KSRTC ಬಸ್ ಕೊರತೆ: ಚಿಕ್ಕಮಗಳೂರಿನಲ್ಲಿ ದಿನವಿಡೀ ಪರದಾಡಿದ ಪ್ರಯಾಣಿಕರು
ಚಿಕ್ಕಮಗಳೂರು, ಆಗಸ್ಟ್, 12: ದಿಢೀರನೇ ಸರ್ಕಾರಿ ಬಸ್ಗಳು ಇಲ್ಲದೆ ಕಾಫಿನಾಡಿನಲ್ಲಿ ಪ್ರಯಾಣಿಕರು ಹಗಲು ರಾತ್ರಿ ಎನ್ನದೆ ಪರದಾಟ ನಡೆಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡು ಕ್ಷೇತ್ರದಲ್ಲಿ ಬಸ್‌ಗಾಗಿ ಭಕ್ತರು ಮತ್ತು ಪ್ರವಾಸಿಗರು ತಮ್ಮ ಸುಗಮ ಪ್ರಯಾಣಕ್ಕಾಗಿ ತುಂಬಾ ಪರದಾಡಿದ ಘಟನೆ ನಡೆದಿದೆ.
ಶುಕ್ರವಾರ (ಆಗಸ್ಟ್ 12) ಸಂಜೆಯಿಂದ ರಾತ್ರಿವರೆಗೂ ಬಸ್‌ಗಾಗಿ ಪ್ರವಾಸಿಗರು ಕಾದು ಸುಸ್ತಾದರು. ಬಸ್ ಇಲ್ಲದೆ ರಾತ್ರಿ ಪಿಕಪ್ ವಾಹನದಲ್ಲೇ ಮೂಡಿಗೆರೆಗೆ ಪ್ರಯಾಣ ಬೆಳೆಸಿದರು. 80ಕ್ಕೂ ಹೆಚ್ಚು ಮಹಿಳೆಯರು ಪಿಕಪ್ ವಾಹನವನ್ನೇರಿ ಸಂಚಾರ ಮಾಡಿದರು. ಅಲ್ಲದೆ ಈ ಅವಾಂತರಕ್ಕೆ ಮುಖ್ಯ ಕಾರಣ ಶಕ್ತಿ ಯೋಜನೆಯಾಗಿದೆ. ಈ ಯೋಜನೆ ಜಾರಿಯಾಗುತ್ತಿದ್ದಂತೆ ಬಸ್‌ಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ದಾವಣಗೆರೆ, ಚಿತ್ರದುರ್ಗ, ಹಾಸನ, ತುಮಕೂರು, ಕಡೂರು ಪ್ರಯಾಣಿಕರಿಗೆ ಈ ಸಂಕಷ್ಟ ಒದಗಿಬಂದಿದೆ. ಕೊನೆಯೆ ಬೇರೆ ಯಾವುದೇ ದಾರಿಯಿಲ್ಲದೆ ದುಬಾರಿ ಹಣ ನೀಡಿ ಪಿಕ್ ಅಪ್ ವಾಹನದಲ್ಲಿ ಸಂಚಾರ ಮಾಡುವಷ್ಟರಲ್ಲಿ ಪ್ರಯಾಣಿಕರು ಹೈರಾಣಗೊಂಡಿದ್ದಾರೆ. ಇನ್ನು ಹೊರ ಜಿಲ್ಲೆಗಳಿಂದ ಬಂದ ಪ್ರವಾಸಿಗರು ಬಸ್ ಸಿಗದಿದ್ದಕ್ಕೆ ತಮ್ಮ ಆಕ್ರೋಶ ಹೊರಹಾಕಿದರು.












Click it and Unblock the Notifications