ಕುಡಿದ ನಶೆಯಲ್ಲಿನ ಅಣ್ಣ ತಮ್ಮನ ಜಗಳ ಕೊನೆಯಾಗಿದ್ದು ಸಾವಿನಲ್ಲಿ...

ಚಿಕ್ಕಮಗಳೂರು, ಮೇ 08: ಎಣ್ಣೆ ಏಟಲ್ಲಿ ಟೈಟಾಗಿ ತಮ್ಮನೇ ಅಣ್ಣನನ್ನು ಹೊಡೆದು ಕೊಂದಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಉಪ್ಪಾರ ಬೀರನಹಳ್ಳಿ ಪಿಡಬ್ಲ್ಯುಡಿ ಕ್ವಾಟರ್ಸ್ ‍ನಲ್ಲಿ ನಡೆದಿದೆ.

Recommended Video

      ಪಶ್ಚಿಮ ಬಂಗಾಳದಲ್ಲಿ ಎಣ್ಣೆ ಕೂಡ ಮನೆಗೆ ಹೋಂ ಡೆಲಿವರಿ | West bengal | Oneindia Kannada

      ಇಬ್ಬರು ಸಹೋದರರು ಮನೆ ಮುಂದೆ ಚೌಕಬಾರ ಆಟವಾಡುತ್ತಿದ್ದಾಗ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ತಮ್ಮ ಕಿರಣ್ ಅಣ್ಣ ಅರುಣ್ ಗೆ 500 ರೂಪಾಯಿ ನೀಡಿದ್ದ. ಈ ವೇಳೆ ತನ್ನ ಹಣವನ್ನು ವಾಪಸ್ ಕೊಡು ಎಂದು ಅಣ್ಣನಿಗೆ ದುಂಬಾಲು ಬಿದ್ದಿದ್ದಾನೆ.

      Quarrel Between Brothers Ends With Death In Tarikere

      ಈ ವೇಳೆ, ಮದ್ಯದ ಅಮಲಿನಲ್ಲಿದ್ದ ಇಬ್ಬರು ಸಹೋದರರ ಮಧ್ಯೆ ಗಲಾಟೆ ನಡೆದಿದೆ. ಸಹೋದರರ ಈ ಗಲಾಟೆಯಲ್ಲಿ ಕಿರಣ್, ಅರುಣ್ ಮೇಲೆ ಹಲ್ಲೆ ಮಾಡಿದ್ದಾನೆ. ಕೆಳಗೆ ಬಿದ್ದ ಅರುಣ್ ತಲೆಗೆ ಗಂಭೀರ ಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಅರುಣ್ ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಲಕ್ಕವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಲಕ್ಕವಳ್ಳಿ ಪೊಲೀಸರು ಆರೋಪಿ ಕಿರಣ್ ‍ನನ್ನ ಬಂಧಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+