ಜ್ಯೋತಿಷಿ ಮಾತು ಕೇಳಿ ಕೂಸನ್ನು ಕೊಂದ ಕಟುಕ ತಂದೆ
ಚಿಕ್ಕಮಗಳೂರು, ಜೂನ್ 19: ಜ್ಯೋತಿಷಿ ಮಾತನ್ನು ಕೇಳಿ ಒಂದೂವರೆ ತಿಂಗಳಿನ ಹೆಣ್ಣು ಮಗುವನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಬೂಚೇನಹಳ್ಳಿ ಕಾವಲ್ ನಲ್ಲಿ ನಡೆದಿದೆ.
ಕೊಲೆ ಮಾಡಿರುವ ಮಂಜುನಾಥ್ ( 27) ನನ್ನು ಬಂಧಿಸಲಾಗಿದೆ. ಹೆಣ್ಣು ಮಗು ಹುಟ್ಟಿದರೆ ಭವಿಷ್ಯಕ್ಕೆ ಕಂಟಕ ಎಂದು ಮಂಜುನಾಥ್ ಗೆ ಜ್ಯೋತಿಷಿಯೊಬ್ಬರು ಹೇಳಿದ್ದು, ಆ ಮಾತನ್ನು ನಂಬಿ ಹೆತ್ತ ಕಂದನನ್ನೇ ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ. ಹೆಂಡತಿ ಇರದ ವೇಳೆಯನ್ನು ನೋಡಿಕೊಂಡು ಮಗುವನ್ನು ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ಬಂಧಿಸಿದರು.












Click it and Unblock the Notifications