Get Updates
Get notified of breaking news, exclusive insights, and must-see stories!

ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶದಲ್ಲಿ ಪೇಜಾವರ ಶ್ರೀ ಹೆಜ್ಜೆ ಗುರುತು

ಚಿಕ್ಕಮಗಳೂರು, ಡಿಸೆಂಬರ್ 29: ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಒಳಪಟ್ಟಿದ್ದ ಮಲೆನಾಡಿನ ಅದೆಷ್ಟೋ ಕುಗ್ರಾಮಗಳು ಇಂದು ಖಾಸಗಿಯವರ ಹೃದಯ ವೈಶಾಲ್ಯತೆಯಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಿದ್ದು, ಇಂಥಾ ಮಹತ್ತರ ಕೆಲಸ ಮಾಡುತ್ತಾ ಬಂದಿರುವ ಹೆಗ್ಗಳಿಕೆಗೆ ಉಡುಪಿಯ ಪೇಜಾವರ ಮಠವೂ ಭಾಜನವಾಗಿದೆ.

ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಮಲೆನಾಡಿನ ಹಲವು ಪ್ರದೇಶಗಳ ಜನರಿಗೆ ಪೇಜಾವರ ಮಠ ಜೀವನ ರೂಪಿಸಿಕೊಟ್ಟಿದೆ. ಇದರಲ್ಲಿ ನಕ್ಸಲ್ ಪೀಡಿತ ಪ್ರದೇಶಗಳೂ ಸೇರಿವೆ.

6 ಹಂತಗಳಲ್ಲಿ ವಿದ್ಯುತ್ ಸಂಪರ್ಕ, ಮೂಲಭೂತ ಸೌಲಭ್ಯ ಕಲ್ಪಿಸುವ, ನಕ್ಸಲ್ ಶರಣಾತಿಗೂ ಮುನ್ನಡೆ ಬರೆಯುವ ಮೂಲಕ ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಬೆಳಕಾಗಿದ್ದರು ಪೇಜಾವರ ಶ್ರೀ..ಈ ಕುರಿತು ಒಂದು ವರದಿ ಇಲ್ಲಿದೆ...

ನಕ್ಸಲರು ಸರ್ಕಾರದ ವಿರುದ್ದ ದಂಗೆ ಮಾಡುತ್ತಿದ್ದರು

ನಕ್ಸಲರು ಸರ್ಕಾರದ ವಿರುದ್ದ ದಂಗೆ ಮಾಡುತ್ತಿದ್ದರು

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಅನೇಕ ಗ್ರಾಮಗಳು ನಕ್ಸಲ್ ಪೀಡಿತ ಎಂಬ ಕುಖ್ಯಾತಿಗೆ ಪಾತ್ರವಾಗಿವೆ. ಸರ್ಕಾರ ಬಿಡುಗಡೆ ಮಾಡಿದ ಅದೆಷ್ಟೋ ಲಕ್ಷ ರುಪಾಯಿ ನಕ್ಸಲ್ ಪ್ಯಾಕೇಜ್ ಸಹ ಫಲಾನುಭವಿಗಳಿಗೆ ಸೇರಿದ್ದಿಲ್ಲ.

ಇದನ್ನೇ ನಕ್ಸಲರು ಬಂಡವಾಳವಾಗಿಟ್ಟುಕೊಂಡು ಅಮಾಯಕ ಗ್ರಾಮಸ್ಥರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿರುವುದನ್ನು ಮನಗಂಡಿದ್ದ ಉಡುಪಿಯ ಪೇಜಾವರ ಮಠ ಕೈಗೆತ್ತಿಕೊಂಡ ಯೋಜನೆಯೇ ಗ್ರಾಮೋತ್ಥಾನ ಪರಿಕಲ್ಪನೆ.

ಮಲೆನಾಡಿನಲ್ಲಿ ಹೊಸ ಕ್ರಾಂತಿ ಮಾಡಿದ್ದ ಶ್ರೀಗಳು

ಮಲೆನಾಡಿನಲ್ಲಿ ಹೊಸ ಕ್ರಾಂತಿ ಮಾಡಿದ್ದ ಶ್ರೀಗಳು

ಇದರನ್ವಯ ಈವರೆಗೂ 500 ಕ್ಕೂ ಮನೆಗಳಿಗೆ ವಿದ್ಯುತ್ ಸೌಲಭ್ಯ ದೊರೆತಿದೆ. ಲಕ್ಷಾಂತರ ರುಪಾಯಿ ವಿದ್ಯಾರ್ಥಿವೇತನ ಮಕ್ಕಳಿಗೆ ಪೂರೈಕೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಮೆಣಸಹ್ಯಾಡ, ಕಳಸದ ಕೆಲ ಗ್ರಾಮಗಳ 130 ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಶ್ರೀಗಳು ನೀಡಿದರು.

