ರಾತ್ರೋರಾತ್ರಿ ಕಾಣಿಸಿಕೊಂಡಿತು ಅಂಬೇಡ್ಕರ್ ಪ್ರತಿಮೆ; ಸಿ.ಟಿ.ರವಿ ಕುಮ್ಮಕ್ಕು?

ಚಿಕ್ಕಮಗಳೂರು, ಡಿಸೆಂಬರ್ 3: ಗೋಮಾಳದ ಜಾಗಕ್ಕಾಗಿ ಗ್ರಾಮಸ್ಥರು ರಾತ್ರೋರಾತ್ರಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಿ ಹೋರಾಟಕ್ಕಿಳಿದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರಿನ ಅರಿಶಿನಗುಪ್ಪೆ ಗ್ರಾಮದಲ್ಲಿ ಗೋಮಾಳದ ಜಾಗಕ್ಕಾಗಿ ರಾತ್ರೋರಾತ್ರಿ ಗುಡಿಸಲು ನಿರ್ಮಿಸಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಗ್ರಾಮದ ಸರ್ವೆ ನಂ 52ರಲ್ಲಿ ಗುಡಿಸಲು ನಿರ್ಮಿಸಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗಿದ್ದು, ಅದನ್ನು ತೆರವುಗೊಳಿಸಲು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಂಬೇಡ್ಕರ್ ಪ್ರತಿಮೆ ನೋಡಿ ವಾಪಸ್ಸಾಗಿದ್ದಾರೆ. ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದಾಗಿದ್ದು, ಊರಿನಿಂದ ಹತ್ತು ಕಿಲೋ ಮೀಟರ್ ದೂರವಿದೆ.

ಆದರೆ "ನೀವು ನಮಗೆ ಜಾಗ ನೀಡಿಲ್ಲ, ಉಳ್ಳವರಿಗೆ, ಶ್ರೀಮಂತರಿಗೆ ಜಾಗವನ್ನು ಮಾರಿಕೊಂಡಿದ್ದೀರಿ. ನಮಗೆ ಮಾತ್ರ ಕೊಡಲು ಹಿಂದೇಟು ಹಾಕುತ್ತೀರಿ, ನಮಗೂ ಜಾಗ ಬೇಕು. ನಮಗೂ ಗೋಮಾಳ ಜಾಗವನ್ನು ಕೊಡಿ" ಎಂದು ಈ ಮೂಲಕ ಹೋರಾಟಕ್ಕೆ ಇಳಿದಿದ್ದಾರೆ.

Is CT Ravi Support Behind Ambedkar Statue Installed Overnight In Chikkamagaluru

ಅಂಬೇಡ್ಕರ್ ಅವರ ಹೆಸರನ್ನು, ಅವರ ಪ್ರತಿಮೆಯನ್ನು ಹೀಗೆ ಬಳಸಿಕೊಂಡು ದುರುಪಯೋಗಪಡಿಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ಪ್ರತಿಭಟನಾಕಾರರು, ಸಚಿವರಿಗೆ ತಿಳಿಸಿಯೇ ಅಂಬೇಡ್ಕರ್ ಪ್ರತಿಭಟನೆ ಪ್ರತಿಷ್ಠಾಪಿಸಿ ಪ್ರತಿಭಟನೆ ಮಾಡ್ತಾ ಇದ್ದೇವೆ" ಎಂದು ಉತ್ತರಿಸಿದ್ದಾರೆ.

ಈ ಮಾತಿನಿಂದ, ಕಾನೂನು ಪಾಲನೆ ಮಾಡಬೇಕಾದ ಸಚಿವರೇ ಕಾನೂನು ಉಲ್ಲಂಘಿಸಿದರಾ, ಅಕ್ರಮ ಅರಣ್ಯ ಪ್ರವೇಶಕ್ಕೆ ಗ್ರಾಮಸ್ಥರಿಗೆ ಸಚಿವರೇ ಕುಮ್ಮಕ್ಕು ನೀಡಿದ್ದಾರಾ ಎಂಬ ಅನುಮಾನ ಮೂಡಿದೆ. ಪ್ರತಿಭಟನಾಕಾರರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಈ ಕುರಿತು ವಾಗ್ವಾದವೂ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+