Get Updates
Get notified of breaking news, exclusive insights, and must-see stories!

ಅದ್ಧೂರಿಯಾಗಿ ಸಂಪನ್ನಗೊಂಡ ದತ್ತಜಯಂತಿ: ವಿಜೃಂಭಿಸಿದ ಶೋಭಾಯಾತ್ರೆ

ಚಿಕ್ಕಮಗಳೂರು, ಡಿಸೆಂಬರ್‌ 8: ಶ್ರೀಗುರು ಇನಾಂ ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದ ಆವರಣದಲ್ಲಿ ರಾಜ್ಯ ಸರಕಾರ ನೇಮಿಸಿದ್ದ ಅರ್ಚಕರು ಹಾಗೂ ವ್ಯವಸ್ಥಾಪನಾ ಸಮಿತಿ ಮೇಲ್ವಿಚಾರಣೆಯಲ್ಲಿ ಗುರುವಾರ ದತ್ತಪಾದುಕೆಗಳಿಗೆ ಪೂಜೆ ನೆರವೇರಿಸುವುದರೊಂದಿಗೆ ದತ್ತಜಯಂತಿ ಕಾರ್ಯಕ್ರಮಕ್ಕೆ ಶಾಂತಿಯುತ ತೆರೆ ಬಿದ್ದಿದೆ.

ದತ್ತಜಯಂತಿ ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ದತ್ತಮಾಲಾಧಾರಣೆ ನಡೆದಿದ್ದು, ಬುಧವಾರ ಬೃಹತ್ ಶೋಭಾಯಾತ್ರೆ ನಡೆಯಿತು. ದತ್ತಜಯಂತಿ ಅಂಗವಾಗಿ ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದ ಆವರಣದಲ್ಲಿ ಗುರುವಾರ ಹೋಮ ಹವನ ನೇರವೇರಿಸಲಾಗಿದ್ದು, ಗುಹೆಯಲ್ಲಿರಿಸಿದ್ದ ಪಾದುಕೆಗಳಿಗೆ ಅರ್ಚಕರು ಗುರುವಾರ ಪೂಜೆ ಸಲ್ಲಿಸಿದರು. ಮುಜರಾಯಿ ಇಲಾಖೆ ಆಯುಕ್ತರ ಆದೇಶದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರ ಮೇಲ್ವಿಚಾರಣೆಯಲ್ಲಿ ಪೂಜಾ ವಿಧಾನಗಳನ್ನು ನಡೆಸಲಾಯಿತು.

ಪಾದುಕೆಗಳ ದರ್ಶನಕ್ಕಾಗಿ ಗುರುವಾರ ಬೆಳಗ್ಗೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಯಿಂದ ವಿವಿಧ ವಾಹನಗಳಲ್ಲಿ ಆಗಮಿಸಿದ್ದ ದತ್ತ ಭಕ್ತರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದ ಆವರಣಕ್ಕೆ ಆಗಮಿಸಿದ್ದರು.ಇರುಮುಡಿ ಹೊತ್ತಿದ್ದ ಭಕ್ತರು ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮಾಡಿ ದತ್ತಾತ್ರೇಯರ ನಾಮಸ್ಮರಣೆಯೊಂದಿಗೆ ದತ್ತಪೀಠದತ್ತಕ್ಕೆ ತೆರಳಿದರು. ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾ, ಪೀಠದ ಆವರಣದಲ್ಲಿ ಅಳವಡಿಸಿದ್ದ ಬ್ಯಾರಿಕ್ಯಾಡ್‍ನಲ್ಲಿ ಸರತಿ ಸಾಲಿನಲ್ಲಿ ತೆರಳಿ ದತ್ತಪಾದುಕೆಗಳ ದರ್ಶನ ಪಡೆದುಕೊಂಡರು.

