ಬಿಜೆಪಿ ಜನಾರ್ದನ ರೆಡ್ಡಿಯವರ ಮೇಲೆ ಅವಲಂಬಿತವಾಗಿಲ್ಲ:ಶಾಸಕ ಸಿ.ಟಿ.ರವಿ
Recommended Video

ಬಿಜೆಪಿ ಜನಾರ್ಧನ ರೆಡ್ಡಿಯವರ ಮೇಲೆ ಅವಲಂಬಿತವಾಗಿಲ್ಲ:ಶಾಸಕ ಸಿ.ಟಿ.ರವಿ | Oneindia Kannada
ಚಿಕ್ಕಮಗಳೂರು, ನವೆಂಬರ್.07: ಜನಾರ್ದನ ರೆಡ್ಡಿಯ ಮತ್ತೊಂದು ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಜನಾರ್ದನ ರೆಡ್ಡಿಯವರ ಮೇಲೆ ಅವಲಂಬಿತವಾಗಿ ರಾಜಕೀಯ ಮಾಡುತ್ತಿಲ್ಲ. ಅವರ ಮೇಲೆ ಮೊಕದ್ದಮೆ ದಾಖಲಾದ ನಂತರ ಪಾರ್ಟಿ ಅವರಿಗೆ ಯಾವುದೇ ಜವಾಬ್ದಾರಿ ಕೊಟ್ಟಿಲ್ಲ.
ಕಳೆದ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲೂ ಅವರ ಪಾತ್ರವಿರಲಿಲ್ಲ.
ಜನಾರ್ದನ ರೆಡ್ಡಿಯವರಿಗೆ ಏನೋ ಮಾಡಿರುವುದರಿಂದ ಬಿಜೆಪಿಯನ್ನು ಮಣಿಸುತ್ತೇವೆ ಅಂತ ಕಾಂಗ್ರೆಸ್-ಜೆಡಿಎಸ್ ನವರು ಹೊಂಚು ಹಾಕಿದ್ದಾರೆ. ಆದರೆ ಬಿಜೆಪಿ ಜನಾರ್ದನ ರೆಡ್ಡಿಯವರ ಮೇಲೆ ಅಲಂಬಿತವಾಗಿರೋ ಪಾರ್ಟಿಯಲ್ಲ ಅಂತ ಅವರಿಗೆ ಅರ್ಥವಾಗುತ್ತದೆ ಎಂದು ರವಿ ಟೀಕಿಸಿದ್ದಾರೆ.

ಬಿಜೆಪಿಯನ್ನ ಮಣಿಸುವ ಕಾರಣಕ್ಕೆ ಜನಾರ್ದನ ರೆಡ್ಡಿಯವರನ್ನ ಟಾರ್ಗೆಟ್ ಮಾಡಿದ್ದರೆ ಅದು ಅವರಿಗೆ ಬಿಟ್ಟಿದ್ದು, ಅದನ್ನು ರೆಡ್ಡಿ ಎದುರಿಸುತ್ತಾರೆ ಎಂದ ರವಿ ಅವರು ಪ್ರಕರಣದ ಹಿಂದೆ ಹೆದರಿಸುವ ಪಿತೂರಿ ಇರಬಹುದು ಎಂದು ಆರೋಪಿಸಿದ್ದಾರೆ.












Click it and Unblock the Notifications