ಪತಿ ಪರ ವಕಾಲತ್ತು ವಹಿಸಿದ ಸಿ.ಟಿ.ರವಿ ಪತ್ನಿ ಪಲ್ಲವಿ

Recommended Video

      ಸಿ ಟಿ ರವಿ ಪತ್ನಿ ಪಲ್ಲವಿ , ತಮ್ಮ ಪತಿಗೆ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಹೇಳಿದ್ದೇನು ? | Oneindia Kannada

      ಚಿಕ್ಕಮಗಳೂರು, ಆಗಸ್ಟ್ 27: "ಸಿ.ಟಿ.ರವಿ ಅವರು ಸಚಿವ ಸ್ಥಾನ, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಬೇಕೆಂದು ಎಂದೂ ಕೇಳಿರಲಿಲ್ಲ. ಪಕ್ಷ ನೀಡಿದ ಜವಾಬ್ದಾರಿಯನ್ನು ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು" ಎಂದು ವಕಾಲತ್ತು ವಹಿಸಿಕೊಂಡಿದ್ದಾರೆ ಸಚಿವ ಸಿ.ಟಿ ರವಿ ಪತ್ನಿ ಪಲ್ಲವಿ.

      ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಸಿ.ಟಿ.ರವಿ ಅವರು ಸದಾ ಜನರ ನಡುವೆ ಇರುವ ಕೆಲಸವನ್ನು ಅಪೇಕ್ಷೆ ಪಡುತ್ತಿದ್ದರು. ಆದರೆ ಈಗ ಅವರಿಗೆ ಏನನ್ನಿಸುತ್ತಿದೆಯೋ ಗೊತ್ತಿಲ್ಲ. ಸಚಿವರಾಗಿರುವ ಅವರು, ಯಾವುದೇ ಖಾತೆ ಕೊಟ್ಟರೂ ಕೆಲಸ ನಿರ್ವಹಿಸಬೇಕು. ಉಳಿದದ್ದು ಅವರಿಗೆ ಬಿಟ್ಟ ವಿಚಾರ" ಎಂದಿದ್ದಾರೆ.

      ಸೋಮವಾರ ರಾತ್ರಿ ಯಡಿಯೂರಪ್ಪ 17 ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಚಿಕ್ಕಮಗಳೂರು ಶಾಸಕ, ಹಿರಿಯ ನಾಯಕ ಸಿ.ಟಿ.ರವಿಗೆ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಖಾತೆಗಳ ಹೊಣೆ ವಹಿಸಲಾಗಿದೆ. ಆದರೆ ಪ್ರಬಲ ಖಾತೆಯ ನಿರೀಕ್ಷೆಯಲ್ಲಿದ್ದ ಅವರಿಗೆ ಇದರಿಂದ ಬೇಸರವಾಗಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿಯೂ ಇತ್ತು.

      CT Ravi Wife Pallavai Spoke In Chikkamgaluru Regarding Portfolio Distribution

      "ಖಾಸಗಿ ಕೆಲಸಕ್ಕೆ ಸಾಮಾನ್ಯವಾಗಿ ಸರ್ಕಾರಿ ವಾಹನವನ್ನು ಬಳಸುವುದಿಲ್ಲ, ಈ ಕಾರಣಕ್ಕಾಗಿ ನಿನ್ನೆ ಸರ್ಕಾರಿ ವಾಹನವನ್ನು ವಾಪಸ್ಸು ಕಳುಹಿಸಿರಬಹುದು ಅಷ್ಟೆ. ಸಿಎಂ ಯಡಿಯೂರಪ್ಪ ಮತ್ತು ಸಿ.ಟಿ. ರವಿ ಅವರ ನಡುವೆ ಯಾವುದೇ ಭಿನ್ನಾಪ್ರಾಯವಿಲ್ಲ" ಎಂದು ಪಲ್ಲವಿ ಅವರು ಸ್ಪಷ್ಟಪಡಿಸಿದ್ದಾರೆ.

      "ಪಕ್ಷಕ್ಕೆ ಯಡಿಯೂರಪ್ಪ, ಸಿ.ಟಿ.ರವಿ ಎಲ್ಲಾರೂ ಒಂದೇ ,ಪಕ್ಷಕ್ಕೆ ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಾರೆ. ಯಾವುದೇ ಖಾತೆ ವಿಚಾರವನ್ನು ನನ್ನೊಂದಿಗೆ ಚರ್ಚಿಸಿಲ್ಲ' ಎಂದೂ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+