ಇಂದಿಗೂ ಮಲೆನಾಡಿನ ಕುಗ್ರಾಮಗಳಲ್ಲಿ ಹೆಜ್ಜೆ ಹಾಕಿದ ಪೇಜಾವರ ಶ್ರೀಗಳು ನಕ್ಸಲ್ ಪೀಡಿತ ಪ್ರದೇಶಗಳಿಗೆ ತೆರಳಿ ಹೊಸ ಕ್ರಾಂತಿಯನ್ನೇ ಮೂಡಿಸಿದರು..ಕಳಸದ ಕೆಂಚನಕೆರೆ, ಕಾನು ಮೇಳ, ದೇವರಗುಂಡಿಯಂಥ ಗ್ರಾಮಗಳಲ್ಲಿ ಶೇ.80 ರಷ್ಟು ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡಿದ್ದರು ಪೇಜಾವರ ಶ್ರೀಗಳು.

ನಕ್ಸಲ್ ಶರಣಾಗತಿಗೆ ಯತ್ನ ಮಾಡಿದ್ದ ಶ್ರೀಗಳು

ನಕ್ಸಲ್ ಶರಣಾಗತಿಗೆ ಯತ್ನ ಮಾಡಿದ್ದ ಶ್ರೀಗಳು

ಪೇಜಾವರ ಮಠದ ವತಿಯಿಂದಲೇ ಲಕ್ಷಾಂತರ ರೂ, ವೆಚ್ಚದಲ್ಲಿ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದರು. ಇದರ ಜೊತೆಗೆ ಗಿರಿಜನರಿಗೆ ಅಗತ್ಯವಾಗಿ ಬೇಕಾಗಿರುವ ಪಾತ್ರೆ, ಮೂಲಭೂತ ಸಾಮಾಗ್ರಿಗಳನ್ನು ವಿತರಣೆ ಮಾಡಿದ್ದರು. ಮಠದಿಂದ 2 ಕೋಟಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ದಿ ಕೆಲಸ ಮಾಡಿ, ನಾಲ್ಕು ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ಕ್ರಾಂತಿಯನ್ನೇ ಮೂಡಿಸಿದರು.

ಇನ್ನು ಮುಂದುವರಿದ ಭಾಗವಾಗಿ ನಕ್ಸಲ್ ಶರಣಾಗತಿಗೆ ಪೇಜಾವರ ಶ್ರೀಗಳು ಮುನ್ನಡೆಯನ್ನು ಬರೆದರು. ಇದರ ಭಾಗವಾಗಿ ನಕ್ಸಲ್ ಶರಣಾಗತಿ ಮತ್ತು ಪುನರ್ ವಸತಿ ಪ್ಯಾಕೇಜ್ ನ ಅಡಿಯಲ್ಲಿ ನಾಲ್ವರು ಕಾಡಿನಿಂದ ನಾಡಿಗೆ ಮುಖ ಮಾಡಿದರು.

ನಕ್ಸಲರು ಅಪಾಯಕಾರಿ ಎಂದಿದ್ದ ಪೇಜಾವರ ಶ್ರೀಗಳು

ನಕ್ಸಲರು ಅಪಾಯಕಾರಿ ಎಂದಿದ್ದ ಪೇಜಾವರ ಶ್ರೀಗಳು

2010ರಲ್ಲಿ ಸಿಎಂ ಯಡಿಯ್ಯೂರಪ್ಪನವರ ಅವಧಿಯಲ್ಲಿ ನಾಲ್ಕು ಮಂದಿ ನಕ್ಸಲರು ಶರಣಾಗತಿ ಆಗುವಲ್ಲಿ ಶ್ರೀ ಪಾತ್ರ ದೊಡ್ಡದು. ಜಿಲ್ಲಾಡಳಿತದ ಮುಂದೆ ನಕ್ಸಲ್ ರಾದ ವೆಂಕಟೇಶ್ ,ಮಲ್ಲಿಕಾ, ಕೋಮಲ, ಜಯ ಶರಣಾಗತಿಯಾಗಿ ಪ್ಯಾಕೇಜ್ ನ ಸೌಲಭ್ಯ ಪಡೆದು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ನಕ್ಸಲ್ ಪೀಡಿತ ಪ್ರದೇಶದ ಮನೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ, ಲಕ್ಷಾಂತರ ರೂ, ಗಿರಿಜನರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಶ್ರೀ ಮಠ ನೀಡಿದೆ. ಗ್ರಾಮದ ಅಮಾಯಕ ಮನಸ್ಸುಗಳಲ್ಲಿ ಹಿಂಸೆ-ಪ್ರತಿಭಟನೆ ಪ್ರಚೋದಿಸಿ ಆಡಳಿತ ಯಂತ್ರದ ವಿರುದ್ಧ ನಡೆಸುತ್ತಿರುವ ತಮ್ಮ ಹೋರಾಟ ಬೆಂಬಲಿಸುವಂತೆ ಮಾಡುವ ನಕ್ಸಲರು ಸದಾ ಅಪಾಯಕಾರಿ ಎನ್ನುವುದನ್ನು ಪ್ರತಿ ಭೇಟಿಯಲ್ಲೂ ಶ್ರೀಗಳು ಪುನರುಚ್ಚರಿಸುತ್ತಲೇ ಬಂದಿದ್ದರು. ಮಲೆನಾಡಿನ ಅನೇಕ ಜನರಿಗೆ ಶ್ರೀಗಳ ಅಗಲಿಕೆ ನೋವು ತಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+