ರಾತ್ರಿಯಾದರೆ ಸಾಕು ಮನೆ ಮೇಲೆ ಬೀಳುತ್ತಿದೆ ಕಲ್ಲು; ಕಂಗಾಲಾದ ಕುಟುಂಬ
ಚಿಕ್ಕಮಗಳೂರು, ಜನವರಿ 25: ರಾತ್ರೋ ರಾತ್ರಿ ಮನೆಯೊಂದರ ಮೇಲೆ ಕಲ್ಲುಗಳು ಬೀಳುತ್ತಿರುವ ಸಂಗತಿ ಚಿಕ್ಕಮಗಳೂರಿನಲ್ಲಿ ನಡೆದಿದೆ. ರಾತ್ರಿಯಾಗುತ್ತಿದ್ದಂತೆ ಮನೆ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸುತ್ತಿರುವುದಾಗಿ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಧರೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನವಳ್ಳಿ ಗ್ರಾಮದ ರಾಘವೇಂದ್ರ ಶೆಟ್ಟಿ ಎಂಬುವರ ಮನೆಯ ಮೇಲೆ ಈ ಗುರುವಾರದಿಂದ ರಾತ್ರಿಯಿಂದ ನಿರಂತರವಾಗಿ 15 ನಿಮಿಷಕ್ಕೊಮ್ಮೆ ಕಲ್ಲುಗಳು ಬೀಳುತ್ತಿವೆ. ಈ ವೇಳೆ ಸಾರ್ವಜನಿಕರ ಸಹಾಯದೊಂದಿಗೆ ಮನೆಯ ಸುತ್ತ ಹುಟುಕಾಟ ನಡೆಸಿದರೂ ಏನೂ ಗೊತ್ತಾಗಲಿಲ್ಲ.

ಆದರೆ ಮನೆಯ ಮೇಲೆ ಕಲ್ಲು ಬೀಳುವುದು ಮಾತ್ರ ಮುಂದುವರೆದಿದೆ. ಈ ಹಿನ್ನೆಲೆ ಕುಟುಂಬದವರು ಸಾಕಷ್ಟು ಗಾಬರಿಗೊಂಡಿದ್ದರು. ಇದರಿಂದ ಮನೆಯ ಮಾಲೀಕ ರಾಘವೇಂದ್ರ ಶೆಟ್ಟಿ ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನಲೆ ಸ್ಥಳಕ್ಕೆ ಬಂದ ಪೊಲೀಸರ ತಂಡ ಹಾಗೂ ಶ್ವಾನದಳದ ಸಿಬ್ಬಂದಿ ತನಿಖೆ ನಡೆಸಿದ್ದಾರೆ.












Click it and Unblock the Notifications