ಲಕ್ಕವಳ್ಳಿ ಬಳಿ ಕಾರ್ಮಿಕರಿದ್ದ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ
ಚಿಕ್ಕಮಗಳೂರು, ಜನವರಿ 25: ಕಾರ್ಮಿಕರನ್ನು ಸಾಗಿಸುತ್ತಿದ್ದ ಲಾರಿಗೆ ಒಂಟಿ ಸಲಗವೊಂದು ಎದುರಿಗೆ ಬಂದು ಡಿಕ್ಕಿ ಹೊಡೆದಿದ್ದು, ಲಾರಿಯಲ್ಲಿದ್ದವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಲಕ್ಕವಳ್ಳಿ ಭದ್ರಾ ಅಭಯಾರಣ್ಯದಲ್ಲಿ ಈ ಸಂಗತಿ ನಡೆದಿದೆ. ಇಂದು ಬೆಳಿಗ್ಗೆ ಫೈರ್ ಲೈನ್ ಹಾಕಲು ಅರಣ್ಯ ಇಲಾಖೆ ಸಿಬ್ಬಂದಿ 30ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆದುಕೊಂಡು ಅರಣ್ಯ ಇಲಾಖೆಯ ವಾಹನದಲ್ಲಿ ಹೊರಟಿದ್ದರು.

ಲಕ್ಕವಳ್ಳಿ ಭದ್ರಾ ಅಭಯಾರಣ್ಯದ ಮುಖ್ಯದ್ವಾರದಿಂದ ಆರೇಳು ಕಿಲೋ ಮೀಟರ್ ಮುಂದೆ ಸಾಗಿದ ಸಂದರ್ಭ ಎದುರಿಗೆ ಬಂದ ಒಂಟಿ ಸಲಗ ಏಕಾಏಕಿ ಎದುರಾಗಿ, ಆಕ್ರೋಶಗೊಂಡು ಲಾರಿಗೆ ಗುದ್ದಿದೆ. ಕೋಪದಿಂದ ಲಾರಿಯನ್ನು ಜಖಂಗೊಳಿಸಿ ಮುಂದೆ ಸಾಗಿದೆ. ಲಾರಿಯಲ್ಲಿದ್ದ ಕಾರ್ಮಿಕರು ಗಾಬರಿಗೊಂಡಿದ್ದಾರೆ. ಆನೆ ದಾಳಿಗೆ ಲಾರಿ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರ್ಮಿಕರು, ಚಾಲಕ ಹಾಗೂ ಸಿಬ್ಬಂದಿಗೆ ಯಾವುದೇ ಹಾನಿ ಆಗಿಲ್ಲ.












Click it and Unblock the Notifications