ಲೈಂಗಿಕ ಕಿರುಕುಳ ಆರೋಪ:ಪೀಠ ತ್ಯಾಗ ಮಾಡಿದ ಜಯಬಸವಾನಂದ ಸ್ವಾಮೀಜಿ
ಚಿಕ್ಕಮಗಳೂರು, ಡಿಸೆಂಬರ್ 05:ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಬಸವ ಮಠದ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ
ಸ್ವಾಮೀಜಿ ಪೀಠ ತ್ಯಾಗ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಸ್ವಾಮೀಜಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು. ಸ್ವಾಮೀಜಿ ವಿರುದ್ಧ ಈ ಗುರುತರ ಆರೋಪ ಹಿನ್ನಲೆಯಲ್ಲಿ ಬಸವ ಮಂದಿರ ವಿರಕ್ತ ಮಠದ ಜಯಬಸವಾನಂದ ಸ್ವಾಮೀಜಿ ಪೀಠ ತ್ಯಾಗ ಮಾಡಿದ್ದಾರೆ.

ಸದ್ಯ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಸತ್ಯಾಂಶ ಹೊರ ಬರುವ ತನಕ ಬಸವತತ್ವ ಪೀಠವನ್ನು ತ್ಯಜಿಸಲು ಸ್ವಾಮೀಜಿ ನಿರ್ಧರಿಸಿದ್ದಾರೆ. ಇದೀಗ ಪೀಠ ತ್ಯಜಿಸಿ ಸ್ವಾಮೀಜಿ ಬೆಂಗಳೂರಿಗೆ ತೆರಳಿದ್ದು, ಅವರು ಸಲ್ಲಿರುವ ರಾಜೀನಾಮೆ ಪತ್ರದಲ್ಲಿ ವಿವರ ಇಂತಿದೆ...

"ತಮ್ಮ ಮೇಲೆ ಗಂಭೀರ ಆರೋಪ ಬಂದಿರುವುದರಿಂದ ಬಸವತತ್ವ ಪೀಠದ ಪಾವಿತ್ರ್ಯವನ್ನು ಕಾಪಾಡುವ ಸಲುವಾಗಿ ಟ್ರಸ್ಟ್ ಮತ್ತು ಸಮಾಜದ ಮುಖಂಡರ ಸಲಹೆ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ. ಚಿಕ್ಕಮಗಳೂರಿನ ಸಿವಿಲ್ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಪ್ರಕರಣವಿದ್ದು, ಹೊರಿಸಿದ ಆರೋಪ, ಕಳಂಕದಿಂದ ಮುಕ್ತನಾಗಿ ಬರುವವರೆಗೆ ಪೀಠದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುತ್ತೇವೆ. ಸತ್ಯಕ್ಕೆ, ಸಮಾಜಕ್ಕೆ ಗೌರವ ತೋರಿಸಿ ರಾಜೀನಾಮೆ ಸಲ್ಲಿಸಿದ್ದು, ಸತ್ಯಕ್ಕೆ ಕೊನೆಯಲ್ಲಿ ಜಯ ಸಿಗಲಿದೆ" ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.












Click it and Unblock the Notifications