ಸರ್ಕಾರ ಉಳಿಸಲು ದೇವರ ಮೊರೆ ಹೋದ ರೇವಣ್ಣ
Recommended Video
ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಭೇಟಿ ನೀಡಿದ ಎಚ್ ಡಿ ರೇವಣ್ಣ | Oneindia Kannada
ಚಿಕ್ಕಮಗಳೂರು, ಜುಲೈ 9: ರಾಜ್ಯ ರಾಜಕಾರಣದಲ್ಲಿ ಭಾರೀ ತಲ್ಲಣ ಉಂಟಾಗಿದ್ದು, ಲೋಕೋಪಯೋಗಿ ಸಚಿವ ರೇವಣ್ಣ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದ್ದಾರೆ. ಶೃಂಗೇರಿಗೆ ಬಂದು ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸರ್ಕಾರವನ್ನು ಉಳಿಸಿಕೊಡುವಂತೆ ಶಾರದಾಂಬೆಯಲ್ಲಿ ಬೇಡಿಕೊಂಡಿದ್ದಾರೆ. ಒಟ್ಟು ಇದೇ ವಾರದಲ್ಲಿ ಎರಡು ಬಾರಿ ಶೃಂಗೇರಿಗೆ ರೇವಣ್ಣ ಭೇಟಿ ನೀಡಿದಂತಾಗಿದೆ. ಶಾರದಾಂಬೆ ದೇವೇಗೌಡರ ಕುಟುಂಬದ ಇಷ್ಟ ದೈವವಾಗಿದ್ದು, ಈ ಹಿಂದೆ ದೇವೇಗೌಡರೂ ಕುರ್ಚಿಗಾಗಿ ಶೃಂಗೇರಿಯಲ್ಲಿ ಅತಿರುದ್ರ ಮಹಾಯಾಗ ನಡೆಸಿದ್ದರು. ಇಲ್ಲೇ ಮೂರ್ನಾಲ್ಕು ಯಾಗ ಮಾಡಿಸಿದ್ದರು ಸಿಎಂ ಕುಮಾರಸ್ವಾಮಿ. ಸರ್ಕಾರಕ್ಕೆ ಸಂಚಕಾರ ಬಂದಾಗೆಲ್ಲಾ ಶಾರದಾಂಬೆಯಲ್ಲಿ ಪೂಜೆ ಸಲ್ಲಿಸಿ, ಬೇಡಿಕೊಂಡು ಯಾಗ ನಡೆಸುವುದು ಗೌಡರ ಕುಟುಂಬದ ರೂಢಿಯಲ್ಲಿದೆ.

ಇಂದು ಬೆಳಿಗ್ಗೆ ಶೃಂಗೇರಿಗೆ ಭೇಟಿ ನೀಡಿದ್ದ ರೇವಣ್ಣ ಪೂಜೆ ಸಲ್ಲಿಸಿ ವಾಪಸ್ಸಾಗಿದ್ದಾರೆ.












Click it and Unblock the Notifications