ ಎತ್ತಿನ ಗಾಡಿಯೊಂದು ಏಕಾಏಕಿ ನಿಂತಿದ್ದ ಕಾರಿಗೆ ಗುದ್ದಿದೆ.

Video Of Bullock Cart Crashing Car In Ajjampura

ಒಂದು ಎತ್ತು ಕಾರಿನ ಮೇಲಿಂದ ತಿರುಗಿ ಬಿದ್ದಿದೆ. ಸ್ಥಳೀಯರು ಎತ್ತಿಗೆ ಕಟ್ಟಲಾಗಿದ್ದ ಹಗ್ಗವನ್ನು ಕೂಡಲೇ ಬಿಚ್ಚಿದ ಪರಿಣಾಮ ಎತ್ತು ಪ್ರಾಣಾಪಯದಿಂದ ಪಾರಾಗಿದೆ. ಗಾಡಿಯಲ್ಲಿದ್ದ ನಾಲ್ಕೈದು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಸಮಪೂರ್ಣ ಜಖಂ ಆಗಿದೆ.

Oneindia Kannada on Twitter

ಜಾತ್ರೆಯಲ್ಲಿ ವೇಗವಾಡಿ ಓಡುತ್ತಿದ್ದ ಎತ್ತುಗಳು ಎತ್ತಿನ ಗಾಡಿಯ ಜೊತೆಗೇ ಏಕಾಏಕಿ ಕಾರಿಗೆ ಗುದ್ದಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಸಮೀಪದ ಪೆಟ್ರೋಲ್ ಬಂಕ್ ಬಳಿ ನಡೆದಿದೆ. #Chikkamagalur | #petrolbunk | #Ajjampur https://t.co/vYkuJUAFSh

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+