Chikkamagaluru utsav 2023: ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆ ಆಯೋಜನೆ, ಈ ಸ್ಪರ್ಧೆಯ ಉದ್ದೇಶವೇನು?
ಚಿಕ್ಕಮಗಳೂರು, ಜನವರಿ, 17: ಟೇಕ್ವಾಂಡೋ ಕಲೆ ಎಂಬುದು ವಿದ್ಯಾರ್ಥಿಗಳಿಗೆ ನಿರ್ಭಯತೆ ಹಾಗೂ ಆತ್ಮ ರಕ್ಷಣೆಯನ್ನು ಮೈಗೂಡಿಸಿಕೊಳ್ಳುವ ವಿಶೇಷ ಕಲೆಯಾಗಿದೆ ಎಂದು ಜಿಲ್ಲಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ಹೇಳಿದರು.
ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಸೋಮವಾರ ಏರ್ಪಡಿಸಲಾಗಿದ್ದ ಜಿಲ್ಲಾ ಹಾಗೂ ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆಯನ್ನು ಉದ್ಗಾಟಿಸಿ ಅವರು ಮಾತಾನಾಡಿದರು. ಜಿಲ್ಲಾ ಉತ್ಸವದ ಅಂಗವಾಗಿ ಏರ್ಪಡಿಸಿರುವ ಕಾಯಕ್ರಮಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಯೊಬ್ಬರು ಕ್ರಿಯಾಶೀಲರಾಗಿ ಭಾಗವಹಿಸುವ ಮೂಲಕ ಟೇಕ್ವಾಂಡೋ ಕಲೆಯ ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಿಂದ ಪ್ರೋತ್ಸಾಹ ನೀಡಲಾವುದು
ಟೇಕ್ವಾಂಡೋ ಕಲೆಯ ಬಗ್ಗೆ ಆಸಕ್ತಿ ಹೊಂದಿರುವ ಅನೇಕ ಮಂದಿ ಉತ್ಸುಕರಾಗಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಇವರಿಗೆ ಸೂಕ್ತವಾದ ತರಬೇತಿ ನೀಡುವ ಮೂಲಕ ಈ ಕಲೆಯ ಬೆಳವಣಿಗೆಗೆ ಜಿಲ್ಲೆಯಿಂದ ಪ್ರೋತ್ಸಾಹ ನೀಡಲಾವುದು ಎಂದರು. ನಂತರ ಸ್ಪರ್ಧೆಯ ಆಯೋಜಕರಾದ ರವೀಶ್ ಮಾತನಾಡಿ ಇಂದಿನ ಸ್ಪರ್ಧೆಯಲ್ಲಿ ಒಂಬತ್ತು ತಾಲೂಕುಗಳಿಂದ 500 ವಿದ್ಯಾರ್ಥಿಗಳು ಭಾಗವಹಿಸಿದ್ದು, ಇಲ್ಲಿ ವಿಜೇತರಾದವರು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಈ ಬಾರಿಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಹೆಚ್ಚು ಹೆಣ್ಣು ಮಕ್ಕಳು ಭಾಗವಹಿಸಿ ಆತ್ಮರಕ್ಷಣೆ ಕಲಿಕೆಗೆ ಮುಂದಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು.

ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗೆ ಚಾಲನೆ
ಜನವರಿ 18ರಿಂದ 22ರವರೆಗೂ ಚಿಕ್ಕಮಗಳೂರು ಉತ್ಸವ ನಡೆಯಲಿದ್ದು, ಇದರ ಪ್ರಯುಕ್ತ ನಗರದಲ್ಲಿ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಲಾಗಿದೆ. ಕುಸ್ತಿ ಸಂಸ್ಕೃತಿಯ ಪ್ರತೀಕ, ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಪ್ರಾಚೀನ ಯುದ್ಧ ಕಲೆಯಾಗಿದೆ. ಇಂತಹ ಕಲೆಯನ್ನು ಬೀಜ ರೂಪದಲ್ಲೇ ಸಂರಕ್ಷಿಸುವ ಸಲುವಾಗಿ ಜಿಲ್ಲಾ ಹಬ್ಬದಲ್ಲಿ ಕುಸ್ತಿ ಸ್ಪರ್ಧೆ ಆಯೋಜಿಸಿ ಸ್ಪರ್ಧಾಗಳುಗಳಿಗೆ ಪ್ರೇರೇಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿಲ್ಲಿ ಹೇಳಿದ್ದರು.

ನಗರದ ಬೈಪಾಸ್ ಸಮೀಪದ ಎಸ್.ಎಸ್.ಆರ್.ಡಿ. ಪ್ರಾಯೋಗಿಕ ಕಾಲೇಜು ಆಟದ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತಾನಾಡಿದ್ದರು. ಕುಸ್ತಿ ಪಟುಗಳು ಕೇವಲ ದೇಹವನ್ನು ಹುರಿಗೊಳಿಸುವುದಲ್ಲದೇ ಸಂಕಷ್ಟದ ಸಮಯದಲ್ಲಿ ದೇಶದ ರಕ್ಷಣೆಯ ವಿಚಾರದಲ್ಲಿ ಬೆನ್ನೆಲುಬಾಗಿ ನಿಂತವರು. ಇಂದಿನ ದಿನಗಳಲ್ಲಿ ಸೈನ್ಯವನ್ನು ತುಕಡಿಗಳೆಂದು ನಾವುಗಳು ಕರೆಯುತ್ತೇವೆ. ಆದರೆ ಒಂದು ಕಾಲದಲ್ಲಿ ಗ್ರಾಮಗಳಲ್ಲಿ ಸೈನಿಕರಿಗೆ ತರಬೇತಿ ನೀಡುವ ಕೇಂದ್ರವಾಗಿ ಕುಸ್ತಿ ಅಖಾಡಗಳು ಕಾರ್ಯನಿರ್ವಹಿಸಿದ್ದವು. ಇದರ ಪರಿಣಾಮ ದೇಶದ ವಿವಿಧೆಡೆ ರಾಜಮಹಾರಾಜರು ಉದಯವಾಗಿದ್ದಾರೆ ಎಂದು ಹೇಳಿದ್ದರು.












Click it and Unblock the Notifications