ಎರಡನೇ ಬಾರಿಗೆ ಪೀಠದ ಸಮೀಪದಲ್ಲೇ ಹೋಮ-ಹವನ

ಎರಡನೇ ಬಾರಿಗೆ ಪೀಠದ ಸಮೀಪದಲ್ಲೇ ಹೋಮ-ಹವನ

ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ವ್ಯವಸ್ಥಾಪನಾ ಸಮಿತಿ ಮೂಲಕ ತಾತ್ಕಲಿಕವಾಗಿ ನೇಮಿಸಿದ್ದ ಇಬ್ಬರು ಅರ್ಚಕರು ಪಾದುಕೆಗಳಿಗೆ ಪೂಜೆ ಸಲ್ಲಿಸಿದ್ದರು. ಹಾಗಾಗಿ ಪೀಠದೊಳಗೆ ತೆರಳಿದ ಭಕ್ತರು ಖುಷಿಯಿಂದ ಪಾದುಕೆಗಳ ದರ್ಶನ ಪಡೆದು ಹೊರಬಂದರು.

ರಾಜ್ಯದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅವರ ಸಚಿವ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಡಿ.ಬಿ.ಚಂದ್ರೇಗೌಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗ ದತ್ತಪೀಠದ ಆವರಣದಲ್ಲಿ ವ್ಯವಸ್ಥೆಗೊಳಿಸಿದ್ದ ಹೋಮದಲ್ಲಿ ಸಚಿವರು ಪಾಲ್ಗೊಂಡಿದ್ದರು. ನಂತರದ ವರ್ಷದಲ್ಲಿ ಪೀಠದ ಹೊರಭಾಗದ ಶೆಡ್‍ನಲ್ಲಿ ಹೋಮಗಳಿಗೆ ಅವಕಾಶ ಕಲ್ಪಿಸಲಾಗುತಿತ್ತು. ಆದರೆ ಈ ಬಾರಿ ಮೊದಲ ಬಾರಿಗೆ ಇಬ್ಬರು ಅರ್ಚಕರನ್ನು ಪೂಜೆ ಸಲ್ಲಿಸಲು ಸರಕಾರ ನೇಮಿಸಿದ್ದರಿಂದ ಈ ವರ್ಷ ಎರಡನೇ ಬಾರಿಗೆ ಪೀಠದ ಸಮೀಪದಲ್ಲೇ ದತ್ತಾತ್ರೇಯನ ವಿಗ್ರಹ ಇರಿಸಿ ಹೋಮ ಹವನ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶಾಸಕ ಸಿ.ಟಿ.ರವಿ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಸೇರಿದಂತೆ ವಿವಿಧ ಗಣ್ಯರು ಭಾಗಿಯಾಗಿದ್ದರು.

ಇಸ್ಲಾಂ ಹುಟ್ಟುವ ಮುಂಚೆಯೇ ಇಲ್ಲಿ ದತ್ತ ಪೀಠ ಇತ್ತು

ಇಸ್ಲಾಂ ಹುಟ್ಟುವ ಮುಂಚೆಯೇ ಇಲ್ಲಿ ದತ್ತ ಪೀಠ ಇತ್ತು

ಇನ್ನು ದತ್ತ ಪೀಠದ ಜಾಗದ ವಿವಾದದ ಬಗ್ಗೆ ಮಾತನಾಡಿದ ಶಾಸಕ ಸಿ.ಟಿ ರವಿ, ದತ್ತಪೀಠ ಬೇರೆ, ಬಾಬಾಬುಡನ್ ದರ್ಗಾವೇ ಬೇರೆ ಇದ್ದು, ಈ ವಿಚಾರದಲ್ಲಿ ವಾಸ್ತವಿಕ ಸತ್ಯ ಎತ್ತಿಹಿಡಿಯುವ ಸಲುವಾಗಿ ತನಿಖೆ ನಡೆಸುವಂತೆ ಒತ್ತಾಯಿಸಿ ಸದ್ಯದಲ್ಲೇ ಮುಖ್ಯಮಂತ್ರಿಗಳು ಹಾಗೂ ಸಚಿವರ ಬಳಿ ನಿಯೋಗ ತೆರಳಲಿದೆ ಎಂದರು.

