ಚಿಕ್ಕಮಗಳೂರು; ಕೋವಿಡ್ ಕೇರ್ ಸೆಂಟರ್‌ನಲ್ಲಿ ಅಧಿಕಾರಿಗಳ ಡ್ಯಾನ್ಸ್
ಚಿಕ್ಕಮಗಳೂರು, ಜೂನ್ 06; ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಅಧಿಕಾರಿಗಳು ಹಾಡು ಹೇಳಿ, ಡ್ಯಾನ್ಸ್ ಮಾಡಿ ಸೋಂಕಿತರಿಗೆ ಮನರಂಜನೆ ನೀಡಿದರು.

ಕೋವಿಡ್ ಹಿನ್ನೆಲೆಯಲ್ಲಿ ಆರೈಕೆ ಕೇಂದ್ರದಲ್ಲಿರುವ ಸೋಂಕಿತರು ಕಳೆದೊಂದು ವಾರದಿಂದ ಕುಟುಂಬದವರಿಂದ ದೂರ ಉಳಿದು ಹಾಗೂ ಸೋಂಕು ತಗುಲಿದ ಕಾರಣಕ್ಕೆ ಮನೋಸ್ಥೈರ್ಯ ಕಳೆದುಕೊಂಡಿರುವುದು ಹೆಚ್ಚಾಗಿರುತ್ತದೆ.
ಚಿಕ್ಕಮಗಳೂರು; ಒಂದೇ ಗ್ರಾಮದ 128 ಜನರಿಗೆ ಕೋವಿಡ್
ಈ ಹಿನ್ನೆಲೆಯಲ್ಲಿ ಸೊಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋವಿಡ್ ಕೇರ್ ಸೆಂಟರ್‌ನಲ್ಲಿ ವಿವಿಧ ಹಾಡುಗಳನ್ನು ತಾವೇ ಹಾಡಿದರು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಸೋಂಕಿತರ ಜೊತೆ ನೃತ್ಯಮಾಡಿದರು.
ಚಿಕ್ಕಮಗಳೂರು; ಮತ್ತೊಂದು ಕೋವಿಡ್ ಕೇರ್ ಸೆಂಟರ್ ಆರಂಭ
ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ. ಎಚ್. ಎಂ. ನಾಗರಾಜ್, ತಹಶೀಲ್ದಾರ್ ಡಾ. ಕಾಂತರಾಜ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇವಣ್ಣ ಸೇರಿದಂತೆ ಇತರ ಅಧಿಕಾರಿಗಳು ಹಾಡು, ಡ್ಯಾನ್ಸ್ ಮಾಡಿ ಸೋಂಕಿತರನ್ನು ಖುಷಿಡಿಸಿದರು. ತಾವು ಸಹ ಸಂತಸಪಟ್ಟರು. ಕೆಲಸೋಂಕಿತರು ಹಾಡು ಹೇಳಿದರು.
ಒಟ್ಟಾರೆ ಸೋಂಕಿತರಿಗೆ ನಿಮ್ಮ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ಅಧಿಕಾರಿಗಳು ಈ ಮೂಲಕ ಸಾರಿದರು. ಇನ್ನೂ ಸೋಂಕಿತರು ಸಹ ಮನರಂಜನೆ ಕಾರ್ಯಕ್ರಮದಿಂದ ತಮ್ಮ ನೋವನ್ನು ಮರೆತು ಆರೈಕೆ ಕೇಂದ್ರದ ತುಂಬೆಲ್ಲಾ ಸ್ಟೆಪ್ ಹಾಕಿ ಸಂತಸಪಟ್ಟರು. ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.