ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಬೆಂಬಲಿಗರು ನೀಡಿದ್ದ ಕುಕ್ಕರ್‌ ಬ್ಲಾಸ್ಟ್‌: ತಪ್ಪಿದ ಭಾರೀ ಅನಾಹುತ

ಚಿಕ್ಕಮಗಳೂರು, ಏಪ್ರಿಲ್‌ 4: ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಬೆಂಬಲಿಗರು ನೀಡಿದ್ದಾರೆ ಎನ್ನಲಾದ ಕುಕ್ಕರ್ ಸ್ಫೋಟಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿಯಲ್ಲಿ ನಡೆದಿದ್ದು, ಮಹಿಳೆ ಅಪಾಯದಿಂದ ಪಾರಾಗಿದ್ದಾರೆ.

ಕೊಪ್ಪ ತಾಲೂಕಿನ ಶಾನುವಳ್ಳಿಯ ದೇವರಾಜ್ ಎನ್ನುವವರ ಮನೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಬೆಂಬಲಿಗರು ನೀಡಿರುವ ಕುಕ್ಕರ್‌ನಲ್ಲಿ ತರಕಾರಿ ಬೇಯಿಸಲು ಇಡಲಾಗಿತ್ತು. ಕಳಪೆ ಗುಣಮಟ್ಟದ ಕುಕ್ಕರ್‌ ಏಕಾಏಕಿ ಬ್ಲಾಸ್‌ ಆಗಿದ್ದು, ಸಮೀಪದಲ್ಲೇ ಇದ್ದ ತಾಯಿ ಮಗು ಅದೃಷ್ಟವಶಾತ್‌ ಪ್ರಣಾಪಾಯದಿಂದ ಪಾರಾಗಿದ್ದಾರೆ.

Sringeri MLA T D Rajegowda Supports Distributed Cooker Blast

ಶಾಸಕ ಟಿ. ಡಿ. ರಾಜೇಗೌಡ ಬೆಂಬಗಲಿಗರು ಇತ್ತೀಚೆಗೆ ಕುಕ್ಕರ್ ಹಂಚಿದ್ದರು. 450 ರೂಪಾಯಿ ಕುಕ್ಕರ್‌ಗೆ 1,399 ರೂಪಾಯಿ ಲೇಬಲ್ ಅಂಟಿಸಿ ಮನೆ ಮನೆಗೆ ನೀಡಿದ್ದರು. ಕಳಪೆ ಗುಣಮಟ್ಟದ ಕುಕ್ಕರ್‌ ಆದ ಪರಿಣಾಮ ಬ್ಲಾಸ್‌ ಆಗಿದೆ ಎಂದು ಸ್ಥಳೀಯರು ಶಾಸಕರ ಬೆಂಬಲಿಗರ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಆ ಕುಕ್ಕರ್ ಬೇಡವೇ ಬೇಡ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಕಾಂಗ್ರೆಸ್ ಶಾಸಕರು ಕಳಪೆ ಕುಕ್ಕರ್ ನೀಡಿ ಜನರ ಜೀವಕ್ಕೆ ಅಪಾಯ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಿಫ್ಟ್ ಪಾಲಿಟಿಕ್ಸ್ ಮುಂದುವರಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಎದುರಾಗಲಿದೆ ಎನ್ನುವ ಆಂತರಿಕ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದ್ದು, ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

Sringeri MLA T D Rajegowda Supports Distributed Cooker Blast

ಇನ್ನು ಇತ್ತೀಚಿಗಷ್ಟೇ ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿಯಲ್ಲಿ ಬಿಜೆಪಿಯವರು ನೀಡಿದ ಸೀರೆಯನ್ನು ಮತದಾರರು ನಡು ರಸ್ತೆಯಲ್ಲಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ನಮಗೆ ಸೀರೆ ಬೇಡ, ಸೌಲಭ್ಯ ಬೇಕು ಎಂದು ಹತ್ತಾರು ಸೀರೆಗಳನ್ನು ನಡು ರಸ್ತೆಯಲ್ಲಿ ಸುಟ್ಟು ಹಾಕಿದ್ದರು. ಇದೀಗ ಕಾಂಗ್ರೆಸ್‌ ಶಾಸಕ ನೀಡಿರುವ ಕುಕ್ಕರ್‌ ಬ್ಲಾಸ್‌ ಆಗಿದ್ದು, ಮತ್ತಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+