ದತ್ತಾತ್ರೇಯ ಕ್ಷೇತ್ರ ಸಾವಿರಾರು ವರ್ಷ ಪೂರ್ವದ್ದು, ಇಸ್ಲಾಂ ಹುಟ್ಟುವ ಮುಂಚೆಯೇ ಇಲ್ಲಿ ದತ್ತಪೀಠ ಇತ್ತು. ಬಾಬಾಬುಡನ್ ದರ್ಗಾ ವಾಸ್ತಕವಿಕವಾಗಿ ಬೇರೆ ಇದೆ. ಮುಂದೆ ಸತ್ಯವನ್ನು ಎತ್ತಿ ಹಿಡಿಯಬೇಕು ಇದಕ್ಕಾಗಿ ನಿವೃತ್ತ ನ್ಯಾಯಾಧೀಶರು ಅಥವಾ ಹಿರಿಯ ಅಧಿಕಾರಿಗಳ ತಂಡ ರಚಿಸಿ ದಾಖಲೆಗಳನ್ನು ಪರಿಶೀಲನೆ ಮಾಡಲಿ ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.

ಎಲ್ಲಾ ದಾಖಲೆಗಳನ್ನು ಮೀರಿ ವಿಜೃಂಭಿಸಿದ ಶೋಭಾಯಾತ್ರೆ

ಎಲ್ಲಾ ದಾಖಲೆಗಳನ್ನು ಮೀರಿ ವಿಜೃಂಭಿಸಿದ ಶೋಭಾಯಾತ್ರೆ

ಬಾಬಾಬುಡನ್ ದರ್ಗಾ ಜಾಗರ ಹೋಬಳಿ ನಾಗೇನಹಳ್ಳಿಸರ್ವೇ ನಂ.57 ರಲ್ಲಿದೆ. ದತ್ತಪೀಠ ಕ್ಷೇತ್ರ ಜಾಗರಹೋಬಳಿ ಇನಾಂ ದತ್ತಾತ್ರೇಯ ಪೀಠದ ಸರ್ವೇ ನಂ.195 ರಲ್ಲಿದೆ ಈ ನ್ಯಾಯವನ್ನು ಎತ್ತಿ ಹಿಡಿಯಬೇಕು. ಸದ್ಯದಲ್ಲೇ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಮುಜರಾಯಿ ಸಚಿವರನ್ನು ಭೇಟಿ ಮಾಡುತ್ತೇವೆ ಅವರು ನಿರ್ಣಯ ತೆಗೆದುಕೊಳ್ಳಲಿ. ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ನೋಡಿ ಮುಂದಿನ ಹೋರಾಟವನ್ನು ನಿರ್ಣಯಿಸುತ್ತೇವೆ. ನ್ಯಾಯಾಲಯದ ಮೂಲಕವೂ ಹೋರಾಟವನ್ನು ಮುಂದುವರಿಸುತ್ತೇವೆ ಎಂದರು.

ಎಲ್ಲಾ ದಾಖಲೆಗಳನ್ನು ಮೀರಿ ವಿಜೃಂಭಿಸಿದ ಶೋಭಾಯಾತ್ರೆ

ಎಲ್ಲಾ ದಾಖಲೆಗಳನ್ನು ಮೀರಿ ವಿಜೃಂಭಿಸಿದ ಶೋಭಾಯಾತ್ರೆ

ಇನ್ನು ಈ ಬಾರಿ ದತ್ತಪೀಠಕ್ಕೆ ಸರ್ಕಾರ ಹಿಂದೂ ಅರ್ಚಕರನ್ನು ನೇಮಿಸಿರುವುದು ಭಕ್ತಾಧಿಗಳಲ್ಲಿ ಖುಷಿ ತಂದಿದೆ. ಅದನ್ನು ವರ್ಣಿಸಲು ಸಾಧ್ಯವಿಲ್ಲ. ಅರ್ಚಕರು ಗುಹೆಯೊಳಗಡೆ ಪೂಜೆ ಮಾಡಿ, ಪ್ರಾಣಪ್ರತಿಷ್ಠೆ ಮಾಡಿ, ಅರ್ಚನೆ, ಗಣಪತಿ ಹೋಮ, ದತ್ತ ಹೋಮಗಳನ್ನು ನೆರವೇರಿಸಿದ್ದಾರೆ. ದತ್ತ ಜಯಂತಿ ಹಿನ್ನೆಲೆ ನಡೆದ ಶೋಭಾಯಾತ್ರೆ ಕೂಡ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ ಅದ್ಧೂರಿಯಾಗಿ ನಡೆದಿದೆ. ಎಲ್ಲದಕ್ಕೂ ದತ್ತಾತ್ರೇಯನ ಕೃಪೆ ‌ಇದೆ ಎಂದು ಸಿ.ಟಿ ರವಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+