ಕೊಟ್ಟಿಗೆ ಹಾರ, ಬಣಕಲ್ ನಲ್ಲಿ ಅಘೋಷಿತ ಬಂದ್; ದರ್ಶನಕ್ಕೆ ಕಾದ ಸಾವಿರಾರು ಜನ
ಚಿಕ್ಕಮಗಳೂರು, ಜುಲೈ 31: ಚಿಕ್ಕಮಗಳೂರಿಗೆ ಸಿದ್ಧಾರ್ಥ್ ಅವರ ಪಾರ್ಥಿವ ಶರೀರ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಬಂದ್ ಗೆ ತೀರ್ಮಾನಿಸಲಾಗಿದೆ.
ಪಾರ್ಥಿವ ಶರೀರ ನಗರಕ್ಕೆ ಆಗಮಿಸಿ, ಅಂತ್ಯ ಸಂಸ್ಕಾರಕ್ಕೆ ತೆರಳುವವರೆಗೂ ಬಂದ್ ಗೆ ಕರೆ ನೀಡಲಾಗಿದೆ.
ಪಾರ್ಥಿವ ಶರೀರ ದರ್ಶನಕ್ಕೆ ಚಿಕ್ಕಮಗಳೂರಿನ ಎಬಿಸಿ ಕಂಪೆನಿ ಆವರಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಎಬಿಸಿ ಕಂಪೆನಿ ಮುಂದೆ ಶಾಮಿಯಾನ, ಕುರ್ಚಿ ಹಾಕಿ ವ್ಯವಸ್ಥೆ ಮಾಡಲಾಗಿದೆ.

ಸಿದ್ಧಾರ್ಥ್ ಅವರ ಪಾರ್ಥಿವ ಶರೀರ ಸಾಗುವ ದಾರಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿವೆ. ಮಲೆನಾಡ ಹೆಬ್ಬಾಗಿಲು ಕೊಟ್ಟಿಗೆಹಾರ, ಬಣಕಲ್ ನಲ್ಲಿ ಅಘೋಷಿತ ಬಂದ್ ಆಗಿದೆ. ಸ್ವತಃ ಗ್ರಾಹಕರೇ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದ್ದಾರೆ.
ಬಣಕಲ್, ಕೊಟ್ಟಿಗೆಹಾರದಲ್ಲಿ ಪಾರ್ಥಿವ ಶರೀರ ದರ್ಶನ ಪಡೆಯಲು ಸಾವಿರಾರು ಜನರು ಕಾಯುತ್ತಿದ್ದಾರೆ.












Click it and Unblock the Notifications