ವಿಧಿಯಾಟ: ಗಣೇಶ ತರಲು ಹೊರಟ ಇಬ್ಬರು ಮಸಣ ಸೇರಿದರು, ನಾಲ್ವರಿಗೆ ಬೆಳಕಾದರು
ಇಂದು ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದರೆ, ಕೆಲವರ ಮನೆಗಳಲ್ಲಿ ಕರಾಳತೆ ಆವರಿಸಿದೆ. ಹಬ್ಬದ ದಿನವೇ ನಡೆದ ದುರಂತಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ ಯುವಕರು ಜೀವ ಬಿಟ್ಟು ಮನೆಯಲ್ಲಿ ಕಗ್ಗತ್ತಲಿಗೆ ದೂಡಿರುವುದು ಒಂದೆಡೆಯಾದರೆ, ಇವರು ಮಾಡಿರುವ ನೇತ್ರದಾನದಿಂದ ನಾಲ್ವರ ಬದುಕು ಬೆಳಕು ಬಂದಂತಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಈ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ.
ಹೌದು, ಎಲ್ಲ ಯುವಕರಂತೆ ಗಣೇಶ ಚತುರ್ಥಿಗೆ ಗಣಪನನ್ನು ಕರೆತರಲು ಉತ್ಸಾಹದಿಂದ ಹೊರಟವರು ಮನೆಗೆ ಬಂದಿದ್ದು ಹೆಣವಾಗಿ. ಏಕೆಂದರೆ ಮಾರ್ಗಮಧ್ಯೆದಲ್ಲೇ ನಡೆದ ದಾರುಣ ಅಪಘಾತದಲ್ಲಿ ಇಬ್ಬರು ಯುವಕರು ಜೀವಬಿಟ್ಟಿದ್ದರು. ಗಣಪತಿ ಮೂರ್ತಿ ತರಲು ಯುವಕರು ಹೋಗುತ್ತಿದ್ದ ಮಿನಿ ಗೂಡ್ಸ್ ವಾಹನ ಪಲ್ಟಿಯಾಗಿ ದೊಡ್ಡ ದುರಂತವೇ ನಡೆದು ಹೋಯಿತು.

ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ಸಹ್ಯಾದ್ರಿಪುರ ನಿವಾಸಿಗಳಾದ ಶ್ರೀಧರ ಮತ್ತು ಧನುಷ್ ಅಪಘಾತದಲ್ಲಿ ಮೃತಪಟ್ಟರು. ಗಣಪತಿ ಮೂರ್ತಿ ತರಲು ಗ್ರಾಮದ ಯುವಕರು ಟಾಟಾ ಏಸ್ ಮಾಡಿಕೊಂಡು ಏಳು ಮಂದಿ ತರೀಕೆರೆಯತ್ತ ಹೊರಟಿದ್ದಾಗ ಈ ಅವಘಡ ನಡೆದು ಹೋಗಿದೆ. ಭೈರಾಪುರ ಬಳಿ ತಿರುವಿನಲ್ಲಿ ವಾಹನ ಪಲ್ಟಿಯಾಗಿ ಎಲ್ಲರೂ ಗಾಯಗೊಂಡಿದ್ದರು.
ಗ್ರಾಮದ ಮಂಜು, ವರುಣ್, ಗುರುಮೂರ್ತಿ, ಚಂದ್ರಶೇಖರ್ ಮತ್ತು ಸಂದೀಪ್ ಗಾಯಗೊಂಡಿದ್ದರು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಯಿತು. ಆದರೆ, ಹಬ್ಬದ ಸಂಭ್ರಮ ಈ ಇಬ್ಬರ ಪ್ರಾಣವನ್ನೇ ಕಸಿಯಿತು.

ಮತ್ತೊಂದೆಡೆ ಇಂತಹ ಗಾಢವಾದ ನೋವಿನಲ್ಲೂ ಮೃತ ಯುವಕರ ಕುಟುಂಬಸ್ಥರು ಸಾರ್ಥಕತೆಯ ಹೆಜ್ಜೆ ಇಡುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ. ಮೃತ ಯುವಕರ ನೇತ್ರದಾನ ಮಾಡಲು ಇಬ್ಬರೂ ಪೋಷಕರು ನಿರ್ಧರಿಸಿದ್ದು, ಇದರಿಂದ ನಾಲ್ವರು ಅಂಧರ ಬಾಳಿಗೆ ಬೆಳಕು ದೊರೆಯಲಿದೆ.
ಮೃತ ಯುವಕ ಶ್ರೀಧರ್ ಪೋಷಕರಾದ ಕುಬೇಂದ್ರ ಮತ್ತು ಪದ್ಮಾ ದಂಪತಿ, ಮೃತ ಧನುಷ್ ಪೋಷಕರಾದ ರಮೇಶ್ ಹಾಗೂ ಶೋಭಾ ದಂಪತಿ ಅವರು ತಮ್ಮ ಮಕ್ಕಳ ನೇತ್ರದಾನಕ್ಕೆ ಸಮ್ಮತಿ ಸೂಚಿಸಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಅವರ ನಾಲ್ಕು ಕಣ್ಣುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸುತ್ತಿದ್ದು, ನಾಲ್ವರು ಅಂಧರಿಗೆ ದೃಷ್ಟಿ ಭಾಗ್ಯ ಸಿಗಲಿದೆ ಎಂದು ವರದಿಯಾಗಿದೆ. ಈ ವಿಧಿಯಾಟದಲ್ಲಿ ಎರಡು ಕುಟುಂಬಗಳ ಪಾಲಿಗೆ ಇಂದು ಕಗ್ಗತ್ತಲು ಆವರಿಸಿದರೆ, ನಾಲ್ವರ ಬದುಕಿಗೆ ಬೆಳಕು ಬರುತ್ತಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications