ಚಿಕ್ಕಮಗಳೂರು: ಹೊಲದಿಂದ ಬರುವಾಗ ದಿಢೀರ್ ಡೈನಮೈಟ್ ಸ್ಫೋಟ, ರೈತನ ಕಾಲು ಕಟ್
ಚಿಕ್ಕಮಗಳೂರು, ಅಕ್ಟೋಬರ್ 19 : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸೇವಾಪುರ ಗ್ರಾಮದಲ್ಲಿ ಡೈನಮೈಟ್ ಸ್ಫೋಟಗೊಂಡು ರೈತ ಕಾಲು ಕಳೆದುಕೊಂಡಿರುವ ಘಟನೆ ನಡೆದಿದೆ.
ರೈತ ಹೊಲದಿಂದ ಬರುವಾಗ ದಿಢೀರ್ ಡೈನಮೈಟ್ ಸ್ಫೋಟಗೊಂಡ ಹಿನ್ನಲೆಯಲ್ಲಿ ಸೇವಾಪುರ ಗ್ರಾಮದ ರೈತ ಸಿದ್ದನಾಯ್ಕ್ ಎಂಬುವವರ ಸ್ಥಿತಿ ಗಂಭೀರವಾಗಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಡೈನಾಮೈಟ್ ಸ್ಫೋಟಗೊಂಡ ಪರಿಣಾಮ ರೈತನ ಕಾಲಿಗೆ ಬಡಿದು ಮೂಳೆಗಳು ಪುಡಿಯಾಗಿವೆ ಎಂದು ತಿಳಿದು ಬಂದಿದೆ.

ಇನ್ನು ಗಾಯಾಳು ಸಿದ್ದಾನಾಯ್ಕ್ ಅವರನ್ನು ಕಡೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಡಗಾಲಿನ ಮೂಳೆ ಪುಡಿಯಾಗಿದ್ದು, ಕಾಲು, ಕೈ, ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಸಿದ್ದಾನಾಯ್ಕ್ ಏಳಲಾಗದೆ ನಿನ್ನೆ ಸಂಜೆಯಿಂದ ಕ್ವಾರಿಯಲ್ಲೇ ಬಿದ್ದಿದ್ದಾರೆ. ಎಡಗಾಲು ಚಿಕಿತ್ಸೆಗೆ ಆಗುವುದಿಲ್ಲ, ಕಾಲು ಬರುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಚೀರನಹಳ್ಳಿಯಲ್ಲಿ ಕ್ವಾರಿಗೆ ಅನುಮತಿ ಪಡೆದಿರುವ ವ್ಯಕ್ತಿ, ಇದೀಗಾ ತಂಗಲಿ ಗ್ರಾಮ ಪಂಚಾಯಿತಿಯಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದು, ಈ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಫಿ ತೋಟದಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಮಡಬೂರಿನ ಕಾಫಿ ಎಸ್ಟೇಟ್‌ನಲ್ಲಿ ಬರೋಬ್ಬರಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲಾಗಿದೆ.

ಕಳೆದ ಆರು ತಿಂಗಳಿಂದ ಕಾಳಿಂಗ ಸರ್ಪ ಕಾಫಿ ಎಸ್ಟೇಟ್‌ನಲ್ಲೇ ಇರುವುದು ತಿಳಿದು ಬಂದಿದೆ. ಪದೇ ಪದೆ ತೋಟದ ಕಾರ್ಮಿಕರಿಗೆ ಕಾಣಿಸಿ ಕಾಳಿಂಗ ಸರ್ಪ ಕಾಣಿಸಿ ಭಯ ಹುಟ್ಟಿಸಿತ್ತು. ಇದರಿಂದ ಬೇಸತ್ತ ಕಾರ್ಮಿಕರು ಕೊನೆಗೆ ಉರಗ ತಜ್ಞನಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಹರಿಂದ್ರ ಅವರು ಕಾಫಿ ತೋಟದಲ್ಲಿ ಸಂಚಾರ ಮಾಡುತ್ತಿದ್ದ ಕಾಳಿಂಗನನ್ನು ಕ್ಷಣ ಮಾತ್ರದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೆರೆಹಿಡಿದ ಕಾಳಿಂಗ ಸರ್ಪವನ್ನು ನೋಡಿ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದು, ಉರಗ ತಜ್ಞ ಸರ್ಪವನ್ನು ಸುರಕ್ಷಿತವಾಗಿ ಎನ್. ಆರ್ ಪುರದ ಅರಣ್ಯಕ್ಕೆ ಬಿಟ್ಟಿದ್ದಾರೆ.











Click it and Unblock the Notifications